45 ವರ್ಷದ ಪತ್ನಿಯನ್ನು 21ರ ಯುವಕನಿಗೆ ಧಾರೆ ಎರೆದ ಪತಿರಾಯ!: ಕೊನೆಗೂ ಒಂದಾದ ಲವರ್ಸ್​ | Lovers

dk - 2025-06-20T135237.320
Published on

Lovers: ಹೌದು, 45 ವರ್ಷದ ತನ್ನ ಪತ್ನಿಯನ್ನು 21ರ ಯುವಕ(ಆಕೆಯ ಲವರ್​​) ಜತೆ ಮದುವೆ ಮಾಡಿಸಿಕೊಟ್ಟಿರುವ ಅಪರೂಪದ ಘಟನೆ ಜಾರ್ಖಂಡ್‌ನ ಪಾಕುರ್ ಜಿಲ್ಲೆಯ ಹಿರಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಘಘರ್ಜನಿ ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಈ ವಿವಾಹದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ಎರಡು ಮಕ್ಕಳ ತಾಯಿಯಾಗಿರುವ 45 ವರ್ಷದ ಮಹಿಳೆಯೊಬ್ಬರು ತಮ್ಮ 21 ವರ್ಷದ ಗೆಳೆಯನನ್ನು ವಿವಾಹವಾದರು. ಇದು ಅವರ ಮೊದಲ ಪತಿಯ ಸಮ್ಮುಖದಲ್ಲಿಯೇ ನಡೆದಿದೆ.

ಮಾಹಿತಿಯ ಪ್ರಕಾರ, ಮಹಿಳೆ ಮತ್ತು ಯುವಕ ಕಳೆದ ಕೆಲವು ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ವಿಷಯ ಗ್ರಾಮದಲ್ಲಿ ಬೆಳಕಿಗೆ ಬಂದಾಗ, ಸಮುದಾಯದಲ್ಲಿ ಗದ್ದಲ ಉಂಟಾಗಿದೆ. ಇನ್ನು ಈನ ವಿಷಯ ಊರ ಪಂಚಾಯಿತಿಗೆ ತಿಳಿಸಿದ್ದಾರೆ.

ಮಧ್ಯಪ್ರವೇಶಿಸಿದ ಗ್ರಾಮ ಪಂಚಾಯಿತಿ ಮುಖಂಡರು, ಆಕೆಯ ಪತಿಯ ನಿರ್ಧಾರ ಏನು ಆಗಿರುತ್ತದಯೇ ಅದೇ ಪಂಚಾಯಿತಿ ನಿರ್ಧಾರ ಎಂದು ತಿಳಿಸಿದೆ.

ಪಂಚಾಯತ್ ವೇದಿಕೆಯಲ್ಲಿ, ಮಹಿಳೆಯ ಮೊದಲ ಪತಿ ಸ್ವತಃ ಮುಂದೆ ಬಂದು, ಸಾಮಾಜಿಕ ಪದ್ಧತಿಗಳ ಪ್ರಕಾರ, ತನ್ನ ಹೆಂಡತಿಯ ಹಣೆಯ ಮೇಲಿನ ಸಿಂಧೂರವನ್ನು ಒರೆಸಿ, ಬಳೆಗಳನ್ನು ತೆಗೆದು ಸಭೆಯ ಮುಂದೆ ಇಟ್ಟನು. ನಂತರ, ಅದೇ ವೇದಿಕೆಯಲ್ಲಿ, ಅವನು ತನ್ನ ಹೆಂಡತಿಯನ್ನು ಅವಳ ಪ್ರಿಯಕರನಿಗೆ ಮದುವೆ ಮಾಡಿದನು. ಗ್ರಾಮಸ್ಥರು ಈ ಮದುವೆಯಲ್ಲಿ ಭಾಗವಹಿಸಿದರು. ಇಡೀ ದೃಶ್ಯವು ಕ್ಯಾಮೆರಾದಲ್ಲಿ ದಾಖಲಾಗಿದೆ. ಇದು ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net