ಬಾಕಿ ಸಂಬಳ ನೀಡದ ಧಾರಾವಾಹಿ ನಿರ್ಮಾಪಕನ ಮನೆ ಮುಂದೆ ಕಲಾವಿದರ ಮೌನ ಧರಣಿ!

In-Pictures
Published on

ಲಾಕ್​ಡೌನ್​ ಹಿನ್ನೆಲೆಯಲ್ಲಿ ಸಿನಿಮಾ ಇಂಡಸ್ಟ್ರಿ ಜತೆಗೆ ಕಿರುತೆರೆ ಕ್ಷೇತ್ರಕ್ಕೂ ಹೊಡೆತ ಬಿದ್ದಿದೆ. ಈಗಾಗಲೇ ಸಾಕಷ್ಟು ಕಲಾವಿದರು ಕೆಲಸ ಇಲ್ಲದೆ, ಪರ್ಯಾಯ ಬೇರೆ ಬೇರೆ ಕೆಲಸಗಳಲ್ಲಿ ನಿರತರಾಗಿದ್ದಾರೆ. ಒಂದಷ್ಟು ಸೀರಿಯಲ್​ ತಂಡಗಳು ಕಲಾವಿದರಿಗೆ ಸಂಬಳವನ್ನೂ ನೀಡದೆ, ಕರೊನಾ ನೆಪದಲ್ಲಿ ದಿನಗಳನ್ನು ಮುಂದೂಡುತ್ತಲೇ ಬಂದಿವೆ. ಇದೀಗ ಹಾಗೆ ಸಂಬಳ ಮತ್ತು ನೀಡಬೇಕಿದ್ದ ಬಾಕಿ ಮೊತ್ತ ಸಿಗದೆ ಪರದಾಡುತ್ತಿದ್ದ ಕಲಾವಿದರೆಲ್ಲ, ನಿರ್ಮಾಪಕನ ಮನೆ ಮುಂದೆ ಮೌನ ಧರಣಿಗೆ ಕರೆಕೊಟ್ಟಿವೆ.

ಹೌದು, ಹಿಂದಿಯ ‘ಹಮಾರಿ ಬಹು ಸಿಲ್ಕ್’ ಧಾರಾವಾಹಿಯ ನಟ ಜಾನ್​ ಖಾನ್​ ಮತ್ತು ಧಾರಾವಾಹಿಯ ಇನ್ನೂ ಕೆಲಸವರು ಸೇರಿ ಮಾಸ್ಕ್​ ಧರಿಸಿ ನಮ್ಮ ಸಂಬಳ ನಮಗೆ ನೀಡಿ ಎಂಬ ಫಲಕ ಹಿಡಿದುಕೊಂಡು ಧರಣಿ ಮಾಡುತ್ತಿದ್ದಾರೆ. ದೇವಯಾನಿ ರಾಲೆ, ಸುಧಾಂಶು ತ್ರಿಪಾಠಿ, ಜ್ಯೋತಿ ಗುಪ್ತಾ ಈ ಧಾರಾವಾಹಿಯನ್ನು ಜಂಟಿಯಾಗಿ ನಿರ್ಮಾಣ ಮಾಡಿದ್ದು, ದೇವಯಾನಿ ಮನೆ ಬಳಿ ಕಲಾವಿದರು ಮತ್ತು ತಾಂತ್ರಿಕ ವರ್ಗದ ಕೆಲವರು ಪ್ರತಿಭಟನೆ ಮಾಡುತ್ತಿದ್ದಾರೆ.

ಸದ್ಯ ಫೋನ್​ ಸ್ವಿಚ್​ ಆಫ್​ ಮಾಡಿ ಮನೆಯಲ್ಲಿಯೇ ಇರುವ ದೇವಯಾನಿ, ಕಲಾವಿದರ ಬೇಡಿಕೆಗೆ ಸ್ಪಂದಿಸಿಲ್ಲ. ಇನ್ನೊಂದು ಅಚ್ಚರಿಯ ಸಂಗತಿ ಏನೆಂದರೆ, ಕಲಾವಿದರಿಗೆ ಆದಾಯ ಇಲ್ಲದಕ್ಕೆ, ಇದೇ ಧಾರಾವಾಹಿಯ ಇನ್ನೋರ್ವ ನಟಿ ವಿಟ್ಲಾನಿ ರಾಕಿ ಹಬ್ಬದ ಪ್ರಯುಕ್ತ ರಾಕಿ ಮಾಡಿ ಹಣಕಾಸಿನ ಕೊರತೆಯನ್ನು ನೀಗಿಸಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net