'ವಿಶ್ ಮೀ ಗುಡ್ ಲಕ್' ಎಂದು ಹೃತಿಕ್ ರೋಷನ್ ಹೇಳಿದ್ದು ಯಾರಿಗೆ?

New Project (18)
Published on

ಅಸ್ಸಾಂ: ಫೈಟರ್ ಸಿನಿಮಾ ಘೋಷಣೆ ಆದಾಗಿನಿಂದ ಹೃತಿಕ್ ರೋಷನ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನನ್ನು ಸ್ಕ್ರೀನ್ ಮೇಲೆ ನೋಡಲು ಕಾಯುತ್ತಿದ್ದಾರೆ. ಸಿದ್ದಾರ್ಥ ಆನಂದ ನಿರ್ದೇಶಿಸುತ್ತಿರುವ ಫೈಟರ್​​ನಲ್ಲಿ ದೀಪಿಕಾ ಪಡುಕೋಣೆ, ಅನಿಲ್ ಕಪೂರ್ ನಟಿಸುತ್ತಿದ್ದಾರೆ. ಬ್ಯಾಂಗ್ ಬ್ಯಾಂಗ್ ಮತ್ತು ವಾರ್ ಸಿನಿಮಾಗಳ ಯಶಸ್ಸಿನ ನಂತರ ಹೃತಿಕ್ ಮತ್ತು ಸಿದ್ದಾರ್ಥ ಆನಂದರ ಮೂರನೆ ಸಿನಿಮಾ ಫೈಟರ್.

2024ರ ಗಣರಾಜ್ಯೋತ್ಸವದ ವಾರಾಂತ್ಯಕ್ಕೆ ಸಿನಿಮಾ ಬಿಡುಗಡೆ ಆಗಲಿದೆ ಎಂದು ಫೈಟರ್ ಸಿನಿಮಾ ತಂಡ ಘೋಷಿಸಿದೆ. 2023 ರ ನವೆಂಬರ್ 15ಕ್ಕೆ ಹೃತಿಕ್ ಫೈಟರ್ ಸಿನಿಮಾ ಶೂಟಿಂಗ್​ಗಾಗಿ ಅಸ್ಸಾಂಗೆ ತೆರಳಿದರು.

ಶೂಟಿಂಗ್ ಬೆನ್ನಲ್ಲೆ, ಹೃತಿಕ್​ರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅದರಲ್ಲಿ ಹೃತಿಕ್ 'ವಿಶ್ ಮೀ ಗುಡ್ ಲಕ್' ಎಂದು ಅಭಿಮಾನಿಗಳಿಗೆ ಹೇಳುತ್ತಿದ್ದಾರೆ. ಅದರ ಜತೆ ಅಭಿಮಾನಿಗಳು ಅಸ್ಸಾಂನ ರೋಡ್​ಗಳಲ್ಲಿ ಹೃತಿಕ್​ರನ್ನು ಕಂಡು ತಮ್ಮ ನೆಚ್ಚಿನ ನಟನನ್ನು ಹುರಿದುಂಬಿಸಿದ್ದಾರೆ.

ಫೈಟರ್ ಸಿನಿಮಾ ಭಾರತದ ಮೊದಲ ಏರಿಯಲ್ ಆಕ್ಷ್ಯನ್ ಡ್ರಾಮಾ ಅಗಿದೆ. ವರದಿಗಳ ಪ್ರಕಾರ ಹತ್ತು ದಿನಗಳ ಕಾಲ ಅಸ್ಸಾಂನಲ್ಲಿ ಶೂಟಿಂಗ್ ಮಾಡಲಾಗುವುದು. ಡಬಲ್ ನೆಗೆಟಿವ್ (ಡಿಎನ್ಇಜಿ) ಎಂಬ ಪ್ರತಿಷ್ಠಿತ ವಿಎಫ್ಎಕ್ಸ್ ಕಂಪನಿ ಫೈಟರ್ ಸಿನಿಮಾ ತಂಡವನ್ನು ಸೇರಲಿದೆ. ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net