More

    ‘ಕೆಜಿಎಫ್ 3’ಯಲ್ಲಿ ಹೃತಿಕ್ ರೋಷನ್?; ಯೋಚನೆ ಇದೆ, ಚಿತ್ರ ಸದ್ಯಕ್ಕಿಲ್ಲ ಎಂದ ನಿರ್ಮಾಪಕರು..

    ‘ಕೆಜಿಎಫ್ ಚಾಪ್ಟರ್ 2’ ಚಿತ್ರದ ಕ್ಲೈಮ್ಯಾಕ್ಸ್ ನೋಡಿ ಅದಾಗಲೇ ಅಭಿಮಾನಿಗಳು ‘ಕೆಜಿಎಫ್ ಚಾಪ್ಟರ್ 3’ ಕುರಿತ ಲೆಕ್ಕಾಚಾರ ಪ್ರಾರಂಭಿಸಿದ್ದಾರೆ. ಅದರ ನಡುವೆಯೇ ಬಾಲಿವುಡ್ ಅಂಗಳದಲ್ಲಿ ‘ಕೆಜಿಎಫ್ 3’ ಚಿತ್ರದಲ್ಲಿ ಬಾಲಿವುಡ್ ಸೂಪರ್​ಸ್ಟಾರ್ ಹೃತಿಕ್ ರೋಷನ್ ನಟಿಸಲಿದ್ದಾರೆ ಎಂಬ ಗುಲ್ಲೆದ್ದಿದೆ.

    ಆದರೆ, ಈ ಕುರಿತು ಸಂದರ್ಶನವೊಂದರಲ್ಲಿ ಸ್ಪಷ್ಟನೆ ನೀಡಿರುವ ನಿರ್ಮಾಪಕ ವಿಜಯ್ ಕಿರಗಂದೂರು, ‘ನಮಗಂತೂ ಆಲೋಚನೆ ಇದೆ. ಆದರೆ, ಈ ವರ್ಷ ‘ಕೆಜಿಎಫ್ 3’ ಪ್ರಾರಂಭ ಆಗುವುದಿಲ್ಲ. ಪ್ರಶಾಂತ್ ನೀಲ್, ‘ಸಲಾರ್’ನಲ್ಲಿ ಬಿಜಿ ಇದ್ದಾರೆ. ಯಶ್ ಮುಂದಿನ ಚಿತ್ರ ಇನ್ನೇನು ಘೋಷಣೆ ಮಾಡಲಿದ್ದಾರೆ. ಅವರಿಬ್ಬರ ಡೇಟ್ಸ್ ನೋಡಿಕೊಂಡು ನಾವು ‘ಕೆಜಿಎಫ್ 3’ ಪ್ರಾರಂಭಿಸಬೇಕು. ಅವರ ಡೇಟ್ಸ್ ಸಿಕ್ಕ ಬಳಿಕ ಉಳಿದ ತಾರಾಗಣ, ತಂಡದ ಬಗ್ಗೆ ಮಾತನಾಡಬಹುದು. ಸದ್ಯಕ್ಕೆ ಎಲ್ಲವೂ ‘ಕೆಜಿಎಫ್ 3’ ಯಾವಾಗ ಪ್ರಾರಂಭವಾಗುತ್ತದೆ ಎಂಬುದನ್ನೇ ಅವಲಂಬಿಸಿದೆ. ಈಗಿನ ಪರಿಸ್ಥಿತಿಯಲ್ಲಿ ನಾವು ಸರಿಯಾಗಿ ಹೇಳಲು ಸಾಧ್ಯವಿಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

    231 ಕೋಟಿ ರೂಪಾಯಿ ಗಳಿಕೆ: 6ನೇ ವಾರಾಂತ್ಯಕ್ಕೆ ‘ಕೆಜಿಎಫ್ 2’ ಬರೋಬ್ಬರಿ 1231 ಕೋಟಿ ರೂಪಾಯಿ ಬಾಚಿಕೊಂಡಿದೆ. ಹಿಂದಿ ಒಂದರಲ್ಲೇ ರಾಕಿ ಭಾಯ್ ಗಳಿಕೆ 433 ಕೋಟಿ ರೂಪಾಯಿ ದಾಟಿದೆ. ಬಿಡು ಗಡೆಯಾದ ಒಂದೂವರೆ ತಿಂಗಳ ನಂತರವೂ, ‘ಕೆಜಿಎಫ್ 2’ ಪ್ರತಿದಿನ ಒಂದರಿಂದ ಎರಡು ಕೋಟಿ ರೂಪಾಯಿ ಗಳಿಸುತ್ತಲೇ ಇದೆ.

    ಉಡುಪಿಯಲ್ಲೊಂದು ಪವಾಡ! ಕಳೆದುಹೋಗಿದ್ದ ಚಿನ್ನದ ಸರ ವಾಪಸ್ ಕೊಡಿಸಿದ ದೇವರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts