ಬೆಂಗಳೂರು: ಕಳೆದ ಎರಡು ದಿನದಿಂದ ಎಲ್ಲೆಡೆ ಭಾರಿ ಮಳೆ ಸುರಿಯುತ್ತಿದೆ. ನಗರದಲ್ಲಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಂಗಳೂರು ಮಾತ್ರವಲ್ಲದೆ ಮಳೆರಾಯ ಈಗ ಕರ್ನಾಟಕದ ಬಹುಭಾಗಗಳಿಗೆ ಥಂಡಿ ಹೊಡೆಸಿದ್ದಾನೆ. ಈ ಮಳೆಯಲು ( Rainy Weather Tips ) ನೀವೆನಾದ್ರು ಬೆಚ್ಚಗೆ ಇರಲು ಏನು ಮಾಡಬೇಕು ಎಂದು ಯೋಚಿಸುತ್ತಿದ್ದರೆ ನಾವು ನಿಮಗೆ ಕೆಲವು ಸಲಹೆ ನೀಡುತ್ತೇವೆ…
1) ಚಳಿಗೆ ಥರಥರ ನಡುಗುವ ಬದಲು ದಪ್ಪಗಿನ ಸ್ವೆಟ್ಟರ್, ಕೋಟ್ ಅಥವಾ ನಿಮ್ಮಿಷ್ಟದ ದಪ್ಪಗಿನ ಮತ್ತು ಬೆಚ್ಚಗಿನ ಉಡುಗೆ ತೊಡಿ. ಕೈಕಾಲುಗಳಿಗೆ ಶೂ ಅಥವಾ ಸಾಕ್ಸ್ ಧರಿಸಿರಿ.
2) ಬಿಸಿಬಿಸಿ ಕಾಫಿ, ಟೀ ಅಥವಾ ಹಾಲನ್ನಾದರೂ ಕುಡಿಯಿರಿ. ಶೀತ ನೆಗಡಿಯಾಗಬಹುದು ಎನ್ನುವ ಭಯ ಇರುವವರು ಕಷಾಯ ಕುಡಿಯಿರಿ. ಚಳಿಯೆಂದು ಸಿಗರೇಟ್, ಬೀಡಿ ಸೇವನೆಯೂ ಬೇಡ.
3) ತುಂಬಾ ಚಳಿಯಾಗುತ್ತಿದ್ದರೆ ಕೊಂಚ ಬೆಂಕಿ ಹಾಕಿ. ಆ ಬೆಂಕಿಯ ಮುಂದೆ ಕುಳಿತುಕೊಳ್ಳುವುದು ಒಂಥರ ಮಜವಾದ ಅನುಭವ ನೀಡುತ್ತದೆ
4) ಮಾಡಲು ಏನು ಕೆಲಸವಿಲ್ಲದಿದ್ದರೆ ಈ ಮಳೆಗಾಲದಲ್ಲಿ ಬೆಚ್ಚನೆ ಗುಡಿಹೊದ್ದು ಮಲಗಬಹುದು. ಆದರೆ, ದಿನಪೂರ್ತಿ ಹೀಗೆ ಇರುವ ಬದಲು ಒಳ್ಳೆಯ ರೋಮ್ಯಾಟಿಂಕ್ ಸಿನಿಮಾಗಳನ್ನು ನೋಡಿ..
5) ಮಳೆನಾಡು, ಕರಾವಳಿಯಲ್ಲಿ ಹಳಸಿನ ಹಪ್ಪಳ, ಸೆಂಡಿಗೆ ಎಂದೆಲ್ಲ ಬಿಸಿಬಿಸಿ ಕುರುಂಕುರುಂ ತಿಂಡಿಗಳಿಗೆ ಬರವಿಲ್ಲ. ಉಳಿದೆಡೆ ಚುರುಮುರಿ, ಮೆಣಸಿನ ಕಾಯಿ ಬಚ್ಚಿ, ಬೋಂಡ ಮಾಡಿ ಮಳೆಗಾಲದಲ್ಲಿ ಬಿಸಿಬಿಸಿಯಾದ ಅನುಭವ ಪಡೆಯಬಹುದು.
6) ಬಿಸಿಬಿಸಿಯಾದ ಆಹಾರ ಸೇವಿಸಿ. ಬಿಸಿಬಿಸಿಯಾದ ಆಹಾರ ಸಿಕ್ಕರಂತೂ ಸ್ವರ್ಗ.
7) ಮಳೆ ಬರುತ್ತಿದ್ದರೆ ನೀವು ಮೊಬೈಲ್ ಬದಿಗಿಟ್ಟು ಬನಿಮಗೆ ಇಷ್ಟವಾಗುವ ಒಂದು ಪುಸ್ತಕ ಓದುತ್ತ ಕಾಲ ಕಳೆಯಿರಿ…
ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಭಾರೀ ಮಳೆ ; ಟ್ರಾಫಿಕ್ ಜಾಮ್, ವಾಹನ ಸವಾರರು ಪರದಾಟ Heavy Rain