ಬಾಯಿ ದುರ್ವಾಸನೆಗೆ ಕಾರಣಗಳೇನು? ಇದರಿಂದ ಮುಕ್ತರಾಗೋದು ಹೇಗೆ? ಇಲ್ಲಿದೆ ಉಪಯುಕ್ತ ಮಾಹಿತಿ | Bad Breath

ವಿಜಯವಾಣಿ - 2025-06-27T091202.650
Published on

Bad Breath: ಬಾಯಿ ದುರ್ವಾಸನೆ ಒಂದು ಸಣ್ಣ ಹಾಗೂ ಸಾಮಾನ್ಯ ಸಮಸ್ಯೆ ಎಂದೇ ಹೇಳಬಹುದು. ಆದರೆ, ನಮ್ಮಲ್ಲಿ ಹಲವರು ಇದನ್ನು ದೊಡ್ಡ ಸಮಸ್ಯೆ ಎಂದು ಭಾವಿಸುತ್ತಾರೆ. ಅಸಲಿಗೆ ಬಾಯಿ ದುರ್ವಾಸನೆ ಬಹುತೇಕರಲ್ಲಿ ಕಾಡುವ ಸಾಮಾನ್ಯ ಸಮಸ್ಯೆಯಾಗಿದೆ. ಇದು ಹೆಚ್ಚಿನ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡದಿದ್ದರೂ ಒಂದು ರೀತಿ ಮಾನಸಿಕ ಕಿರಿಕಿರಿಯಾಗಿ ಕಾಡುತ್ತದೆ. ಬಾಯಿಂದ ಬರುವ ದುರ್ನಾತದಿಂದ ನಾಲ್ಕು ಜನರ ಮುಂದೆ ನಿಂತು ಮಾತನಾಡಲು ತೀರ ಮುಜುಗರ ಪಡುವಂತಹ ಪರಿಸ್ಥಿತಿ ಹಲವರದ್ದು. ಇದರಿಂದ ಮುಕ್ತಿ ಹೊಂದುವುದು ಹೇಗೆ? ಅಸಲಿಗೆ ಏಕೆ ಬಾಯಿಂದ ವಾಸನೆ ಬರುತ್ತದೆ? ಇದರ ಹಿಂದಿರುವ ಕಾರಣಗಳೇನು ಎಂಬ ನಿಮ್ಮ ಹತ್ತಾರು ಪ್ರಶ್ನೆಗೆ ಇಲ್ಲಿದೆ ನೋಡಿ ಉತ್ತರ.

ಸ್ವಾಭಾವಿಕವಾಗಿ, ಈ ಸಮಸ್ಯೆ ಇರುವವರಿಗೆ ಬರುವ ಮುಖ್ಯ ಸಂದೇಹವೇನು ಎಂದರೆ, ತಮ್ಮ ಹಲ್ಲು ಮತ್ತು ನಾಲಿಗೆಯನ್ನು ಚೆನ್ನಾಗಿ ಸ್ವಚ್ಛಗೊಳಿಸುತ್ತಿದ್ದರೂ ಬಾಯಿ ದುರ್ವಾಸನೆ ಏಕೆ? ಎಂದು. ಇದಕ್ಕೆ ಕಾರಣ ಅವರ ಹಲ್ಲುಗಳ ಶುಚಿತ್ವ ಮಾತ್ರವಲ್ಲ, ಅವರ ಅಭ್ಯಾಸಗಳು ಮತ್ತು ನಿರ್ಲಕ್ಷ್ಯಗಳು ಕೂಡ ಕಾರಣ ಎನ್ನಲಾಗಿದೆ. ಹಾಗಿದ್ದರೆ, ಬಾಯಿ ದುರ್ವಾಸನೆಗೆ ಕಾರಣಗಳೇನು? ಅದನ್ನು ತಡೆಗಟ್ಟುವುದು ಹೇಗೆ? ಎಂಬುದರ ಮಾಹಿತಿ ಈ ಕೆಳಕಂಡಂತಿದೆ ಅನುಸರಿಸಿ.

ಏನ್ನೆಲ್ಲ ಕಾರಣ?

1. ಸರಿಯಾಗಿ ಬ್ರಶ್ ಮಾಡಿ:ನಾವು ಸೇವಿಸುವ ಆಹಾರದ ಸಣ್ಣ ಸಣ್ಣ ಪದಾರ್ಥಗಳು ನಮ್ಮ ಹಲ್ಲುಗಳ ಚಡಿಗಳಲ್ಲಿ ಸೇರಿಕೊಳ್ಳುತ್ತವೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾ ಉತ್ಪತ್ತಿಗೆ ಕಾರಣವಾಗುತ್ತದೆ ಮತ್ತು ಬಾಯಿ ದುರ್ವಾಸನೆಯನ್ನು ಉಂಟು ಮಾಡುತ್ತದೆ. ಆದ್ದರಿಂದ, ನಾವು ನಮ್ಮ ಹಲ್ಲುಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು.

2. ನಾಲಿಗೆ ಸ್ವಚ್ಛಗೊಳಿಸುವುದು ಮುಖ್ಯ: ನಾಲಿಗೆಯ ಮೇಲೆ ಬಿಳಿ ಲೇಪನ ಉಂಟಾಗುವುದು ದುರ್ವಾಸನೆಗೆ ಮತ್ತೊಂದು ಪ್ರಮುಖ ಕಾರಣ. ನಾಲಿಗೆಯ ಮೇಲೆ ಬ್ಯಾಕ್ಟೀರಿಯಾಗಳು ಬೆಳೆಯುವುದರಿಂದ ದುರ್ವಾಸನೆ ಉಂಟಾಗುತ್ತದೆ. ಆದ್ದರಿಂದ, ಹಲ್ಲುಜ್ಜುವಾಗ, ನೀವು ನಿಮ್ಮ ನಾಲಿಗೆಯನ್ನು ಚೆನ್ನಾಗಿ ಉಜ್ಜಿ, ಸ್ವಚ್ಛಗೊಳಿಸುವುದು ಒಳಿತು.

ಇದನ್ನೂ ಓದಿ: ಬದಲಾಗಿವೆ ಕ್ರಿಕೆಟ್​ ಕರಾರು!: ಎಂಜಲು ಹಚ್ಚಿದರೆ ಚೆಂಡು ಬದಲಿಲ್ಲ, ಡಿಆರ್​ಎಸ್​ ನಿಯಮಕ್ಕೂ ತಿದ್ದುಪಡಿ3. ಒಣ ಬಾಯಿ: ನಮ್ಮ ಬಾಯಿ ಯಾವಾಗಲೂ ತೇವವಾಗಿರಬೇಕು ಮತ್ತು ಲಾಲಾರಸ ಹರಿಯುತ್ತಿರಬೇಕು. ಲಾಲಾರಸದ ಮಟ್ಟ ಕಡಿಮೆಯಾದಾಗ, ಮೌಖಿಕ ನೈರ್ಮಲ್ಯ ಕಡಿಮೆಯಾಗುತ್ತದೆ. ಇದು ಬಾಯಿಯಲ್ಲಿ ಬ್ಯಾಕ್ಟೀರಿಯಾಗಳ ಹೆಚ್ಚಳಕ್ಕೆ ಕಾರಣವಾಗಿ, ದುರ್ವಾಸನೆಗೆ ಕಾರಣವಾಗುತ್ತದೆ.

4. ದಂತ ಸಮಸ್ಯೆ: ದುರ್ಬಲ ಹಲ್ಲುಗಳು, ಕುಳಿಗಳು ಮತ್ತು ಒಸಡುಗಳ ಸೋಂಕುಗಳು ಸಹ ದುರ್ವಾಸನೆಗೆ ಕಾರಣವಾಗಬಹುದು. ಅದಕ್ಕಾಗಿಯೇ ಹಲ್ಲಿನ ಆರೋಗ್ಯವು ತುಂಬಾ ಮುಖ್ಯ.

ಇದನ್ನೂ ಓದಿ: ಸರ್ಕಾರಿ ಕೆಪಿಎಸ್ ಶಾಲೆ ದಾಖಲಾತಿಗೆ ಲಂಚ !; ಈ ಮಟ್ಟಕ್ಕೆ ಭ್ರಷ್ಟಾಚಾರಕ್ಕೆ ಇಳಿದದ್ದು ಒಳ್ಳೆಯ ಲಕ್ಷಣವಲ್ಲ; ದಿಶಾ ತ್ರೈಮಾಸಿಕ ಸಭೆಯಲ್ಲಿ ಸಂಸದ ಬೊಮ್ಮಾಯಿ ಆತಂಕ5. ಆಹಾರ ಪದ್ಧತಿ: ಆಹಾರದಲ್ಲಿ ಬೆಳ್ಳುಳ್ಳಿ, ಈರುಳ್ಳಿ ಮತ್ತು ಮಾಂಸವನ್ನು ಅತಿಯಾಗಿ ತಿನ್ನುವುದರಿಂದಲೂ ದುರ್ವಾಸನೆ ಸಮಸ್ಯೆ ಕಾಡುತ್ತದೆ.

6. ಧೂಮಪಾನ/ಮದ್ಯಪಾನ: ಧೂಮಪಾನ ಮಾಡುವವರು/ಮದ್ಯಪಾನ ಮಾಡುವವರಲ್ಲಿ ದುರ್ವಾಸನೆ ಹೆಚ್ಚಾಗಿ ಕಂಡುಬರುತ್ತದೆ. ಇವು ಬಾಯಿಯ ನೈರ್ಮಲ್ಯದ ಮೇಲೆ ತೀವ್ರ0 ಪರಿಣಾಮ ಬೀರುತ್ತವೆ.

7. ಜೀರ್ಣಕಾರಿ ಸಮಸ್ಯೆ: ಜೀರ್ಣಾಂಗ ವ್ಯವಸ್ಥೆಯಲ್ಲಿನ ಸಮಸ್ಯೆಗಳು ಸಹ ದುರ್ವಾಸನೆಗೆ ಕಾರಣವಾಗಬಹುದು. ಆಮ್ಲೀಯತೆ ಮತ್ತು ಅಜೀರ್ಣದಂತಹ ಸಮಸ್ಯೆಗಳು ಬಾಯಿ ದುರ್ವಾಸನೆಗೆ ಕಾರಣವಾಗುತ್ತವೆ.

ದುರ್ವಾಸನೆಯನ್ನು ತಡೆಗಟ್ಟಲು ಏನು ಮಾಡಬೇಕು

  • ಬೆಳಗ್ಗೆ-ರಾತ್ರಿ ಎರಡು ಬಾರಿ ಹಲ್ಲುಜ್ಜಿ. ಫ್ಲೋರೈಡ್ ಪೇಸ್ಟ್ ಬಳಸುವುದು ಉತ್ತಮ.
  • ನಾಲಿಗೆಯ ದುರ್ವಾಸನೆಗೆ ಮುಖ್ಯ ಕಾರಣ ನಾಲಿಗೆಯ ಮೇಲಿನ ಬ್ಯಾಕ್ಟೀರಿಯಾ. ಆದ್ದರಿಂದ, ನಿಮ್ಮ ನಾಲಿಗೆಯನ್ನು ಸ್ವಚ್ಛಗೊಳಿಸಲು ಮರೆಯಬೇಡಿ.
  • ಹಲ್ಲುಗಳ ನಡುವೆ ಸಿಲುಕಿರುವ ಆಹಾರವನ್ನು ತೆಗೆದುಹಾಕಲು ಫ್ಲೋಸ್ ಅನ್ನು ಬಳಸಬೇಕು.
  • ಆಗಾಗ್ಗೆ ನೀರು ಕುಡಿಯಬೇಕು. ಆಗ ಮಾತ್ರ ನಿಮ್ಮ ಬಾಯಿಯಲ್ಲಿ ಲಾಲಾರಸದ ಮಟ್ಟವು ಸರಿಯಾದ ಮಟ್ಟದಲ್ಲಿರುತ್ತದೆ.
  • ಸಾಕಷ್ಟು ಹಸಿರು ತರಕಾರಿಗಳು ಮತ್ತು ಹಣ್ಣುಗಳನ್ನು ಸೇವಿಸಿ. ಅತಿಯಾದ ಮಾಂಸ ಸೇವನೆಯಿಂದ ಆದಷ್ಟು ದೂರವಿರುವುದು ಉತ್ತಮ. ಬೆಳ್ಳುಳ್ಳಿ ಮತ್ತು ಮಾಂಸವನ್ನು ತಿಂದ ನಂತರ ನಿಮ್ಮ ಬಾಯಿಯನ್ನು ಚೆನ್ನಾಗಿ ಸ್ವಚ್ಛಗೊಳಿಸಿ.
  • ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ಪ್ರತಿ 6 ತಿಂಗಳಿಗೊಮ್ಮೆ ದಂತವೈದ್ಯರನ್ನು ಭೇಟಿ ಮಾಡುವುದು ಉತ್ತಮ,(ಏಜೆನ್ಸೀಸ್).

ವಿಶೇಷ ಸೂಚನೆ: ಲೇಖನದಲ್ಲಿ ಉಲ್ಲೇಖಿಸಲಾದ ಸಲಹೆಗಳು ಸಾಮಾನ್ಯ ಮಾಹಿತಿ ಉದ್ದೇಶಗಳಿಗಾಗಿ ಮಾತ್ರ. ನೀವು ಯಾವುದೇ ಪ್ರಶ್ನೆಗಳನ್ನು ಹೊಂದಿದ್ದರೆ, ಯಾವಾಗಲೂ ನಿಮ್ಮ ವೈದ್ಯರನ್ನು ಸಂಪರ್ಕಿಸಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net