ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ Blanketಗಳನ್ನು ಎಷ್ಟು ದಿನಕ್ಕೊಮ್ಮೆ ಒಗೆಯುತ್ತಾರೆ? ರೈಲ್ವೆ ಸಚಿವರು ಕೊಟ್ಟ ಉತ್ತರ ವೈರಲ್​

Train Bedsheet
Published on

ನವದೆಹಲಿ: ನವೆಂಬರ್​ 25ರಿಂದ ಆರಂಭವಾಗಿರುವ ಸಂಸತ್​ ಚಳಿಗಾಲದ ಅಧಿವೇಶನವು (Parliament Winter Session) ಸ್ವಾರಸ್ಯಕರ ಘಟನೆಗಳಿಗೆ ಸಾಕ್ಷಿಯಾಗುತ್ತಿದ್ದು, ಸಾರ್ವಜನಿಕರ ಗಮನ ಸೆಳೆಯುತ್ತಿದೆ. ಸಾಮಾನ್ಯವಾಗಿ ನಾವು ನೋಡಿರುವಂತೆ ಕಲಾಪಗಳಲ್ಲಿ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರು ಸರ್ಕಾರಕ್ಕೆ ಸ್ವಾರಸ್ಯಕರ ಪ್ರಶ್ನೆಗಳನ್ನು ಕೇಳುತ್ತಾರೆ. ಅದೇ ರೀತಿ ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್​ಶೀಟ್​ಅನ್ನು (Blanket) ಎಷ್ಟು ದಿನಗಳಿಗೊಮ್ಮೆ ತೊಳೆಯಲಾಗುತ್ತದೆ ಎಂಬ ಪ್ರಶ್ನೆಗೆ ರೈಲ್ವೆ ಸಚಿವರು ನೀಡಿರುವ ಉತ್ತರ ಎಲ್ಲರ ಗಮನ ಸೆಳೆಯುತ್ತಿದೆ.

ಕಾಂಗ್ರೆಸ್ ಸಂಸದ ಕುಲದೀಪ್ ಇಂದೋರಾ ಪ್ರಶ್ನೆಗೆ ಲೋಕಸಭೆ ಕಲಾಪದಲ್ಲಿ ಉತ್ತರಿಸಿದ ಸಚಿವರು, ರೈಲಿನಲ್ಲಿ ಪ್ರಯಾಣಿಕರಿಗೆ ನೀಡುವ ಹೊದಿಕೆಯನ್ನು (Blanket) ತಿಂಗಳಿಗೊಮ್ಮೆ ತೊಳೆಯಲಾಗುತ್ತದೆ ಮತ್ತು ಹಾಸಿಗೆಯ ಹೊದಿಕೆಯಾಗಿ ಅದರ ಬಳಕೆಗಾಗಿ ಹೆಚ್ಚುವರಿ ಬೆಡ್‌ಶೀಟ್ ಅನ್ನು ಬೆಡ್‌ರೋಲ್ ಕಿಟ್‌ನಲ್ಲಿ ನೀಡಲಾಗುತ್ತದೆ.

Ashwin Vaishnav

ಭಾರತೀಯ ರೈಲ್ವೆಯಲ್ಲಿ ಬಳಸುವ ಕಂಬಳಿಯಂತಹ ಹೊದಿಕೆಯು (Blanket) ಹಗುರವಾಗಿದ್ದು, ತೊಳೆಯಲು ಕೂಡ ಸುಲಭ ಹಾಗೂ ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ನೀಡುತ್ತದೆ. ಯಾಂತ್ರೀಕೃತ ಲಾಂಡ್ರಿ ವ್ಯವಸ್ಥೆ ಇರುವ ಕಾರಣ ಗುಣಮಟ್ಟದ ಯಂತ್ರಗಳ ಬಳಕೆ, ನಿರ್ದಿಷ್ಟ ರಾಸಾಯನಿಕಗಳ ಬಳಕೆ ಸೇರಿದಂತೆ ಪ್ರಯಾಣಿಕರ ಸುರಕ್ಷತೆ ಕಡೆಗೂ ಗಮನಹರಿಸಲಾಗುತ್ತದೆ ಎಂದು ರೈಲ್ವೆ ಸಚಿವ ಅಶ್ವಿನಿ​ ವೈಷ್ಣ್​ವ್​​ (Ashwini Vaishnav) ಉತ್ತರಿಸಿದ್ದಾರೆ.

ಹಾಲಿ ನಡೆಯುತ್ತಿರುವ ಸಂಸತ್​ ಅಧಿವೇಶನದಲ್ಲಿ ಅದಾನಿ ಉದ್ಯಮ ಸಮೂಹಕ್ಕೆ ಸಂಬಂಧಿಸಿದ ಆರೋಪಗಳ ಬಗ್ಗೆ ತಕ್ಷಣದ ಚರ್ಚೆಗೆ ಒಪ್ಪಿಗೆ ನೀಡಲು ಸರ್ಕಾರ ನಿರಾಸಕ್ತಿ ತೋರುತ್ತಿದೆ ಎಂದು ವಿಪಕ್ಷಗಳು ಆರೋಪಿಸಿದ್ದು, ಉಭಯ ಸದನಗಳಲ್ಲಿ ಗದ್ದಲವನ್ನು ಮಾಡಿವೆ. ಆಡಳಿತ ಹಾಗೂ ವಿಪಕ್ಷಗಳ ಸಂಸದರ ನಡುವೆ ಗದ್ದಲ ಉಂಟಾದ ಪರಿಣಾಮ ಉಭಯ ಸದನಗಳಲ್ಲಿ ಕಲಾಪವನ್ನು ಮುಂದೂಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net