WHO: ನೀವು ಪ್ರತಿದಿನ ಸಿಹಿ ತಿನ್ನುತ್ತಿದ್ದೀರಾ? ದಿನಂಪ್ರತಿ ಸಿಹಿತಿಂಡಿಗಳು-ಚಾಕಲೇಟ್ ಸೇರಿದಂತೆ ಸಿಹಿ ಪಾನೀಯಗಳು ಸೇವನೆಯ ಅಭ್ಯಾಸವು ನಿಮ್ಮ ಆರೋಗ್ಯವನ್ನು ಕಹಿಯಾಗಿಸಬಹುದು. ಸಾಮಾನ್ಯವಾಗಿ ಡೈಲಿ ಎಷ್ಟು ಪ್ರಮಾಣದಲ್ಲಿ ಸಿಹಿ ತಿನ್ನಬೇಕು ಎಂದು ಎಂದಾದರೂ ಯೋಚಿಸಿದ್ದೀರಾ? ಹಾಗಾದ್ರೆ ಅಧಿಕ ಸಿಹಿ ಸೇವನೆಯಿಂದ ಅಪಾಯವಿದೆಯೇ? ವಿಶ್ವ ಆರೋಗ್ಯ ಸಂಸ್ಥೆ (WHO) ಹೇಳೊದೇನು? ತಿಳಿಯೋಣ..

WHO ಹೇಳೊದೇನು..?
ವಿಶ್ವ ಆರೋಗ್ಯ ಸಂಸ್ಥೆ(WHO) ಪ್ರಕಾರ, ” ಒಬ್ಬ ವಯಸ್ಕನು ತನ್ನ ದೈನಂದಿನ ಕ್ಯಾಲೋರಿಗಳಲ್ಲಿ 5-10 ಪ್ರತಿಶತ ಮಾತ್ರ ಸಕ್ಕರೆ ಸೇವನೆ ಮಾಡಬೇಕು. ಅಂದರೆ ನೀವು ಪ್ರತಿದಿನ 2000 ಕ್ಯಾಲೋರಿ ಆಹಾರ ಸೇವನೆ ಮಾಡಿದ್ರೆ 25-50 ಗ್ರಾಂ(ಸುಮಾರು 6-12 ಟೀ ಚಮಚಗಳು) ಸಕ್ಕರೆಯನ್ನು ಸೇವಿಸಬಾರದು. ಅಲ್ಲದೆ, ಮಕ್ಕಳಿಗೆ ಇದಕ್ಕಿಂತ ಕಡಿಮೆ ಪ್ರಮಾಣದಲ್ಲಿ ಇರಬೇಕು. ಅಂದರೆ (4-6 ಚಮಚಗಳು ಮಾತ್ರ). ಅಘತಕಾರಿ ವಿಷಯವೆನೆಂದರೆ ಒಂದು ತಂಪುಪಾನೀಯ ಬಾಟಲ್ನಲ್ಲಿ ಸುಮಾರು 35 ಗ್ರಾಂ ಸಕ್ಕರೆ ಇರುತ್ತದೆ. ಇದು ದೈನಂದಿನ ಅವಶ್ಯಕ್ಕಿಂತ ಅಧಿಕವಾಗಿದೆ.”
ಸಿಹಿ-ತಿಂಡಿಗಳು ಆರೋಗ್ಯ ಹಾನಿಯಾಗುತ್ತೆ?
ಸಿಹಿ ನಿಮ್ಮ ನಾಲಿಗೆಗೆ ಪರಿಹಾರ ನೀಡಬಹುದು. ಸಿಹಿ ತಿನ್ನುವುದು ತಪ್ಪಲ್ಲ. ಆದರೆ, ಅದು ನಿಮ್ಮ ದೇಹಕ್ಕೆ ನಿಧಾನವಾಗಿ ವಿಷವಾಗಬಹುದು.
ಮಧುಮೇಹ ಅಪಾಯ: ಅಧಿಕ ಸಕ್ಕರೆ ತಿನ್ನುವುದರಿಂದ ಟೈಪ್-2 ಮಧುಮೇಹ ಅಪಾಯ ಹೆಚ್ಚಾಗುತ್ತದೆ. ಭಾರತದಲ್ಲಿ ಇದಾಗಲೇ 10 ಕೋಟಿಗೂ ಅಧಿಕ ಜನರು ಮಧುಮೇಹದಿಂದ ಬಳಲುತ್ತಿದ್ದಾರೆ.
ಬೊಜ್ಜು: ಸಕ್ಕರೆಯಿಂದ ಖಾಲಿ ಕ್ಯಾಲೋರಿಯಿಂದ ತೂಕ ಹೆಚ್ಚಾಗಲು ಕಾರಣವಾಗುತ್ತದೆ. ಅದ್ರಲ್ಲಿ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ.
ಹೃದ್ರೋಗ: ಹೆಚ್ಚು ಸಕ್ಕರೆ ತಿನ್ನುವುದರಿಂದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟಗಳು ಹೆಚ್ಚಾಗುತ್ತವೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು.
ಇನ್ನು ಸಾಮಾನ್ಯವಾಗಿ ನಮ್ಮ ದೇಶದ ಮನೆಗಳಲ್ಲಿ ಚಹಾ, ಸಿಹಿ-ತಿಂಡಿಗಳು ಹಾಗೂ ಉಪಹಾರದಲ್ಲಿ ಬಳಸುವ ಸಕ್ಕರೆ ಈ ಮಿತಿಯನ್ನು ಮೀರುತ್ತದೆ. ಹಾಗಾದ್ರೆ ಈಗ ಪ್ರಶ್ನೆ ಏನೆಂದ್ರೆ ಸಿಹಿ ಅನ್ನು ಕಂಟ್ರೋಲ್ ಮಾಡೊದೇಗೆ?
ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ: ಚಹಾ ಅಥವಾ ಕಾಫಿಯಲ್ಲಿ ಸಕ್ಕರೆಯ ಪ್ರಮಾಣವನ್ನು ಕ್ರಮೇಣ ಕಡಿಮೆ ಮಾಡಿ. ಒಂದು ಚಮಚದಿಂದ ಪ್ರಾರಂಭಿಸಿ ನಂತರ ಸಕ್ಕರೆ ಇಲ್ಲದೆ ತಿನ್ನಲು ಒಗ್ಗಿಕೊಳ್ಳಿ.
ಲೇಬಲ್ಗಳನ್ನು ಓದಿ: ಪ್ಯಾಕ್ ಮಾಡಿದ ಆಹಾರ ಖರೀದಿಸುವಾಗ, ಲೇಬಲ್ನಲ್ಲಿ ಸಕ್ಕರೆ ಅಂಶವನ್ನು ಪರಿಶೀಲಿಸಿ.
ನೈಸರ್ಗಿಕ ಸಕ್ಕರೆಯನ್ನು ಆರಿಸಿ: ಸಕ್ಕರೆಯ ಬದಲಿಗೆ ಜೇನುತುಪ್ಪ, ಬೆಲ್ಲ ಅಥವಾ ಖರ್ಜೂರವನ್ನು ಬಳಸಿ, ಆದರೆ ಇವುಗಳನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಿ.
ಹಣ್ಣುಗಳನ್ನು ಸೇವಿಸಿ: ಸಿಹಿತಿಂಡಿಗಳ ಬದಲಿಗೆ ಹಣ್ಣುಗಳನ್ನು ಸೇವಿಸಿ, ಅವು ಸಿಹಿಯಾಗಿರುವುದು ಮಾತ್ರವಲ್ಲದೆ ಫೈಬರ್ ಮತ್ತು ವಿಟಮಿನ್‌ಗಳನ್ನು ಸಹ ಒದಗಿಸುತ್ತವೆ.(ಏಜೆನ್ಸೀಸ್)
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ಅಧಿಕ ನೀರು ಕುಡಿಯುವುದರಿಂದ ಈ 6 ದೊಡ್ಡ ಸಮಸ್ಯೆಗಳು ಕಾಡಬಹುದಂತೆ! | Drinking water
ಈ ರೀತಿ ನಿಮ್ಮ ಕಿವಿಗಳು ಸ್ವಚ್ಛಗೊಳಿಸಿ: ಇಲ್ಲಿದೆ ಸುರಕ್ಷಿತವಾದ ಸುಲಭ ಮಾರ್ಗ.. | Clean Ears