ಅಕ್ಕಿನೇನಿ ಕುಟುಂಬ ನೀಡಲು ಮುಂದಾದ ಜೀವನಾಂಶ ಎಷ್ಟು ಗೊತ್ತಾ?! ಏನೆಂದರು ಸಮಂತಾ?

sam
Published on

ಹೈದರಾಬಾದ್: ದಕ್ಷಿಣ ಭಾರತದಲ್ಲಿ ಜನಪ್ರಿಯ ತಾರಾಜೋಡಿಗಳಲ್ಲಿ ಒಂದಾಗಿದ್ದ ಸಮಂತಾ ಮತ್ತು ನಾಗಚೈತನ್ಯ ದಂಪತಿ, ಬೇರೆಯಾಗುವ ನಿರ್ಧಾರವನ್ನು ಶನಿವಾರ(ಅ.2) ಜಾಹೀರುಗೊಳಿಸಿದ್ಧಾಗಿದೆ. ಅವರ ಅಭಿಮಾನಿಗಳು ಈ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿರುವಂತೆಯೇ, ಅವರು ಪರಸ್ಪರ ಒಪ್ಪಿಗೆಯಿಂದ ಪಡೆಯಲಾಗುವ ಡಿವೋರ್ಸ್​ಗೆ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಸುದ್ದಿ ಕೇಳಿಬರುತ್ತಿದೆ.

ಜೊತೆಗೆ, ನಾಲ್ಕು ವರ್ಷದ ದಾಂಪತ್ಯಕ್ಕೆ ಕೊನೆ ಹಾಡುತ್ತಿರುವ ಸಮಂತಾಗೆ ನಾಗಚೈತನ್ಯ ಮತ್ತು ಅವರ ಕುಟುಂಬವು 200 ಕೋಟಿ ರೂ. ಜೀವನಾಂಶ ನೀಡಲು ಮುಂದಾಯಿತು. ಆದರೆ, ಸ್ವಂತ ಶ್ರಮದಿಂದ ಟಾಲಿವುಡ್​ನಲ್ಲಿ ಹೆಸರು ಮಾಡಿರುವ ಸಮಂತಾ, ಈ ಹಣ ತೆಗೆದುಕೊಳ್ಳುವುದಿಲ್ಲ ಎಂದಿದ್ದಾರೆ ಎಂದು ವರದಿಗಳು ತಿಳಿಸಿವೆ.

ಸಮಂತಾ ಈಗ ತಮ್ಮ ವೈಯಕ್ತಿಕ ಸಮಸ್ಯೆಗಳನ್ನು ಬದಿಗೊತ್ತಿ, ಕೆಲಸದ ಬಗ್ಗೆ ಹೆಚ್ಚು ಗಮನ ನೀಡಲು ಬಯಸುತ್ತಿದ್ದಾರೆ. ಕಠಿಣ ಸಮಯವನ್ನು ಎದುರಿಸುತ್ತಿದ್ದರೂ, ತಾವು ಕೈಗೊಂಡಿರುವ ಸಿನಿ ಪ್ರಾಜೆಕ್ಟ್​ಗಳಿಗೆ ಯಾವುದೇ ತೊಂದರೆಯಾಗಬಾರದೆಂಬ ಪ್ರೊಫೆಷನಲಿಸಂ ಹೊಂದಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net