Aadhaar:ಭಾರತದಲ್ಲಿ ವಾಸಿಸಲು ಎಲ್ಲರಿಗೂ ಕೆಲ ದಾಖಲಾತಿಗಳು ಬೇಕಾಗುತ್ತದೆ. ಅಲ್ಲದೆ, ದಿನಂಪ್ರತಿ ಒಂದಲ್ಲ ಒಂದು ಕೆಲಸಕ್ಕೆ ಚಾಲನಾ ಪರವಾನಗಿ, ಮತದಾರರ ಕಾರ್ಡ್, ಪಾಸ್‌ಪೋರ್ಟ್ ಮತ್ತು ಆಧಾರ್ ಕಾರ್ಡ್‌ನಂತಹ ದಾಖಲೆಗಳು ಬೇಕೆಬೇಕಾಗುತ್ತದೆ. ಅದರಲ್ಲೂ ಈ ಆಧಾರ್ ಪ್ರಮುಖ ದಾಖಲೆಯಾಗಿದೆ. ಆಧಾರ್ ಇಲ್ಲದಿದ್ದರೆ ಏನು ಇಲ್ಲ ಎಂಬಂತೆ ನಮ್ಮೆಲ್ಲರಿಗೂ ಭಾಸವಾಗುತ್ತದೆ. ಹೀಗಾಗಿ, ಆಧಾರ್ನಲ್ಲಿ ತಪ್ಪು ನಂಬರ್ ಅಥವಾ ಮಾಹಿತಿ ನೀಡಿದ್ದರೆ ಅದನ್ನು ಎಷ್ಟು ಸಾರಿ ಬದಲಾಯಿಸಬಹುದು? ನೋಡೋಣ ಬನ್ನಿ..

ಎಲ್ಲಾ ದಾಖಲಾತಿಗಳ ಪೈಕಿ ನಮ್ಮ ದೇಶದಲ್ಲಿ ಆಧಾರ್ ಕಾರ್ಡ್ ಶೇ.90ರಷ್ಟು ದೈನಂದಿನ ಜೀವನದಲ್ಲಿ ಬಳಸುವ ಅತ್ಯಂತ ಸಾಮಾನ್ಯ ದಾಖಲೆಯಾಗಿದೆ. ಶಾಲಾ ಕಾಲೇಜುಗಳಲ್ಲಿ ಪ್ರವೇಶ ಪಡೆಯುವುದರಿಂದ ಹಿಡಿದು ಸರ್ಕಾರಿ ಯೋಜನೆ ಪ್ರಯೋಜನಗಳನ್ನು ಪಡೆಯಲು ದೇಶದ 90ರಷ್ಟು ಜನರು ಈ ಆಧಾರ್ ಬಳಸುತ್ತಾರೆ.
ಆಧಾರ್ ಕಾರ್ಡ್ ಮಾಡಿಸುವಾಗ ಜನರು ಹಲವು ಬಾರಿ ತಪ್ಪು ಮಾಹಿತಿಯನ್ನು ನಮೂದಿಸುತ್ತಾರೆ. ಇದಾದ ನಂತರ, ಅವರು ನಂತರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ ಆಧಾರ್ ಕಾರ್ಡ್‌ನಲ್ಲಿ ಮಾಹಿತಿಯನ್ನು ನವೀಕರಿಸಲು ಯುಐಡಿಎಐ(UIDAI) ಒಂದು ಆಯ್ಕೆಯನ್ನು ಒದಗಿಸುತ್ತದೆ.
ನಮ್ಮ ವಿವರಗಳನ್ನು ಎಷ್ಟು ಸಾರಿ ಬದಲಾಯಿಸಬಹುದು?
ಯುಐಡಿಎಐ ಪ್ರಕಾರ, ಆಧಾರ್ನಲ್ಲಿ ಕೆಲ ಬದಲಾಗಿಸಲಾದ ಅಥವಾ ನವೀಕರಿಸಲಾಗದ ಮಾಹಿತಿಗಳಿವೆ. ಇವುಗಳಲ್ಲಿ ಜನ್ಮ ದಿನಾಂಕದಲ್ಲಿನ ಬದಲಾವಣೆ, ಲಿಂಗದಲ್ಲಿನ ಬದಲಾವಣೆಳನ್ನು ಒಮ್ಮೆ ಮಾತ್ರ ಬದಲಾವಣೆ ಮಾಡಬಹುದು.
ಆದರೆ, ನಮ್ಮ ಸೇರಿದ ವಿಳಾಸ ಮತ್ತು ಮಾಹಿತಿಯನ್ನು ಎಷ್ಟು ಸಾರಿ ಬೇಕಾದರೂ ಬದಲಾಯಸಿಕೊಳ್ಳಬಹುದು ಮತ್ತು ನವೀಕರಿಸಬಹುದು. ಇದಕ್ಕೆ ಯುಐಡಿಎಐ ಯಾವುದೇ ನಿರ್ಬಂಧ ಮತ್ತು ಮಿತಿಯನ್ನು ಇಟ್ಟಿಲ್ಲ. ಹೀಗೆ ಮೊಬೈಲ್ ನಂಬರ್ ಕೂಡ ಬದಲಾಗಿಸಲು ಮೀತಿ ಇಲ್ಲ ಎಂದು ನಿಮಗೆ ತಿಳಿಸುತ್ತಿದ್ದೇವೆ. ಈ ಬದಲಾವಣೆಗಳನ್ನು ಮಾಡಲು ನೀವು ಆಧಾರ್ ಕೇಂದ್ರಕ್ಕೆ ಹೋಗಬೇಕಾಗುತ್ತದೆ.(ಏಜೆನ್ಸೀಸ್)