More

    30 ಸೆಕೆಂಡ್​ ಸಿನಿಮಾ ಪ್ರಚಾರಕ್ಕೆ ರೀಲ್ಸ್​ ಸ್ಟಾರ್​ ಅಮಲಾ ಕೇಳಿದ ಸಂಭಾವನೆ ಕೇಳಿ ಶಾಕ್​ ಆದ ನಿರ್ದೇಶಕ!

    ಚೆನ್ನೈ: ಸಾಮಾಜಿಕ ಜಾಲತಾಣವನ್ನು ಹೆಚ್ಚಾಗಿ ಬಳಸುವವರಿಗೆ ಅಮಲಾ ಶಾಜಿ ಬಗ್ಗೆ ಹೆಚ್ಚಾಗಿ ಹೇಳಬೇಕಿಲ್ಲ. ಇನ್​ಸ್ಟಾಗ್ರಾಂ ಮತ್ತು ಫೇಸ್​ಬುಕ್​ ರೀಲ್ಸ್​ನಲ್ಲಿ ಹಾಗೂ ಯೂಟ್ಯೂಬ್​ ಶಾರ್ಟ್​ನಲ್ಲಿ ಅಮಲಾ ಹಾವಳಿ ಜೋರಾಗಿಯೇ ಇರುತ್ತದೆ. ಇನ್​ಸ್ಟಾಗ್ರಾಂನಲ್ಲಿ ಬರೋಬ್ಬರಿ 4 ಮಿಲಿಯನ್​ಗೂ ಅಧಿಕ ಫಾಲೋವರ್ಸ್​ ಹೊಂದಿರುವ ಅಮಲಾ, ಕೇವಲ ರೀಲ್ಸ್​ನಿಂದ ಮಾತ್ರವಲ್ಲ ಸಿನಿಮಾ ಪ್ರಚಾರಗಳನ್ನು ಮಾಡುವ ಮೂಲಕ ಹಣ ಸಂಪಾದನೆ ಮಾಡುತ್ತಾರೆ.

    ಕೇರಳದ ತ್ರಿವೆಂಡ್ರಮ್​ ಮೂಲದ ಅಮಲಾ ಅವರು ಅನೇಕ ಬಾರಿ ಸಿನಿಮಾ ವೇದಿಕೆಗಳಲ್ಲೂ ಕಾಣಿಸಿಕೊಂಡಿದ್ದಾರೆ. ಜಾಲತಾಣದಲ್ಲಿ ಆಕೆಯ ಖ್ಯಾತಿ ಸೆಲೆಬ್ರಿಟಿ ಪಟ್ಟವನ್ನು ತಂದುಕೊಟ್ಟಿದೆ. ಆದರೆ, ಇದೀಗ ತಮಿಳು ಚಿತ್ರರಂಗದ ಯುವ ನಟ ಪಿರ್ಯಾನ್, ಅಮಲಾ ವಿರುದ್ಧ ಗಂಭೀರ ಆರೋಪವೊಂದನ್ನು ಮಾಡಿದ್ದಾರೆ.

    Amala Shaji 2

    ಪಿರ್ಯಾನ್​ ನಟ ಮಾತ್ರವಲ್ಲ, ನಿರ್ದೇಶಕ ಮತ್ತು ಗೀತ ರಚನೆಕಾರ ಕೂಡ. ತಮ್ಮ ನಿರ್ದೇಶನದ ಅರಣಮ್​ ಸಿನಿಮಾ ಪ್ರಚಾರದಲ್ಲಿ ತೊಡಗಿಕೊಂಡಿರುವ ಪಿರ್ಯಾನ್​, ಕೇವಲ 30 ಸೆಕೆಂಡ್​ ಸಿನಿಮಾ ಪ್ರಚಾರಕ್ಕಾಗಿ ಅಮಲಾ ಬರೋಬ್ಬರಿ 2 ಲಕ್ಷ ರೂಪಾಯಿ ಕೇಳಿದರು ಎಂದು ಆರೋಪಿಸಿದ್ದಾರೆ. ಈ ಪ್ರಮಾಣದ ಹಣದ ಬೇಡಿಕೆ ಕೇಳಿ ನನ್ನ ತಲೆ ಈಗಲೂ ಸುತ್ತುತ್ತಿದೆ ಎಂದಿದ್ದಾರೆ.

    ಭಾರಿ ಹಣಕ್ಕೆ ಬೇಡಿಕೆ ಇಟ್ಟ ಅಮಲಾ ವಿರುದ್ಧ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಇದರ ನಡುವೆ ಕೆಲವರು ಅಮಲಾ ಪರ ಬ್ಯಾಟ್​ ಬೀಸಿದ್ದಾರೆ. ತನ್ನ ಸಂಭಾವನೆಯನ್ನು ನಿರ್ಧರಿಸುವ ಹಕ್ಕು ಅಮಲಾಗೆ ಇದೆ. ಅದನ್ನು ಕೇಳಿ ಇಷ್ಟವಾಗದಿದ್ದರೆ ಅಲ್ಲಿಗೆ ಬಿಟ್ಟು ಹೋಗಬಹುದು ಎಂದಿದ್ದಾರೆ. ಅಲ್ಲದೆ, ಈ ವಿಚಾರವನ್ನು ಪ್ರಚಾರಕ್ಕಾಗಿ ನಿರ್ದೇಶಕರು ಹೆಚ್ಚು ಎಳೆಯುವ ಅಗತ್ಯವಿಲ್ಲ. ಕೇಳಿದ ಸಂಭಾವನೆಯನ್ನು ಪಾವತಿಸಲು ಸಾಧ್ಯವಾಗದ ಕಾರಣ ಪ್ರಚಾರದ ಸಮಯದಲ್ಲಿ ಅಮಲಾ ಅವರನ್ನು ನೀವೇಕೆ ಅವಮಾನ ಮಾಡಬೇಕು ಎಂದು ಅಮಲ ಪರ ಮಾತನಾಡಿದ್ದಾರೆ.

    ಇನ್ನೂ ಅಮಲಾ ಅವರು ಕೇರಳದವರಾಗಿದ್ದರು ಸಹ ತಮಿಳುನಾಡಿನಲ್ಲೂ ತುಂಬಾ ಪ್ರಸಿದ್ಧಿ ಪಡೆದಿದ್ದಾರೆ. ಈ ಕಾರಣಕ್ಕಾಗಿ ಸಾಕಷ್ಟು ನಿರ್ದೇಶಕರು ಮತ್ತು ನಿರ್ಮಾಪಕರು ತಮ್ಮ ಚಿತ್ರದ ಪ್ರಚಾರಕ್ಕಾಗಿ ಅಮಲಾ ಬಳಿ ಬರುತ್ತಾರೆ. ಅಮಲಾಗೆ ಕೇಳಿದಷ್ಟು ಹಣ ಕೊಡಲು ನಿಮ್ಮಿಂದಾಗದಿದ್ದರೆ ಬೇರೆಯವರನ್ನು ನೋಡಿಕೊಳ್ಳಿ ಎಂದು ನೆಟ್ಟಿಗರೊಬ್ಬರು ಕಾಮೆಂಟ್​ ಮಾಡಿದ್ದಾರೆ.

    Amala Shaji 2

    ಇಲ್ಲಿ ಒಂದು ಚಿತ್ರವನ್ನು ನಿರ್ದೇಶಿಸಿ ಬಿಡುಗಡೆ ಮಾಡುವ ಸಂಕಷ್ಟದ ಬಗ್ಗೆ ಯಾರೊಬ್ಬರು ಮಾತನಾಡುವುದಿಲ್ಲ. ಚಿತ್ರದ ನಾಯಕಿಯೇ ಇಷ್ಟೊಂದು ಸಂಭಾವನೆ ಪಡೆಯದಿದ್ದಾಗ ಸೋಶಿಯಲ್​ ಮೀಡಿಯಾ ಸ್ಟಾರ್​ಗಳು ಇಷ್ಟೊಂದು ಹಣ ಕೇಳುವುದೆಂದರೆ ಏನು ಅರ್ಥ? ಸಂಭಾವನೆ ಮಾತ್ರವಲ್ಲದೆ, ವಿಮಾನ ಟಿಕೆಟ್ ಸಹ ಕೇಳಿದ್ದಾರೆ ಎಂದು ಅಮಲಾ ವಿರುದ್ಧ ಪಿರ್ಯಾನ್​ ಆರೋಪ ಮಾಡಿದ್ದಾರೆ. (ಏಜೆನ್ಸೀಸ್​)

    ಏನಾಗುತ್ತಿದೆ RCB ಕ್ಯಾಂಪ್​ ಒಳಗೆ? ಭಾರಿ ಸಂಶಯ ಹುಟ್ಟುಹಾಕಿದ ಸಿರಾಜ್ ಇನ್​ಸ್ಟಾ ಸ್ಟೋರಿ!

    ಫಲ ಕೊಡದ ಹೋರಾಟ: ಕುಸ್ತಿಗೆ ಗುಡ್​ಬೈ ಹೇಳಿದ ಒಲಿಂಪಿಕ್ ಪದಕ​ ವಿಜೇತೆ ಸಾಕ್ಷಿ ಮಲ್ಲಿಕ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts