

ಕೊಕ್ಕರ್ಣೆ: ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಆಶ್ರಯದಲ್ಲಿ ಪ್ರಭು ಫ್ಯಾಮಿಲಿ ಚಾರಿಟೆಬಲ್ ಟ್ರಸ್ಟ್ ಬೆಂಗಳೂರು, ಜಿ.ಎಸ್.ಬಿ.ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಸಹಯೋಗದೊಂದಿಗೆ ದಾನಿಗಳ ಸಹಕಾರದಿಂದ ಸುಲೋಚನಾ ಮತ್ತು ನಾಗೇಶ್ ಪ್ರಭು ಕಾಜ್ರಳ್ಳಿ ಅವರಿಗೆ ಕೊಡುಗೆಯಾಗಿ ನೀಡಲ್ಪಡುವ ಗೃಹ ಪಾಂಚಜನ್ಯ ಹಸ್ತಾಂತರ ಭಾನುವಾರ ಜರುಗಿತು.
ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಉಡುಪಿ ಜಿಲ್ಲೆ ಅಧ್ಯಕ್ಷ ಜಿ.ಸತೀಶ್ ಹೆಗ್ಡೆ ಕೋಟ ಅಧ್ಯಕ್ಷತೆ ವಹಿಸಿದ್ದರು. ಮಹೇಶ್ ಭಟ್ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು. ಉದ್ಯಮಿ ಉಮಾ ಮತ್ತು ಶಿವಾನಂದ ಭಂಡಾರ್ಕರ್ ದಂಪತಿ ಗೃಹ ಉದ್ಘಾಟಿಸಿದರು. ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಮಾರ್ಗದರ್ಶಕ ಚೇಂಪಿ ರಾಮಚಂದ್ರ ಅನಂತ ಭಟ್ ಮನೆಯ ಕೀಲಿ ಕೈ ಹಸ್ತಾಂತರಿಸಿದರು.
ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ಸಂಚಾಲಕ ಆರ್.ವಿವೇಕಾನಂದ ಶೆಣೈ, ಲೆಕ್ಕಪರಿಶೋಧಕ ಎಸ್.ಎಸ್.ನಾಯಕ್, ವೈಜಯಂತಿ ಕಾಮತ್, ಶಾಲಿನಿ ಅರವಿಂದ ಪ್ರಭು, ಪ್ರಕಾಶ್ ಪ್ರಭು ಶಿವಮೊಗ್ಗ, ಗೋಕುಲದಾಸ ಭಟ್, ರಾಮದಾಸ ಕಾಮತ್ ತೀರ್ಥಹಳ್ಳಿ, ಅಶೋಕ್ ಪ್ರಭು, ಜಿಎಸ್‌ಬಿ ಸೇವಾ ಸಂಘ ಸಾಹೇಬರಕಟ್ಟೆ ಶಿರಿಯಾರ ಅಧ್ಯಕ್ಷ ಗಾವಳಿ ನಾರಾಯಣ ಶೆಣೈ ಮತ್ತಿತರರು ಉಪಸ್ಥಿತರಿದ್ದರು. ಮಧುವನ ಮಾಧವ ಹೆಗ್ಡೆ ಸ್ವಾಗತಿಸಿದರು. ಮಧುವನ ಗಣೇಶ ನಾಯಕ್ ವಂದಿಸಿದರು. ಸಾಣೂರು ನರಸಿಂಹ ಕಾಮತ್ ನಿರೂಪಿಸಿದರು.
ಪ್ರಭು ಚಾರಿಟೆಬಲ್ ಟ್ರಸ್ಟ್ ಬೆಂಗಳೂರು ಪ್ರವರ್ತಕ ಶಾಲಿನಿ ಅರವಿಂದ ಪ್ರಭು ಜಿಎಸ್‌ಬಿ ಸಮಾಜ ಹಿತರಕ್ಷಣಾ ವೇದಿಕೆ ವತಿಯಿಂದ ಆಯ್ದ 15 ಜನ ಮಹಿಳಾ ಫಲಾನುಭವಿಗಳಿಗೆ ಮಹಿಳಾ ಸಶಕ್ತೀಕರಣದ ಯೋಜನೆಗೆ ಪ್ರೋತ್ಸಾಹ ಧನ ವಿತರಿಸಿದರು. ಗೃಹ ನಿರ್ಮಾಣ ಯೋಜನೆಗೆ ಆರ್ಥಿಕ ಹಾಗೂ ವಸ್ತು ರೂಪದಲ್ಲಿ ಸಹಕರಿಸಿದ ದಾನಿಗಳನ್ನು ಗೌರವಿಸಲಾಯಿತು.