ಮೊಗೇರಿ ಪಂಚಾಂಗ ಅಂತರ್ಜಾಲ ಪ್ರತಿ ಅನಾವರಣ

panchanga
ಪ್ರತಿ ಅನಾವರಣ, ಪಂಚಾಂಗ ಪಠಣ ವಿಷ್ಣು ಸಹಸ್ರನಾಮ ಪಠಣ, ಭಕ್ತಿ ಸುಧೆ ಕಾರ್ಯಕ್ರಮ ನಡೆಯಿತು.
Published on

ಬೈಂದೂರು: ಕೆರ್ಗಾಲು ಗ್ರಾಮದ ಶ್ರೀಕ್ಷೇತ್ರ ಭಗವತಿ ದುರ್ಗಾಪರಮೇಶ್ವರಿ ಸನ್ನಿಧಿಯಲ್ಲಿ ಚಾಂದ್ರಮಾನ ಯುಗಾದಿ ಅಂಗವಾಗಿ ಸೂರ್ಯ ಸಿದ್ಧಾಂತ ಫೌಂಡೇಶನ್ ಪಂಚಾಂಗ ಮಂದಿರ ಮೊಗೇರಿ ಪ್ರಾಯೋಜಕತ್ವದಲ್ಲಿ, ಹೊಸ ಅವತರಣಿಕೆಯ ಮೊಗೇರಿ ಪಂಚಾಂಗ ಅಂತರ್ಜಾಲ ಪ್ರತಿ ಅನಾವರಣ, ಪಂಚಾಂಗ ಪಠಣ ವಿಷ್ಣು ಸಹಸ್ರನಾಮ ಪಠಣ ಮತ್ತು ಭಕ್ತಿ ಸುಧೆ ಕಾರ್ಯಕ್ರಮ ನಡೆಯಿತು.

ಜೋತಿಷ್ಯ ವಿದ್ವಾನ್ ಡಾ.ಭರತ್ ಐತಾಳ್ ವಿಶ್ವಾವಸು ನಾಮ ಸಂವತ್ಸರದ ಪಂಚಾಂಗ ಶ್ರವಣ ಮಾಡಿದರು. ದೇವಳ ಪ್ರಧಾನ ಅರ್ಚಕ ವಿದ್ವಾನ್ ಶ್ರೀಧರ ಭಾಗ್ವತ್ ನೇತೃತ್ವದಲ್ಲಿ ಶ್ರೀ ದುರ್ಗಾಪರಮೇಶ್ವರಿ ಮಹಿಳಾ ಸ್ವಯಂಸೇವಕ ತಂಡದಿಂದ ಶ್ರೀ ವಿಷ್ಣು ಸಹಸ್ರನಾಮ ಪಠಣ ಜರುಗಿತು. ಕಾರ್ಯಕ್ರಮದ ಪ್ರಾಯೋಜಕರಾದ ಮೊಗೇರಿ ಜನಾರ್ದನ ಅಡಿಗ ಮತ್ತು ಅನುಪಮ ಜನಾರ್ದನ ದಂಪತಿಯನ್ನು ದೇವಾಲಯ ಆಡಳಿತ ಮೊಕ್ತೇಸರ ಬಿ.ಎಸ್. ಶ್ಯಾನುಭೋಗ್ ಗೌರವಿಸಿದರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಂದರ ಕೊಠಾರಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net