ಊರಿನ ಸಮಸ್ಯೆಗೆ ಮೊದಲು ಸ್ಪಂದನೆ :ಪಜೀರ್ ಚರ್ಚ್ ಧರ್ಮಗುರು ಜೋಸೆಫ್ ಮಸ್ಕರೇನಸ್ ಸಲಹೆ

Published on

ವಿಜಯವಾಣಿ ಸುದ್ದಿಜಾಲ ಉಳ್ಳಾಲ

ಲೋಕದ ಸಮಸ್ಯೆಗಳ ಬಗ್ಗೆ ಚರ್ಚಿಸುತ್ತಾ ಕೂರುವ ಬದಲು ತಮ್ಮೂರನ್ನು ಸುತ್ತಿ ಜನರ ಸಮಸ್ಯೆ ಪರಿಹರಿಸುವ ಕಾರ್ಯ ಮೊದಲಿಗೆ ನಡೆಯಬೇಕು. ಆ ನಿಟ್ಟಿನಲ್ಲಿ ಟ್ರಸ್ಟ್ ಕಾರ್ಯ ಶ್ಲಾಘನೀಯ ಎಂದು ಪಜೀರ್ ಚರ್ಚ್ ಧರ್ಮಗುರು ಜೋಸೆಫ್ ಮಸ್ಕರೇನಸ್ ಹೇಳಿದರು.

ಮಂಗಳೂರಿನ ಮರ್ಸಿ ಕೇರ್ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಪಜೀರ್ ಗ್ರಾಮದ ಪಾನೇಲದಲ್ಲಿ ಆರ್ಥಿಕವಾಗಿ ಹಿಂದುಳಿದ ಜಾನೆಟ್ ಕುಟುಂಬಕ್ಕೆ ನಿರ್ಮಿಸಲಾದ ಮನೆ ಹಸ್ತಾಂತರದಲ್ಲಿ ಆಶೀರ್ವಚನ ನೀಡಿದರು.

ಆಲ್ ಇಂಡಿಯಾ ಕೆಥೋಲಿಕ್ ಯೂನಿಯನ್ ರಾಜ್ಯಾಧ್ಯಕ್ಷ ಆಲ್ವಿನ್ ಡಿಸೋಜ ಮಾತನಾಡಿ, ಟ್ರಸ್ಟ್ ವತಿಯಿಂದ ಕೇವಲ ಒಂಬತ್ತು ತಿಂಗಳಲ್ಲೇ ಮನೆ ನಿರ್ಮಿಸಿರುವುದು ನಿಜಕ್ಕೂ ಅದ್ಭುತ. ಇದು ಪದಾಧಿಕಾರಿಗಳ ಕಾರ್ಯವೈಖರಿಗೆ ಸಾಕ್ಷಿ. ಅನಗತ್ಯ ಕಾರ್ಯಗಳಿಗೆ ಹಣ ವ್ಯಯಿಸುವ ಬದಲು ಸಂಕಷ್ಟದಲ್ಲಿರುವವರಿಗೆ ನೆರವಾಗುವುದು ಮುಖ್ಯ ಎಂದರು.

ಈ ಸಂದರ್ಭ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದವರನ್ನು ಅಭಿನಂದಿಸಲಾಯಿತು. ಟ್ರಸ್ಟ್ ಅಧ್ಯಕ್ಷ ಮ್ಯಾಕ್ಸಿಂ ಮೈಕಲ್ ಫರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಉದ್ಯಮಿಗಳಾದ ಎಡ್ವರ್ಡ್ ಡಿಸೋಜ, ಗುತ್ತಿಗೆದಾರ ಅನಿಲ್ ಡಿಸೋಜ ಪೆರ್ನಾ, ಅಮ್ಟೂರು ಲಯನ್ಸ್ ಕ್ಲಬ್ ಅಧ್ಯಕ್ಷ ಎಡ್ವಿನ್ ನೊರೊನ್ಹ, ಅಸೈಗೋಳಿ ಮೆರ್ಸಿ ಫ್ರೆಂಡ್ಸ್ ಅಧ್ಯಕ್ಷ ಮೆಲ್ವಿನ್ ರೋಶನ್ ಡಿಸೋಜ, ಫರಂಗಿಪೇಟೆ ಮೊಂತೆ ಮರಿಯಾನೊ ಕಾನ್ವೆಂಟ್ ಧರ್ಮಗುರು ದಿಲ್ ರಾಜ್ ಸಿಕ್ವೇರಾ, ಬಿಕರ್ನಕಟ್ಟೆ ಬಾಲಯೇಸು ಪುಣ್ಯಕ್ಷೇತ್ರದ ನಿರ್ದೇಶಕ ವಂ.ಸ್ಟೀವನ್ ಪಿರೇರಾ, ದೀಪ್ ಫರ್ನಾಂಡಿಸ್, ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ರವೀಂದ್ರ ರೈ ಕಲ್ಲಿಮಾರ್, ಉದ್ಯಮಿ ಲಿಯೋ ಮೆಂಡೋನ್ಸ, ಪಜೀರ್ ಗ್ರಾಪಂ ಉಪಾಧ್ಯಕ್ಷೆ ಫ್ಲೋರಿನ್ ಡಿಸೋಜ, ಕಾಂಗ್ರೆಸ್ ಸೇವಾದಳದ ಅಧ್ಯಕ್ಷ ಅಬೂ ಸಮೀರ್, ಗ್ಯಾರಂಟಿ ಯೋಜನೆಯ ಜಿಲ್ಲಾ ಉಪಾಧ್ಯಕ್ಷೆ ಸುರೇಖಾ ಚಂದ್ರಹಾಸ ಮೊದಲಾದವರು ಉಪಸ್ಥಿತರಿದ್ದರು.

ಟ್ರಸ್ಟ್ ಉಪಾಧ್ಯಕ್ಷ ಜಾನ್ ವಿಕ್ಟರ್ ಮೆಂಡೋನ್ಸ್ ಸ್ವಾಗತಿಸಿದರು. ವಿಕ್ಟರ್ ಮೊಂತೆರೋ ಅಭಿನಂದಿತರ ಹೆಸರು ವಾಚಿಸಿದರು. ರೋಶನ್ ಡಿಸೋಜ ವಂದಿಸಿದರು. ನೋಯೆಲ್ ಲೋಬೋ ಮೊಗರ್ನಾಡು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net