ಬರೆ ಕುಸಿದು ಬಿದ್ದು ಮನೆಗೆ ಹಾನಿ

dhare
ಮುಂಡೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿ ಗುರುವಾರ ಮನೆ ಹಿಂಭಾಗದ ಧರೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದ (ಎ). ಹಾನಿಗೊಂಡ ಮನೆಯ ಭಾಗ (ಬಿ).
Published on

ಪುತ್ತೂರು ಗ್ರಾಮಾಂತರ: ಮುಂಡೂರು ಗ್ರಾಪಂ ವ್ಯಾಪ್ತಿಯ ಸರ್ವೆ ಗ್ರಾಮದ ರೆಂಜಲಾಡಿ ಎಂಬಲ್ಲಿ ಮಂಗಳವಾರ ಮನೆ ಹಿಂಭಾಗದ ಧರೆ ಕುಸಿದು ಬಿದ್ದು ಮನೆಗೆ ಹಾನಿಯಾಗಿದೆ.

ರೆಂಜಲಾಡಿ ನಿವಾಸಿ ಅಬೂಬಕ್ಕರ್ ಮುಸ್ಲಿಯಾರ್ ಎಂಬುವರ ಮನೆ ಹಿಂಬದಿಯ ಧರೆ ಕುಸಿದು ಮನೆ, ಶೌಚಗೃಹದ ಮೇಲೆ ಬಿದ್ದಿದೆ. ಶೌಚಗೃಹದ ಭಾಗ ಹಾನಿಗೊಂಡು, ಮನೆ ಗೋಡೆ ಬಿರುಕುಬಿಟ್ಟಿದೆ. ಆ ಭಾಗದಲ್ಲಿದ್ದ ವಸ್ತುಗಳು ಹಾನಿಗೊಂಡಿದೆ. ಘಟನಾ ಸ್ಥಳಕ್ಕೆ ಗ್ರಾಮ ಆಡಳಿತಾಧಿಕಾರಿ ಉಮೇಶ್ ಕಾವಡಿ, ಗ್ರಾಮ ಸಹಾಯಕ ಹರ್ಷಿತ್ ನೇರೋಳ್ತಡ್ಕ, ಗ್ರಾಪಂ ಸದಸ್ಯ ಮಹಮ್ಮದ್ ಆಲಿ, ಕಮಲೇಶ್ ಸರ್ವೆದೋಳಗುತ್ತು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಪಾಯದ ಸ್ಥಿತಿಯಲ್ಲಿ 2 ಮನೆ

ಒಳಮೊಗ್ರು ಗ್ರಾಮದ ಕುಂಬ್ರ ಸಮೀಪವಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬಳಿ ಧರೆ ಕುಸಿತವಾಗಿದ್ದು, ಧರೆಯ ಮೇಲ್ಭಾಗದಲ್ಲಿರುವ ಮಹಮ್ಮದ್ ಅಶ್ರಫ್, ಹಸನ್ ಫಕ್ರುದ್ದೀನ್ ಎಂಬವರ ವಾಸ್ತವ್ಯದ ಎರಡು ಮನೆಗಳಿಗೆ ಅಪಾಯದ ಭೀತಿ ಎದುರಾಗಿದೆ. ಮರ್ಕಝುಲ್ ಹುದಾ ಕಾಲೇಜು ಆಡಳಿತ ಮಂಡಳಿಯವರು ಧರೆ ತೆರವುಗೊಳಿಸಿ ಆ ಭಾಗದಲ್ಲಿ ಸೂಕ್ತವಾದ ತಡೆಗೋಡೆ ನಿರ್ಮಿಸಿಕೊಡದೆ ಇರುವುದರಿಂದ ಇದೀಗ ನಮ್ಮ ಮನೆಗಳಿಗೆ ಅಪಾಯದ ಸ್ಥಿತಿ ಎದುರಾಗಿದ್ದು, ನಾವು ಆತಂಕದಲ್ಲಿ ದಿನಕಳೆಯುವಂತಾಗಿದೆ ಎಂದು ಮನೆಯವರು ಆರೋಪಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net