ಕೇವಲ 6 ನಿಮಿಷ ಶೌಚಾಲಯ ಬಳಸಿದ್ದಕ್ಕೆ ಮಹಿಳೆಗೆ 800 ರೂ. ಚಾರ್ಜ್ ಮಾಡಿದ ಹೋಟೆಲ್‌! Viral post

Viral post

Viral post: ಹೋಟೆಲ್‌ನ ಶೌಚಾಲಯ ಬಳಸಿದ್ದಕ್ಕಾಗಿ ತನ್ನ ತಾಯಿಗೆ 805 ರೂ. ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆಯೊಬ್ಬರು ಹೇಳಿಕೊಂಡಿರುವ ಆಘಾತಕಾರಿ ಘಟನೆ ನಡೆದಿದೆ. ಈ ಕುರಿತು ಮಹಿಳೆ ಲಿಂಕ್ಡ್‌ಇನ್‌ನಲ್ಲಿ ತನ್ನ ದುಃಖಕರ ಅನುಭವವನ್ನು ಹಂಚಿಕೊಂಡಿದ್ದು, ಆ ಪೋಸ್ಟ್ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ.

ರಾಜಸ್ಥಾನದ ಖಾತು ಶ್ಯಾಮ್ ದೇವಸ್ಥಾನದ ಬಳಿಯ ಹೋಟೆಲ್‌ನಲ್ಲಿ ಕೇವಲ ಆರು ನಿಮಿಷಗಳ ಕಾಲ ಶೌಚಾಲಯ ಬಳಸಿದ್ದಕ್ಕಾಗಿ ತನ್ನ ತಾಯಿಗೆ 800 ರೂ. ಶುಲ್ಕ ವಿಧಿಸಲಾಗಿದೆ ಎಂದು ಮಹಿಳೆಯೊಬ್ಬರು ಲಿಂಕ್ಡ್‌ಇನ್‌ನಲ್ಲಿ ದುಃಖಕರ ಅನುಭವವನ್ನು ಹಂಚಿಕೊಂಡಿದ್ದಾರೆ. ಆಕೆಯ ತಾಯಿಯ ತುರ್ತು ಅಗತ್ಯದ ಹೊರತಾಗಿಯೂ, ಹೋಟೆಲ್ ಶುಲ್ಕವನ್ನು ಮನ್ನಾ ಮಾಡಲು ನಿರಾಕರಿಸಿದೆ. ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅನೇಕ ನೆಟ್ಟಿಗರು ಹೋಟೆಲ್‌ನ ಕ್ರಮಗಳನ್ನು ಖಂಡಿಸಿದ್ದಾರೆ.

 

ಇದನ್ನೂ ಓದಿ: ತಾಳಿ ಕಟ್ಟುವ ವೇಳೆ ‘ಇವನು ಅವನಲ್ಲ’ ಎಂದು ಹಸೆಮಣೆಯಿಂದ ಎದ್ದು ಓಡಿದ ವಧು: ಮುಂದೇನಾಯ್ತು ಗೊತ್ತೆ! | Wedding

ಪೋಸ್ಟ್​​​ನಲ್ಲಿ ಏನಿದೆ?
ನನ್ನ ತಾಯಿಯ ಆಸೆಯಂತೆ ರಾಜಸ್ಥಾನದ ಪ್ರಸಿದ್ಧ ದೇವಾಲಯವೊಂದಕ್ಕೆ ಕುಟುಂಬ ಸಮೇತವಾಗಿ ಹೋಗಿದ್ದೆವು. ಅಲ್ಲಿ ಎರಡು ಗಂಟೆಗಳ ಕಾಲ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಹಿಂತಿರುಗುವಾಗ ದಾರಿಯ ಮಧ್ಯದಲ್ಲಿ ನನ್ನ ತಾಯಿ ಇದ್ದಕ್ಕಿದ್ದಂತೆ ತುಂಬಾ ಅಸ್ವಸ್ಥರಾದರು. ವಾಕರಿಕೆ, ಹೊಟ್ಟೆ ನೋವು ಮತ್ತು ವಾಂತಿ ಶುರುವಾಯಿತು. ನಾವು ಸುತ್ತಲೂ ಶೌಚಾಲಯಕ್ಕಾಗಿ ಹುಡುಕಿದೆವು, ಆದರೆ ಬಳಸಲು ಯೋಗ್ಯವಾದ ಶೌಚಾಲಯ ಒಂದೂ ಇರಲಿಲ್ಲ. ದೇವಾಲಯದ 1 ಕಿ.ಮೀ ಸುತ್ತ ಯಾವುದೇ ಶೌಚಾಲಯವಿರಲಿಲ್ಲ. ನನ್ನ ತಾಯಿ ಅವಳು ನೋವಿನಿಂದ ಬಳಲುತ್ತಿದ್ದಳು, ಆಕೆಗೆ ನಿಲ್ಲಲೂ ಸಹ ಕಷ್ಟವಾಗುತ್ತಿತ್ತು.

ಕೇವಲ 6 ನಿಮಿಷ ಶೌಚಾಲಯ ಬಳಸಿದ್ದಕ್ಕೆ ಮಹಿಳೆಗೆ 800 ರೂ. ಚಾರ್ಜ್ ಮಾಡಿದ ಹೋಟೆಲ್‌! Viral post

ನಂತರ ನಾವು ಹತ್ತಿರದ ಹೋಟೆಲ್‌ಗೆ ಹೋಗಿ ನಮಗೆ ರೂಮ್​​ ಬೇಡ, ಕೇವಲ 5-10 ನಿಮಿಷಗಳ ಕಾಲ ಶೌಚಾಲಯ ಮಾತ್ರ ಅಗತ್ಯವಿದೆ ದಯವಿಟ್ಟು ಕೊಡಿ ಎಂದು ಬೇಡಿಕೊಂಡೆವು. ನಂತರ ಅವರು ನನ್ನ ತಾಯಿಯ ಸ್ಥಿತಿಯನ್ನು ನೋಡಿ, ಸರಿ ಎಂದು ಒಪ್ಪಿದರು. ಆದರೆ ಶೌಚಾಲಯ ಬಳಸಲು 800 ರೂ. ಎಂದು ಹೇಳಿದಾಗ ನಮಗೆ ಆಘಾತವಾಯಿತು. ನಾವೆಷ್ಟು ಕೇಳಿಕೊಂಡರೂ ಯಾವುದೇ ಸಹಾನುಭೂತಿ ತೋರಲಿಲ್ಲ, ಕಟ್ಟುನಿಟ್ಟಾಗ ದುಡ್ಡನ್ನು ಪಾವತಿಸಲು ಹೇಳಿದರು. ಆದರೆ ನಮಗೆ ಬೇರೆ ದಾರಿ ಇರಲಿಲ್ಲ. ನನ್ನ ತಂದೆ ಅವರ ಬೇಡಿಕೆಯ ನಂತರ 805 ರೂ. ಬಿಲ್​​ ಹಣ ಕಟ್ಟಿ ಹೋರಟೆವು.

ಕೇವಲ 6 ನಿಮಿಷ ಶೌಚಾಲಯ ಬಳಸಿದ್ದಕ್ಕೆ ಮಹಿಳೆಗೆ 800 ರೂ. ಚಾರ್ಜ್ ಮಾಡಿದ ಹೋಟೆಲ್‌! Viral post

ಆರು ನಿಮಿಷಗಳ ಕಾಲ ಶೌಚಾಲಯ ಬಳಸಿದ್ದಕ್ಕಾಗಿ 805 ರೂ. ನಾನು ಇದನ್ನು ಸಹಾನುಭೂತಿಗಾಗಿ ಬರೆಯುತ್ತಿಲ್ಲ. ನಾನು ಇನ್ನೂ ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿರುವುದರಿಂದ ಇದನ್ನು ಬರೆಯುತ್ತಿದ್ದೇನೆ. ನೋವಿನಲ್ಲಿರುವ ಮಹಿಳೆಯನ್ನು ಯಾರಾದರೂ ಹೇಗೆ ನೋಡಬಹುದೇ? ಇದೆನಾ ಮೂಲಭೂತ ಮಾನವೀಯತೆಗೆ ಕೊಡವ ಬೆಲೆ? ನಾವು ಏನಾಗಿದ್ದೇವೆ? ನಾವು ಮನುಷ್ಯರಾಗಿ ಪ್ರಗತಿ ಹೊಂದುತ್ತಿದ್ದೇವೆಯೇ? ಅಥವಾ ನಾವು ದಾರಿ ಮಧ್ಯದಲ್ಲಿಯೇ ನಮ್ಮ ಆತ್ಮವನ್ನು ಕಳೆದುಕೊಳ್ಳುತ್ತಿದ್ದೇವೆಯೇ? ಎಂದು ಪೋಸ್ಟ್​​​ನಲ್ಲಿ ತಮ್ಮ ಮನದ ಮಾತನ್ನು ಹೇಳಿಕೊಂಡಿದ್ದಾರೆ.

ಈ ಪೋಸ್ಟ್​​ಗೆ ನೆಟ್ಟಿಗರು ವೈವಿಧ್ಯಮಯ ಪ್ರತಿಕ್ರಿಯೆ ನೀಡಿದ್ದಾರೆ. ಅದರಲ್ಲಿ ಹೆಚ್ಚಿನ ಜನರು ಹೋಟೆಲ್‌ನ ಈ ದುರ್ನಡತೆಯನ್ನು ಖಂಡಿಸಿದ್ದಾರೆ. (ಏಜೆನ್ಸೀಸ್​)

ತಾಳಿ ಕಟ್ಟುವ ವೇಳೆ ‘ಇವನು ಅವನಲ್ಲ’ ಎಂದು ಹಸೆಮಣೆಯಿಂದ ಎದ್ದು ಓಡಿದ ವಧು: ಮುಂದೇನಾಯ್ತು ಗೊತ್ತೆ! | Wedding

Share This Article

ಮೀನು, ಮೊಸರನ್ನು ಒಟ್ಟಿಗೆ ತಿನ್ನುತ್ತೀರಾ? ಹಾಗಾದ್ರೆ ಈ ಸಮಸ್ಯೆ ಬರಬಹುದು ಎಚ್ಚರ! Fish

Fish: ಸಂಡೇ ಬಂತೆಂದರೆ ಸಾಕು ಸಾಮಾನ್ಯವಾಗಿ ಅನೇಕರ ಮನೆಯಲ್ಲಿ ಮೀನು, ಚಿಕನ್​​ ತಪ್ಪಿಸುವುದೇ ಇಲ್ಲ. ಕೆಲವರು…

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಜ್ಯೂಸ್ ಕುಡಿದರೆ ಸಾಕು ಎಲ್ಲಾ ನೋವು ಮಾಯ! bitter gourd juice

bitter gourd juice :  ಯೂರಿಕ್ ಆಮ್ಲದ ಮಟ್ಟ ಹೆಚ್ಚಾದಾಗ, ದೇಹದ ಕೀಲುಗಳಲ್ಲಿ ನೋವು ಪ್ರಾರಂಭವಾಗುತ್ತದೆ.…

ವಾರದ ಯಾವ ದಿನ ಯಾವ ದೇವರನ್ನು ಪೂಜಿಸಬೇಕೆಂದು ನಿಮಗೆ ತಿಳಿದಿದೆಯೇ? Weekly Worship Guide

Weekly Worship Guide : ದೇವರ ಆರಾಧನೆಯು ಜೀವನದಲ್ಲಿ ವಿಶೇಷವಾಗಿ ಪ್ರಮುಖ ಸ್ಥಾನವನ್ನು ಹೊಂದಿದೆ. ಪ್ರತಿದಿನ…