More

    ಹಾಸ್ಯಮಯ ಹಾಸ್ಟೆಲ್ ಹುಡುಗರು; ಹೊಸ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬಲ

    ಬೆಂಗಳೂರು: ಪ್ರಾರಂಭದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಕುತೂಹಲ ಮೂಡಿಸುತ್ತಿರುವ, ದಿನೇ ದಿನೆ ನಿರೀಕ್ಷೆ ಹೆಚ್ಚಿಸುತ್ತಿರುವ ಸಿನಿಮಾ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’. ನಿತಿನ್ ಕೃಷ್ಣಮೂರ್ತಿ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಬೆಂಬಲಕ್ಕೆ ಪುನೀತ್ ರಾಜಕುಮಾರ್, ಕಿಚ್ಚ ಸುದೀಪ್, ರಮ್ಯಾ, ರಕ್ಷಿತ್ ಶೆಟ್ಟಿ ನಿಂತಿದ್ದರು. ಇತ್ತೀಚೆಗಷ್ಟೆ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಅಲ್ಲೂ ಸಹ ಸ್ಯಾಂಡಲ್‌ವುಡ್ ತಾರೆಯರು ಹೊಸಬರ ತಂಡದ ಜತೆ ಕೈಜೋಡಿಸಿದ್ದಾರೆ.

    ಹಾಸ್ಯಮಯ ಹಾಸ್ಟೆಲ್ ಹುಡುಗರು; ಹೊಸ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬಲ
    ಹಾಸ್ಯಮಯ ಹಾಸ್ಟೆಲ್ ಹುಡುಗರು; ಹೊಸ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬಲ

    ನನ್ನ ಶಿಷ್ಯಂದಿರ ಚಿತ್ರ: ರಿಷಬ್
    ಅಶ್ವಿನಿ ಪುನೀತ್ ರಾಜಕುಮಾರ್, ರಕ್ಷಿತ್ ಶೆಟ್ಟಿ, ರಿಷಬ್ ಶೆಟ್ಟಿ, ಧ್ರುವ ಸರ್ಜಾ ಸೇರಿ ಹಲವಾರು ತಾರೆಯರು ಕಾರ್ಯಕ್ರಮಕ್ಕೆ ಆಗಮಿಸಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ರಿಷಬ್ ಶೆಟ್ಟಿ, ‘ನನ್ನ ಶಿಷ್ಯಂದಿರೇ ಸೇರಿ ಮಾಡಿರುವ ಸಿನಿಮಾ. ಕಥೆಯನ್ನೇ ಹೇಳದೇ ಗೆಸ್ಟ್ ಅಪಿಯರೆನ್ಸ್ ಮಾಡ್ತೀರಾ ಅಂತ ಕೇಳಿದರು. ಒಂದು ರಾತ್ರಿಯಷ್ಟೇ ಶೂಟಿಂಗ್ ನಡೆಸಲಾಯಿತು. 500 ಮಂದಿ ಕಲಾವಿದರನ್ನು ರಾತ್ರಿಯ ಸನ್ನಿವೇಶದಲ್ಲಿ ಚಿತ್ರೀಕರಣ ಮಾಡುವು ಚಾಲೆಂಜಿಂಗ್. ಆ ಸವಾಲನ್ನು ಈ ತಂಡ ಸಮರ್ಥವಾಗಿ ಎದುರುಸಿದೆ’ ಎಂದರು.

    ಹಾಸ್ಯಮಯ ಹಾಸ್ಟೆಲ್ ಹುಡುಗರು; ಹೊಸ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬಲ

    ಸಿನಿಮಾ ಅಣ್ಣನನ್ನು ನೆನಪಿಸಿತು: ಧ್ರುವ ಸರ್ಜಾ
    ಟ್ರೇಲರ್ ಲಾಂಚ್ ಬಳಿಕ ಮಾತನಾಡಿದ ಧ್ರುವ ಸರ್ಜಾ, ‘ಒಬ್ಬ ಪ್ರೇಕ್ಷಕನಾಗಿ ಸಿನಿಮಾ ನೋಡಿದ್ದೇನೆ. ಆಗ ಅಣ್ಣನನ್ನು ತುಂಬ ಮಿಸ್ ಮಾಡಿಕೊಂಡೆ. ಏಳೆಂಟು ವರ್ಷ ನಾವೂ ಹಾಸ್ಟೆಲ್‌ನಲ್ಲಿದ್ದೆವು. ನಾವೂ ಹೀಗೇ ಇದ್ವಲ್ಲಾ ಅಂತನ್ನಿಸಿತು’ ಎಂದು ಅನುಭವ ಬಿಚ್ಚಿಟ್ಟರು.

    ಹಾಸ್ಯಮಯ ಹಾಸ್ಟೆಲ್ ಹುಡುಗರು; ಹೊಸ ಚಿತ್ರತಂಡಕ್ಕೆ ಸ್ಯಾಂಡಲ್‌ವುಡ್ ಸ್ಟಾರ್‌ಗಳ ಬಲ

    ಇದು ಹಾಲಿವುಡ್ ರೇಂಜ್ ಸಿನಿಮಾ: ರಕ್ಷಿತ್
    ಈ ಸಿನಿಮಾ ಪ್ರಸ್ತುತಪಡಿಸುತ್ತಿರುವ ನಟ ರಕ್ಷಿತ್ ಶೆಟ್ಟಿ, ‘ಅಪ್ಪು ಸರ್ ಏನೇ ಶುರು ಮಾಡಿದರೂ, ಅದ್ಭುತ ಲಿತಾಂಶ ಕೊಡುತ್ತದೆ ಎಂಬ ನಂಬಿಕೆ. ನಮ್ಮ ಪರಂವಃ ಸ್ಟುಡಿಯೋಸ್, ಕಚೇರಿಯನ್ನು ಅವರೇ ಉದ್ಘಾಟಿಸಿದರು. ಈ ಚಿತ್ರದ ಮೊದಲ ಪೋಸ್ಟರ್ ಕೂಡ ಅವರೇ ಲಾಂಚ್ ಮಾಡಿದ್ದರು. ಈ ಸಿನಿಮಾ ಹಾಲಿವುಡ್ ರೇಂಜ್‌ನಲ್ಲಿ ಶೂಟ್ ಮಾಡಿದ್ದಾರೆ. ಎರಡು ಬಾರಿ ನೋಡಿ, ಪ್ರತಿ ಬಾರಿ ನಕ್ಕಿದ್ದೇನೆ’ ಎಂದು ಹೇಳಿಕೊಂಡರು.

    ನಿರ್ದೇಶಕ ನಿತಿನ್ ಕೃಷ್ಣಮೂರ್ತಿ, ‘’ಅಪ್ಪು ಸರ್ ಪೋಸ್ಟರ್ ಲಾಂಚ್ ಮಾಡುವ ಮೂಲಕ ಈ ಚಿತ್ರದ ಜರ್ನಿ ಶುರುವಾಯಿತು. ಸಿನಿಮಾ ಪೂರ್ಣಗೊಳಿಸಲು ಎರಡು ವರ್ಷ ಬೇಕಾಯಿತು. 1000 ಜನ ರಂಗಭೂಮಿ ಕಲಾವಿದರು ಸೇರಿ ಕನ್ನಡ ಚಿತ್ರರಂಗ ಚಿತ್ರಕ್ಕೆ ಸಾಥ್ ನೀಡಿದೆ’ ಎಂದು ಸಂತಸ ಹಂಚಿಕೊಂಡರು. ಚಿತ್ರದಲ್ಲಿ ರಮ್ಯಾ, ರಿಷಬ್ ಶೆಟ್ಟಿ, ಪವನ್ ಕುಮಾರ್, ಶೈನ್ ಶೆಟ್ಟಿ, ದಿಗಂತ್ ವಿಶೇಷ ಪಾತ್ರಗಳಲ್ಲಿ ನಟಿಸಿದ್ದಾರೆ. ಸಿನಿಮಾ ಇದೇ ತಿಂಗಳ 21ರಂದು ರಿಲೀಸ್ ಆಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts