More

    ಅಭಿಮಾನಿಗಳೊಂದಿಗೆ ರಹಸ್ಯ ಸಭೆ ನಡೆಸಿದ ವಿಜಯ್​: ಫ್ಯಾನ್ಸ್​ಗೆ ಇಳಯ ದಳಪತಿ ಕೊಟ್ಟ ಟಾಸ್ಕ್​ ಹೀಗಿದೆ…

    ಚೆನ್ನೈ: ಕಾಲಿವುಡ್​ ನಟ ವಿಜಯ್​ ರಾಜಕೀಯ ಪ್ರವೇಶದ ವದಂತಿಯ ನಡುವೆಯೇ ಅಭಿಮಾನಿಗಳ ಸಂಘದ ಮುಂಚೂಣಿ ಸದಸ್ಯರ ಜತೆ ತಮ್ಮ ನಿವಾಸದಲ್ಲಿ ವಿಜಯ್​ ರಹಸ್ಯವಾಗಿ ಸಭೆ ನಡೆಸಿರುವುದು ಭಾರೀ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.

    ನಿನ್ನೆ ನಡೆದ ಸಭೆ

    ತಮಿಳುನಾಡಿನ ಎಲ್ಲಾ 234 ಕ್ಷೇತ್ರಗಳ ಪ್ರಮುಖ ವಿಜಯ್ ಅಭಿಮಾನಿಗಳು ಸಭೆಯಲ್ಲಿ ಭಾಗವಹಿಸಿದ್ದರು. ನಿನ್ನೆ (ಜು.11) ಮಧ್ಯಾಹ್ನ 2 ಗಂಟೆಗೆ ಮನೆಯನ್ನು ತಲುಪಿದ ವಿಜಯ್​, ಅಭಿಮಾನಿಗಳ ಜತೆ ಸಭೆ ನಡೆಸಿದ್ದು, ರಾಜ್ಯದ ಜನರ ಬಳಿ ವರ್ಚಸ್ಸು ಗಳಿಸಲು ಕೆಲವು ಕಾರ್ಯಗಳನ್ನು ಆಯಾ ಕ್ಷೇತ್ರಗಳಲ್ಲಿ ಕಾರ್ಯಗತಗೊಳಿಸಲು ಅಭಿಮಾನಿಗಳಿಗೆ ವಿಜಯ್​ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

    ಇದನ್ನೂ ಓದಿ: ಬಿಕಿನಿ ಅವತಾರದಲ್ಲಿ ಪಡ್ಡೆ ಹುಡುಗರ ನಿದ್ದೆಗೆಡಿಸಿದ ಜಯಶ್ರೀ ಆರಾಧ್ಯ: ಟ್ರೋಲ್​ ಆದ್ರು ಮಾರಿಮುತ್ತು ಮೊಮ್ಮಗಳು!

    ಪಂಚಾಯಿತಿ ಚುನಾವಣೆಯಲ್ಲಿ ಗೆಲುವು

    ವಿಜಯ್​ ಅಭಿಮಾನಿ ಸಂಘ ದಳಪತಿ ವಿಜಯ್​ ಮಕ್ಕಳ್​ ಇಯಕ್ಕಂನಿಂದ ಕಳೆದ ಬಾರಿ ಪಂಚಾಯಿತಿ ಚುನಾವಣೆಗೆ ಸ್ಪರ್ಧಿಸಿ, ಯಾವುದೇ ಪ್ರಚಾರವಿಲ್ಲದೆ, 115 ಸ್ಥಾನಗಳನ್ನು ಗೆದ್ದಿತು. ಇದೇ ಹುಮ್ಮಸ್ಸಿನಲ್ಲಿರುವ ವಿಜಯ್​, ಇದೀಗ ಮುಂಬರುವ ವಿಧಾನಸಭಾ ಚುನಾವಣೆಗೆ ಕಣ್ಣಿಟ್ಟಿದ್ದಾರೆ ಎನ್ನಲಾಗಿದೆ.

    ರಾಜಕೀಯ ಎಂಟ್ರಿ ತಳ್ಳಿಹಾಕುವಂತಿಲ್ಲ

    ವಿಜಯ್​ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದ್ದಾರೆ ಎಂಬ ವದಂತಿಯೂ ಇದೆ. ವೆಂಕಟ್​ಪ್ರಭು ನಿರ್ದೇಶನದ ಸಿನಿಮಾ ಬಳಿಕ ವಿಜಯ್​, ಬ್ರೇಕ್​ 3 ವರ್ಷಗಳ ಕಾಲ ಸಿನಿಮಾಗಳಿಂದ ಬ್ರೇಕ್​ ಪಡೆದುಕೊಳ್ಳಲಿದ್ದಾರೆ. ಮುಂದಿನ ವರ್ಷ ಅಂದರೆ, 2024ರ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ವೆಂಕಟ್​ ಪ್ರಭು ಪ್ಲ್ಯಾನ್​ ಮಾಡಿಕೊಂಡಿದ್ದಾರೆ. ಆ ಬಳಿಕ ವಿಜಯ್​ ಅವರು ವಿಧಾನಸಭಾ ಚುನಾವಣೆಗೆ ಸಿದ್ಧತೆ ನಡೆಸಲಿದ್ದಾರೆ ಎನ್ನಲಾಗುತ್ತಿದೆ. ಇದೀಗ ಸಭೆ ನಡೆದಿರುವುದನ್ನು ನೋಡಿದರೆ ವಿಜಯ್​, ರಾಜಕೀಯ ಎಂಟ್ರಿ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.

    ಹಣ ಪಡೆದ ಮತ ಹಾಕಬೇಡಿ

    ವಿಜಯ್​ ರಾಜಕೀಯ ಸೇರುವ ವಿಚಾರ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಅದಕ್ಕೆ ಕಾರಣ ವಿಜಯ್​, ಇತ್ತೀಚೆಗೆ ನಡೆಸಿದ ಒಂದು ಕಾರ್ಯಕ್ರಮ. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿಜಯ್​ ಅಭಿನಂದಿಸಿದರು ಮತ್ತು ಇದೇ ಕಾರ್ಯಕ್ರಮದಲ್ಲಿ ವಿಜಯ್​, ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು. ಹಣ ಪಡೆದು ಮತ ಚಲಾಯಿಸಬೇಡಿ ಎಂದಿದ್ದರು.

    ಇದನ್ನೂ ಓದಿ: ಸ್ನ್ಯಾಕ್ಸ್ ತಿನ್ನಲು ಸೈರನ್​ ದುರ್ಬಳಕೆ! ತುರ್ತು ಪರಿಸ್ಥಿತಿ ಅಂತ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟ ಪೊಲೀಸ್​ಗೆ ಶಾಕ್​

    ಈ ಕಾರ್ಯಕ್ರಮದ ಬಳಿಕ ಅನೇಕ ರಾಜಕೀಯ ನಾಯಕರು ವಿಜಯ್​ ಅವರು ರಾಜಕೀಯ ಎಂಟ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ವಿಜಯ್​ ರಾಜಕೀಯ ಎಂಟ್ರಿಯನ್ನು ಬೆಂಬಲಿಸಿದ್ದರು. ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕ ತಿರುಮಾವಲವನ್​ ಅವರು ಸಾರ್ವಜನಿಕವಾಗಿ ವಿಜಯ್​ ರಾಜಕೀಯ ಪ್ರವೇಶವನ್ನು ವಿರೋಧಿಸಿದ್ದರು.

    ಆದರೆ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್​ ಅವರ ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆಯಾಗಲಿ ಅಥವಾ ವಿಜಯ್​ ಆಗಲಿ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಒಂದು ವೇಳೆ ವಿಜಯ್​ ರಾಜಕೀಯ ಪ್ರವೇಶಿಸಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತಾರಾ ಎಂಬ ಕುತೂಹಲ ಹಾಗೇ ಇದೆ. ಮುಂದೆ ಏನೆಲ್ಲ ಬೆಳವಣಿಗೆ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. (ಏಜೆನ್ಸೀಸ್​)

    ಸಿನಿಮಾಗೆ ಬ್ರೇಕ್​ ಕೊಟ್ಟು 2026ರಲ್ಲಿ ಚರಿತ್ರೆ ಸೃಷ್ಟಿಸುತ್ತಾರಾ ನಟ ವಿಜಯ್​? ತಮಿಳುನಾಡಲ್ಲಿ ಹೀಗೊಂದು ಚರ್ಚೆ

    ನಟ ವಿಜಯ್​ ರಾಜಕೀಯ ಪ್ರವೇಶ ವಿಚಾರ: ತಮಿಳುನಾಡು ಸಿಎಂ ಪುತ್ರ ಉದಯನಿಧಿ ಪ್ರತಿಕ್ರಿಯೆ ವೈರಲ್​

    ನಟ ವಿಜಯ್​ ರಾಜಕೀಯ ಪ್ರವೇಶ ವಿಚಾರ: ತಮಿಳುನಾಡಿನಲ್ಲಿ ಸಂಚಲನ ಸೃಷ್ಟಿಸಿದ ಅಣ್ಣಾಮಲೈ ಹೇಳಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts