More

    ಸಿನಿಮಾಗೆ ಬ್ರೇಕ್​ ಕೊಟ್ಟು 2026ರಲ್ಲಿ ಚರಿತ್ರೆ ಸೃಷ್ಟಿಸುತ್ತಾರಾ ನಟ ವಿಜಯ್​? ತಮಿಳುನಾಡಲ್ಲಿ ಹೀಗೊಂದು ಚರ್ಚೆ

    ಚೆನ್ನೈ: ಕಾಲಿವುಡ್​ ಸೂಪರ್​ಸ್ಟಾರ್​ ವಿಜಯ್​, ಸಿನಿಮಾಗಳಿಂದ ವಿರಾಮ ತೆಗೆದುಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. 2026ನೇ ಇಸವಿಯಲ್ಲಿ ಎದುರಾಗುವ ತಮಿಳುನಾಡು ವಿಧಾನಸಭಾ ಚುನಾವಣೆ ದೃಷ್ಟಿಯಿಂದ ಸಿನಿಮಾಗಳಿಂದ ಬಿಡುವು ಪಡೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

    2024ರ ಬಳಿಕ ಬಿಡುವು

    ವಿಜಯ್​ ಅವರು ರಾಜಕೀಯ ಪಕ್ಷವೊಂದನ್ನು ಸ್ಥಾಪಿಸಲಿದ್ದಾರೆ ಎಂಬ ವದಂತಿಯೂ ಇದೆ. ವೆಂಕಟ್​ಪ್ರಭು ನಿರ್ದೇಶನದ ಸಿನಿಮಾ ಬಳಿಕ ವಿಜಯ್​, ಬ್ರೇಕ್​ ಪಡೆದುಕೊಳ್ಳಲಿದ್ದಾರೆ. ಮುಂದಿನ ವರ್ಷ ಅಂದರೆ, 2024ರ ದೀಪಾವಳಿಗೆ ಸಿನಿಮಾ ಬಿಡುಗಡೆ ಮಾಡಲು ವೆಂಕಟ್​ ಪ್ರಭು ಪ್ಲ್ಯಾನ್​ ಮಾಡಿಕೊಂಡಿದ್ದಾರೆ.

    3 ರಿಂದ 4 ವರ್ಷ ವಿರಾಮ

    ವಿಜಯ್​ ಸಿನಿಮಾದಿಂದ ಬಿಡುವು ಪಡೆದುಕೊಳ್ಳುವ ಸಂಗತಿಯನ್ನು ಅಭಿಮಾನಿಗಳು ಕೂಡ ತಮ್ಮ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಶೇರ್​ ಮಾಡಿಕೊಳ್ಳುತ್ತಿದ್ದಾರೆ. ಅದರ ಪ್ರಕಾರ 2024ರ ಜನವರಿಯಲ್ಲಿ ವೆಂಕಟ್​ ಪ್ರಭು ಅವರ ಸಿನಿಮಾದ ಶೂಟಿಂಗ್​ ಮುಗಿಸಿ, ರಾಜಕೀಯ ಪ್ರವೇಶ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಸುಮಾರು 3 ರಿಂದ 4 ವರ್ಷಗಳ ಕಾಲ ವಿರಾಮ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

    ಹಣ ಪಡೆದ ಮತ ಹಾಕಬೇಡಿ

    ವಿಜಯ್​ ರಾಜಕೀಯ ಸೇರುವ ವಿಚಾರ ಇತ್ತೀಚೆಗೆ ತಮಿಳುನಾಡಿನಲ್ಲಿ ಭಾರೀ ಚರ್ಚೆಯನ್ನು ಹುಟ್ಟು ಹಾಕಿದೆ. ಅದಕ್ಕೆ ಕಾರಣ ವಿಜಯ್​, ಇತ್ತೀಚೆಗೆ ನಡೆಸಿದ ಒಂದು ಕಾರ್ಯಕ್ರಮ. ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ವಿಜಯ್​ ಅಭಿನಂದಿಸಿದರು ಮತ್ತು ಇದೇ ಕಾರ್ಯಕ್ರಮದಲ್ಲಿ ವಿಜಯ್​, ರಾಜಕೀಯದ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ್ದರು. ಹಣ ಪಡೆದು ಮತ ಚಲಾಯಿಸಬೇಡಿ ಎಂದಿದ್ದರು.

    ಈ ಕಾರ್ಯಕ್ರಮದ ಬಳಿಕ ಅನೇಕ ರಾಜಕೀಯ ನಾಯಕರು ವಿಜಯ್​ ಅವರು ರಾಜಕೀಯ ಎಂಟ್ರಿಯ ಬಗ್ಗೆ ಪ್ರತಿಕ್ರಿಯೆ ನೀಡಿದ್ದರು. ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಕೂಡ ವಿಜಯ್​ ರಾಜಕೀಯ ಎಂಟ್ರಿಯನ್ನು ಬೆಂಬಲಿಸಿದ್ದರು. ವಿದುತಲೈ ಚಿರುತೈಗಲ್ ಕಚ್ಚಿ ಪಕ್ಷದ ನಾಯಕ ತಿರುಮಾವಲವನ್​ ಅವರು ಸಾರ್ವಜನಿಕವಾಗಿ ವಿಜಯ್​ ರಾಜಕೀಯ ಪ್ರವೇಶವನ್ನು ವಿರೋಧಿಸಿದ್ದರು.

    ಆದರೆ, ರಾಜಕೀಯ ವಿಚಾರಕ್ಕೆ ಸಂಬಂಧಿಸಿದಂತೆ ವಿಜಯ್​ ಅವರ ವಿಜಯ್ ಮಕ್ಕಳ್ ಇಯಕ್ಕಂ ಸಂಘಟನೆಯಾಗಲಿ ಅಥವಾ ವಿಜಯ್​ ಆಗಲಿ ಯಾವುದೇ ಅಧಿಕೃತ ದೃಢೀಕರಣವನ್ನು ನೀಡಿಲ್ಲ. ಒಂದು ವೇಳೆ ವಿಜಯ್​ ರಾಜಕೀಯ ಪ್ರವೇಶಿಸಿ, 2026ರ ವಿಧಾನಸಭಾ ಚುನಾವಣೆಯಲ್ಲಿ ಚರಿತ್ರೆ ಸೃಷ್ಟಿ ಮಾಡುತ್ತಾರಾ ಎಂಬ ಕುತೂಹಲ ಹಾಗೇ ಇದೆ. ಮುಂದೆ ಏನೆಲ್ಲ ಬೆಳವಣಿಗೆ ನಡೆಯಲಿದೆ ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ. (ಏಜೆನ್ಸೀಸ್​)

    ಕಣ್ಣಾರೆ ಕಂಡರೂ..: ಹುಷಾರು.. ಇದು ಡೀಪ್ ಫೇಕ್!

    ನ.1ರಿಂದ ರಾಜ್ಯಾದ್ಯಂತ ವರ್ಷಪೂರ್ತಿ ಕನ್ನಡ ಹಬ್ಬ ಆಚರಣೆ: ಕರ್ನಾಟಕ ಮರುನಾಮಕರಣಕ್ಕೆ 50 ವರ್ಷ ಪೂರ್ತಿ

    ಸಂಪಾದಕೀಯ| ಜೀವ ಅಮೂಲ್ಯ; ಹೆದ್ದಾರಿಗಳಲ್ಲಿ ಹೆಚ್ಚುತ್ತಿರುವ ಅಪಘಾತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts