More

    ಸ್ನ್ಯಾಕ್ಸ್ ತಿನ್ನಲು ಸೈರನ್​ ದುರ್ಬಳಕೆ! ತುರ್ತು ಪರಿಸ್ಥಿತಿ ಅಂತ ಆಂಬ್ಯುಲೆನ್ಸ್​ಗೆ ದಾರಿ ಮಾಡಿಕೊಟ್ಟ ಪೊಲೀಸ್​ಗೆ ಶಾಕ್​

    ಹೈದರಾಬಾದ್​: ಸೈರನ್ ಮೊಳಗುತ್ತಿದ್ದ ಕಾರಣ ತುರ್ತುಪರಿಸ್ಥಿತಿ ಅಂತ ತಿಳಿದು ಟ್ರಾಫಿಕ್ ಸರಿಪಡಿಸಿ, ಹೋಗಲು ದಾರಿ ಮಾಡಿಕೊಟ್ಟರೆ, ಆಂಬ್ಯುಲೆನ್ಸ್​ ಚಾಲಕ ರಸ್ತೆ ಬದಿಯಲ್ಲಿ ಆಂಬ್ಯುಲೆನ್ಸ್​ ನಿಲ್ಲಿಸಿ, ಪಕ್ಕದ ಅಂಗಡಿಯಲ್ಲಿ ಸ್ನ್ಯಾಕ್ಸ್​ ಸವಿದಿರುವ​ ಆಘಾತಕಾರಿ ಘಟನೆ ಮಂಗಳವಾರ (ಜು.11) ತೆಲಂಗಾಣದಲ್ಲಿ ನಡೆದಿದೆ.

    ತಾನು ದಾರಿ ಮಾಡಿಕೊಟ್ಟ ಆಂಬ್ಯುಲೆನ್ಸ್​ ಆಸ್ಪತ್ರೆಗೆ ಹೋಗದೆ ರಸ್ತೆ ಬದಿಯ ಬೇಕರಿಯಲ್ಲಿ ನಿಂತಿರುವುದನ್ನು ನೋಡಿ, ಅಲ್ಲಿಗೆ ಟ್ರಾಫಿಕ್​ ಪೊಲೀಸ್​ ಹೋಗಿ ಪರಿಶೀಲಿಸಿದ್ದಾರೆ. ಆದರೆ, ಆಂಬ್ಯುಲೆನ್ಸ್​ ಒಳಗೆ ಯಾವೊಬ್ಬ ರೋಗಿಯು ಸಹ ಇರಲಿಲ್ಲ. ತುರ್ತು ಪರಿಸ್ಥಿತಿಯಲ್ಲದ ಸಮಯದಲ್ಲೂ ಚಾಲಕ ಆಂಬ್ಯುಲೆನ್ಸ್​ ಸೈರನ್​ ಆನ್​ ಮಾಡಿರುವುದು ಕಂಡುಬಂದಿದೆ ಎಂದು ಪೊಲೀಸ್​ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಗಂಭೀರ ಚರ್ಚೆ ನಿರೀಕ್ಷಿತ: ಅಧಿವೇಶನದಲ್ಲಿ ವೈಯಕ್ತಿಕ ಆರೋಪ, ಜಟಾಪಟಿ

    ಆಂಬ್ಯುಲೆನ್ಸ್​ನಲ್ಲಿ ತುರ್ತು ರೋಗಿ ಯಾರು ಇರಲಿಲ್ಲ. ಅದರಲ್ಲಿ ಇಬ್ಬರು ನರ್ಸ್​ ಸೇರಿ ಇತರರು ಇದ್ದರು ಎಂದು ಪೊಲೀಸ್​ ಸಿಬ್ಬಂದಿ ಹೇಳಿದರು. ಈ ಘಟನೆ ಸೋಮವಾರ ರಾತ್ರಿ ಹೈದರಾಬಾದ್​ನ ಬಶೀಬಾಘ್​ ಜಂಕ್ಷನ್​ನಲ್ಲಿ ನಡೆದಿದೆ. ಸೈರನ್ ಮೊಳಗುತ್ತಿರುವುದನ್ನು ನೋಡಿ, ತುರ್ತು ಪರಿಸ್ಥಿತಿ ಇರಬಹುದು ಅಂತ ಭಾವಿಸಿ, ಸಂಚಾರಿ ಪೊಲೀಸ್​ ತಕ್ಷಣ ಆಂಬ್ಯುಲೆನ್ಸ್​ ಹೊರಡಲು ದಾರಿ ಮಾಡಿಕೊಟ್ಟರು. ಆದರೆ, ಟ್ರಾಫಿಕ್​ ಸಿಗ್ನಲ್​ನಿಂದ 100 ಮೀಟರ್​ ದೂರದಲ್ಲಿರುವ ಬೇಕರಿಯೊಂದರ ಬಳಿ ಆಂಬ್ಯುಲೆನ್ಸ್​ ನಿಂತಿತ್ತು. ಇದನ್ನು ನೋಡಿದ ಪೊಲೀಸ್​ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಚಾಲಕನನ್ನು ಪೊಲೀಸ್​ ಸಿಬ್ಬಂದಿ ಪ್ರಶ್ನೆ ಮಾಡಿರುವುದು ಅವರು ಧರಿಸಿದ್ದ ಬಾಡಿ ವೋರ್ನ್​ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ವಿಡಿಯೋದಲ್ಲಿ ಆಂಬ್ಯುಲೆನ್ಸ್​ ಚಾಲಕ ಕೈಯಲ್ಲಿ ಜ್ಯೂಸ್​ ಬಾಟೆಲ್​ ಹಿಡಿದು, ನರ್ಸ್​ ಒಬ್ಬರಿಗೆ ಅನಾರೋಗ್ಯ ಇದೆ ಎಂದು ಮಾತನಾಡಿರುವುದನ್ನು ಕೇಳಬಹುದು.

    ಕಠಿಣ ಕ್ರಮ ಆಗಲಿದೆ 

    ನೀನು ಸೈರನ್​ ಹಾಕಿರುವಾಗ ಎಮರ್ಜೆನ್ಸಿ ಅಂತ ತಿಳಿದು ನಾನು ನಿನಗೆ ದಾರಿ ಮಾಡಿಕೊಟ್ಟರೆ, ನೀನು ಆಸ್ಪತ್ರೆಗೆ ಹೋಗದೆ, ಮಿರ್ಚಿ ಬಜ್ಜಿ ತಿನ್ನುತ್ತಾ ಟೀ ಕುಡಿಯುತ್ತಿದೆಯಲ್ಲ ಇದು ಸರಿನಾ ಎಂದು ಪೊಲೀಸ್​ ಸಿಬ್ಬಂದಿ ಪ್ರಶ್ನೆ ಮಾಡಿದ್ದಾರೆ. ರೋಗಿ ಎಲ್ಲಿ? ಮಿರ್ಚಿ ಬಜ್ಜಿ ತಿನ್ನುವುದಕ್ಕಾಗಿ ಸೈರೆನ್​ ಆನ್​ ಮಾಡಿದೆಯಾ? ನಾನು ಈ ಸಂಬಂಧ ವರದಿ ತಯಾರಿಸಿ, ಉನ್ನತ ಅಧಿಕಾರಿಗಳಿಗೆ ಕಳುಹಿಸುತ್ತೇನೆ ಮತ್ತು ನಿಮ್ಮ ಮೇಲೆ ಕಠಿಣ ಕ್ರಮ ಆಗಲಿದೆ ಎಂದು ಪೊಲೀಸ್​ ಸಿಬ್ಬಂದಿ ತರಾಟೆಗೆ ತೆಗೆದುಕೊಂಡಿರುವುದು ವಿಡಿಯೋದಲ್ಲಿದೆ.

    ಮೋಟಾರು ವಾಹನ ಕಾಯ್ದೆಯನ್ನು ಉಲ್ಲಂಘಿಸಿದ್ದಕ್ಕಾಗಿ ಇದೇ ಸಂದರ್ಭದಲ್ಲಿ ಆಂಬ್ಯುಲೆನ್ಸ್​ ಚಾಲಕನಿಗೆ 1000 ರೂಪಾಯಿ ದಂಡವನ್ನು ವಿಧಿಸಲಾಗಿದೆ.

    ದುರುದ್ದೇಶದಿಂದ ಸೈರನ್ ಬಳಕೆ

    ಇದೇನು ತುರ್ತು ಪರಿಸ್ಥಿತಿ ಅಲ್ಲ ಮತ್ತು ಆಂಬ್ಯುಲೆನ್ಸ್ ಡ್ರೈವರ್ ಸೈರನ್ ಬಳಸಬಾರದಿತ್ತು. ತುರ್ತು ವೇಳೆಯಾಗಿದ್ದರೆ ಆತ ಆಸ್ಪತ್ರೆಗೆ ಹೋಗಬೇಕಿತ್ತು. ಆದರೆ ಆತ ಆ ರೀತಿ ಮಾಡಲಿಲ್ಲ. ಬದಲಾಗಿ ರಸ್ತೆ ಬದಿಯ ಬೇಕರಿಯಲ್ಲಿ ಸ್ನ್ಯಾಕ್ಸ್​ ತಿನ್ನುತ್ತಿದ್ದರು. ಟ್ರಾಫಿಕ್ ಕ್ಲಿಯರೆನ್ಸ್ ಪಡೆಯುವದಕ್ಕಾಗಿ ದುರುದ್ದೇಶದಿಂದ ಸೈರನ್ ಹಾಕಿದರು ಎಂದು ಉಪ ಪೊಲೀಸ್ ಆಯುಕ್ತ (ಸಂಚಾರ-I) ರಾಹುಲ್ ಹೆಗ್ಡೆ ಪಿಟಿಐಗೆ ತಿಳಿಸಿದ್ದಾರೆ.

    ಈ ದುರುಪಯೋಗದ ಬಗ್ಗೆ ನಾವು ಆಸ್ಪತ್ರೆಗೂ ಸಹ ತಿಳಿಸುತ್ತೇವೆ. ಈ ರೀತಿಯ ಘಟನೆ ಮರುಕುಳಿಸಿದರೆ, ಉಲ್ಲಂಘನೆ ಅಥವಾ ಗಂಭೀರ ಉಲ್ಲಂಘನೆ ಕಂಡುಬಂದರೆ, ಅಂತವರ ವಿರುದ್ಧ ನಾವು ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ ಎಂದು ಡಿಸಿಪಿ ಎಚ್ಚರಿಸಿದರು.

    ಇದನ್ನೂ ಓದಿ: ಅಂತಾರಾಷ್ಟ್ರೀಯ ವಿಶೇಷ ಒಲಿಂಪಿಕ್ಸ್‌ನ ಸೈಕ್ಲಿಂಗ್ ಸ್ಪರ್ಧೆ- ದಾವಣಗೆರೆಯ ಸುಶ್ರುತ್ ಗೆ ಚಿನ್ನ

    ತೆಲಂಗಾಣ ಡಿಜಿಪಿ ಟ್ವೀಟ್​

    ತೆಲಂಗಾಣ ಪೊಲೀಸರು ಆಂಬ್ಯುಲೆನ್ಸ್ ಸೇವೆಗಳ ಜವಾಬ್ದಾರಿಯುತ ಬಳಕೆಯನ್ನು ಒತ್ತಾಯಿಸುತ್ತಾರೆ. ನಿಜವಾದ ತುರ್ತುಸ್ಥಿತಿಗಳು ತ್ವರಿತ ಮತ್ತು ಸುರಕ್ಷಿತ ಮಾರ್ಗಕ್ಕಾಗಿ ಸೈರನ್‌ಗಳನ್ನು ಸಕ್ರಿಯಗೊಳಿಸುವ ಅಗತ್ಯವಿದೆ. ದುರುಪಯೋಗ ಮಾಡುವವರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಲಾಗಿದೆ ಎಂದು ತೆಲಂಗಾಣ ಡಿಜಿಪಿ ಅಂಜನಿ ಕುಮಾರ್​ ತಿಳಿಸಿದ್ದಾರೆ. (ಏಜೆನ್ಸೀಸ್​)

    ಕಲಾಪದಲ್ಲಿ ವ್ಯವಹಾರ ಕದನ: ಆಡಳಿತ-ಪ್ರತಿಪಕ್ಷದ ನಡುವೆ ಮಾತಿನ ಘರ್ಷಣೆ; ವರ್ಗಾವಣೆ ದಂಧೆ ವಿಚಾರಕ್ಕೆ ಗದ್ದಲ

    ಪ್ರಕೃತಿಗೆ ಟಿಶ್ಯೂ ದೊಡ್ಡ ಇಶ್ಯೂ: ನಿಯಂತ್ರಣಕ್ಕೆ ಕರವಸ್ತ್ರವೇ ಅಸ್ತ್ರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts