More

  ಮಕ್ಕಳಲ್ಲಿ ಆತ್ಮವಿಶ್ವಾಸ, ನೈತಿಕ ಮೌಲ್ಯಗಳ ಬೆಳೆಸಿ

  ಬಳ್ಳಾರಿ: ಇಲ್ಲಿನ ಎಸ್.ಕೆ.ಮೋದಿ ಇಂಟರ್ ನ್ಯಾಷನಲ್ ಶಾಲೆಯಲ್ಲಿ ವೀವಿ ಸಂಘದ ಶಾಲೆಗಳ ಶಿಕ್ಷಕರಿಗೆ ಆಯೋಜಿಸಿದ್ದ ಮೂರು ದಿನಗಳ ತರಬೇತಿ ಶಿಬಿರ ಶನಿವಾರ ಸಮಾರೋಪಗೊಂಡಿತು.

  ವೀವಿ ಸಂಘದ ಅಧ್ಯಕ್ಷ ಅಲ್ಲಂ ಗುರುಬಸವರಾಜ ಮಾತನಾಡಿ, ಶಿಕ್ಷಕರು ಉತ್ತಮ ಹಾಗೂ ಪರಿಣಾಮಕಾರಿಯಾಗಿ ಬೋಧನೆ ಮಾಡಬೇಕು. ಮಕ್ಕಳಲ್ಲಿ ಆತ್ಮವಿಶ್ವಾಸ, ಕೌಶಲ ಹಾಗೂ ನೈತಿಕ ಮೌಲ್ಯಗಳನ್ನು ತುಂಬುವುದರೊಂದಿಗೆ ಸತ್ಪ್ರಜೆಗಳನ್ನಾಗಿ ಮಾಡಬೇಕು ಎಂದರು.

  ಸಂಘದ ಕಾರ್ಯದರ್ಶಿ ಡಾ.ಅರವಿಂದ ಪಾಟೀಲ್ ಮಾತನಾಡಿ, ಒಂದು ಮಗುವಿನ ಜೀವನದಲ್ಲಿ ಶಿಕ್ಷಣ ಅತಿಮುಖ್ಯವಾದದ್ದು. ಇದರಿಂದ ಅವರ ಮುಂದಿನ ಭವಿಷ್ಯವೂ ಯಶಸ್ವಿಯಾಗಿ ಕಾಣಲು ಸಾಧ್ಯ. ಶಿಕ್ಷಕ ಉತ್ತಮ ನಾಯಕನಾಗಿರಬೇಕು. ಅಪಾರ ಜ್ಞಾನ ಭಂಡಾರವನ್ನು ಹೊಂದಿ ಮಕ್ಕಳಲ್ಲಿ ಆತ್ಮವಿಶ್ವಾಸ ಹಾಗೂ ಮನೋಧೈರ್ಯ ನೀಡಬೇಕು ಎಂದು ತಿಳಿಸಿದರು. ಪ್ರಾಚಾರ್ಯೆ ಸುನಂದಾ ಎಂ. ಪಾಟೀಲ್, ತರಬೇತುದಾರರಾದ ಪೊಂಗಲ್ ಪುನೀತ್, ಸರಳಾ ಶಂಕರ ನಾಯರ್ ಇದ್ದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts