More

    ಗಂಭೀರ ಚರ್ಚೆ ನಿರೀಕ್ಷಿತ: ಅಧಿವೇಶನದಲ್ಲಿ ವೈಯಕ್ತಿಕ ಆರೋಪ, ಜಟಾಪಟಿ

    ವಿಧಾನಮಂಡಲ ಅಧಿವೇಶನ ಜುಲೈ 3ರಂದು ಆರಂಭವಾಗಿದ್ದು, ಜುಲೈ 21ರವರೆಗೆ ನಡೆಯಲಿದೆ. ಮೊದಲ ದಿನದಂದು ಜಂಟಿ ಅಧಿವೇಶನ ಉದ್ದೇಶಿಸಿ ರಾಜ್ಯಪಾಲರ ಭಾಷಣ ಮಾಡಿದ್ದಾರೆ. ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜುಲೈ 7ರಂದು ಬೃಹತ್ ಗಾತ್ರದ ಆಯವ್ಯಯವನ್ನೂ ಮಂಡಿಸಿದ್ದಾರೆ. ಆದರೆ, 13ನೇ ವಿಧಾನಸಭೆಯ ಮೊದಲ ಹಾಗೂ ಸಾಕಷ್ಟು ಮಹತ್ವವುಳ್ಳ ಅಧಿವೇಶನವು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯುಳ್ಳ ಗಂಭೀರ ಚರ್ಚೆಗಳ ಕೊರತೆ ಎದುರಿಸುತ್ತಿರುವಂತೆ ಕಾಣುತ್ತಿದೆ. ಪಕ್ಷ ರಾಜಕೀಯ ಜಟಾಪಟಿ ವೈಯಕ್ತಿಕ ಟೀಕೆ-ಟಿಪ್ಪಣಿ, ಅನಗತ್ಯ ವಾಗ್ವಾದಗಳಿಗೆ ಸದನವು ಸಾಕ್ಷಿಯಾಗುತ್ತಿದ್ದು, ಬಹುಮೂಲ್ಯ ಸಮಯವು ವ್ಯಯವಾಗುತ್ತಿರುವುದು ಗೋಚರಿಸುತ್ತಿದೆ.

    ಅಧಿವೇಶನದ ಆರಂಭದಲ್ಲಿಯೇ ವರ್ಗಾವಣೆ ದಂಧೆ ಸಾಕ್ಷ್ಯ ಕುರಿತ ಪೆನ್​ಡ್ರೖೆವ್ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಪಕ್ಷ, ವಿರೋಧ ಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಪೆನ್​ಡ್ರೖೆವ್ ಸಾಕ್ಷ್ಯ ವೀಕ್ಷಣೆಗೆ ಸದನದಲ್ಲಿ ವ್ಯವಸ್ಥೆ ಮಾಡಿ ಎಂಬ ಕುಮಾರಸ್ವಾಮಿ ಮಾತಿಗೆ ಬಿಜೆಪಿ ಸದಸ್ಯರೂ ಬೆಂಬಲ ವ್ಯಕ್ತಪಡಿಸಿದರು. ತದನಂತರ ಕುಮಾರಸ್ವಾಮಿ ಅವರು ನಾಗಮಂಗಲ ಬಸ್ ಚಾಲಕನ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಚಲುವರಾಯ ಸ್ವಾಮಿ ಹೆಸರು ಕೇಳಿಬಂದ ಹಿನ್ನಲೆಯಲ್ಲಿ ಅವರನ್ನು ವಜಾ ಮಾಡಬೇಕು ಎಂದು ಒತ್ತಾಯಿಸಿದರು. ವರ್ಗಾವಣೆ ದಂಧೆ ಮತ್ತು ಚಾಲಕನ ಆತ್ಮಹತ್ಯೆ ಯತ್ನದ ಬಗ್ಗೆ ಚರ್ಚೆ ಮಾಡಲು ಅವಕಾಶ ನೀಡುವಂತೆ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸದನದ ಬಾವಿಗಳಿದಿದ್ದರಿಂದ ಸದನವನ್ನು ಮುಂದೂಡಲಾಯಿತು. ಚಿಕ್ಕೋಡಿಯ ನಂದಿಪರ್ವತ ಆಶ್ರಮದ 108 ಶ್ರಾವಕುಮಾರ ನಂದಿ ಮಹಾರಾಜ ಜೈನ ಮುನಿಗಳ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ವಿಧಾನಮಂಡಲದ ಉಭಯ ಸದನಗಳಲ್ಲಿ ಬಿಜೆಪಿ ಸದಸ್ಯರು ಆಗ್ರಹಿಸಿದ ಸಂದರ್ಭದಲ್ಲೂ ಕಾಂಗ್ರೆಸ್ ಹಾಗೂ ವಿರೋಧ ಪಕ್ಷಗಳ ನಡುವೆ ಸಾಕಷ್ಟು ವಾಗ್ವಾದ ನಡೆಯಿತು. ಇದಾದ ನಂತರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ವರ್ಗಾವಣೆಯಲ್ಲಿ ವ್ಯಾಪಾರ ಆಗಿದೆ ಎಂದು ಆರೋಪ ಮಾಡಿದಾಗ, ಡಿ.ಕೆ.ಶಿವಕುಮಾರ್, ‘ಏ.. ಕೂತ್ಕೋಳಯಾ’ ಎಂದು ಏಕವಚನದಲ್ಲೇ ಪ್ರತಿಕ್ರಿಯಿಸಿದ್ದಕ್ಕೂ ಸದನ ಸಾಕ್ಷಿಯಾಯಿತು.

    ಹೀಗೆ ವೈಯಕ್ತಿಕ, ರಾಜಕೀಯ ಆರೋಪ- ಪ್ರತ್ಯಾರೋಪಗಳೇ ಸದನದಲ್ಲಿ ಮೇಲುಗೈ ಸಾಧಿಸುತ್ತಿರುವಂತಿದ್ದು, ಸಾರ್ವಜನಿಕ ಹಿತಾಸಕ್ತಿಯುಳ್ಳ ಗಂಭೀರ ಚರ್ಚೆ-ಸಮಾಲೋಚನೆಯ ಅಭಾವ ಕಾಣುತ್ತಿದೆ. ಸದನದಲ್ಲಿ ನಿಗದಿತ ಕಾರ್ಯಕಲಾಪಗಳು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ತಕ್ಷಣವೇ ಕಂಡುಬರುವ ಸಾರ್ವಜನಿಕ ಮಹತ್ವದ ಸಂಗತಿಗಳನ್ನು ರ್ಚಚಿಸಲೂ ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕವಾಗಿ ಅತ್ಯಂತ ಮಹತ್ವವಾದ ಮತ್ತು ಜರೂರಾದ ವಿಷಯಗಳನ್ನು ನಿಲುವಳಿ ಸೂಚನೆ ರೂಪದಲ್ಲಿ ಪ್ರಸ್ತಾಪ ಮಾಡಲು ನಿಯಮ 60ರ ಹಾಗೂ ನಿಯಮ 69ರ ಅಡಿ ಆಸ್ಪದವಿದೆ. ಸಾರ್ವಜನಿಕ ಮಹತ್ವದ ವಿಷಯಗಳನ್ನು ಸಚಿವರ ಗಮನಕ್ಕೆ ತರಲು ನಿಯಮ 73ರ ಅಡಿಯಲ್ಲಿ ಶಾಸಕರಿಗೆ ಅವಕಾಶ ಕಲ್ಪಿಸಲಾಗಿದೆ. ಇಂತಹ ವಿಷಯಗಳನ್ನು ಶೂನ್ಯ ವೇಳೆಯಲ್ಲಿಯೂ ಪ್ರಸ್ತಾಪ ಮಾಡಬಹುದಾಗಿದೆ.

    ಸರ್ಕಾರದ ನೀತಿ, ಕಾರ್ಯಕ್ರಮ, ಯೋಜನೆ, ಆಡಳಿತ ಸರಿಯಾಗಿಲ್ಲದಿದ್ದರೆ ಅವುಗಳನ್ನು ವಿರೋಧಿಸುವ ಹಾಗೂ ಟೀಕಿಸುವ ಹಕ್ಕು ಸದನದ ಪ್ರತಿ ಸದಸ್ಯರಿಗೆ ಇದ್ದೇ ಇರುತ್ತದೆ. ಆದರೆ, ಈ ಟೀಕೆ, ಆರೋಪಗಳು ಗಂಭೀರ ಸ್ವರೂಪದಲ್ಲಿರಬೇಕು; ಸಾಕ್ಷಿ, ಅಂಕಿ-ಅಂಶಗಳ ಸಮೇತವಾಗಿರಬೇಕು; ರ್ತಾಕ ಅಂತ್ಯಕ್ಕೆ ಕೊಂಡೊಯ್ಯುವಂತಿರಬೇಕು. ಹೀಗಾದರೆ ಮಾತ್ರ ಸದನದ ಬಹುಮೂಲ್ಯ ಸಮಯ ಸದ್ಬಳಕೆಯಾಗುತ್ತದೆ ಹಾಗೂ ಶಾಸಕರ ವರ್ತನೆ ಬಗೆಗೆ ಸಾರ್ವಜನಿಕರಲ್ಲೂ ಸದಭಿಪ್ರಾಯ ಮೂಡುತ್ತದೆ.

    ಕಂಪನಿ ಎಂಡಿ, ಸಿಇಒ ಇಬ್ಬರನ್ನೂ ಹಾಡಹಗಲೇ ಬರ್ಬರವಾಗಿ ಕೊಂದ ಮಾಜಿ ಉದ್ಯೋಗಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts