ಕುಂದಾಪುರ ಮೆಸ್ಕಾಂ ಕಚೇರಿಯಲ್ಲಿ ಸನ್ಮಾನ

mescom
ಮೆಸ್ಕಾಂ ಕುಂದಾಪುರ ವಿಭಾಗದ 19 ಶಾಖೆಗಳಿಂದ ಎಲ್ಲ ಶಾಖೆಗಳ ಪರವಾಗಿ ನೌಕರರನ್ನು ಅಭಿನಂದಿಸಲಾಯಿತು
Published on

ಗಂಗೊಳ್ಳಿ: ಮೆಸ್ಕಾಂ ಕುಂದಾಪುರ ವಿಭಾಗ ಕಚೇರಿಯಲ್ಲಿ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಯಶವಂತ ಧ್ವಜಾರೋಹಣಗೈದರು.
ಈ ವರ್ಷದ ವಿಪರೀತ ಗಾಳಿ ಮಳೆ ಲೆಕ್ಕಿಸದೆ ವಿದ್ಯುತ್ ಮರು ಸ್ಥಾಪಿಸುವಲ್ಲಿ ಸೇವೆ ಸಲ್ಲಿಸಿದ ವಿಭಾಗದ 19 ಶಾಖೆಗಳಿಂದ ಎಲ್ಲ ಶಾಖೆಗಳ ಪರವಾಗಿ ಓರ್ವ ನೌಕರನನ್ನು ಅಭಿನಂದಿಸಿ ಗೌರವಿಸಲಾಯಿತು.

ವಿಭಾಗದ ಲೆಕ್ಕಾಧಿಕಾರಿ ಶಿವಕುಮಾರ್, ಸುಮಾ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಶೆಟ್ಟಿ, ಸುಶಾನ್, ಸಹಾಯಕ ಇಂಜಿನಿಯರ್ ಭರತ್ ರಾಜ್ ಶೆಟ್ಟಿ, ರಾಘವೇಂದ್ರ ಎಂ., ಸುಧಾಕರ್ ಪೂಜಾರಿ, ಶಾಖಾಧಿಕಾರಿ ರಾಘವೇಂದ್ರ ಎನ್., ಅಧಿಕಾರಿಗಳು, ನೌಕರರು ಉಪಸ್ಥಿತರಿದ್ದರು. ಸ್ಥಳೀಯ ಸಮಿತಿ ಅಧ್ಯಕ್ಷ ಅಭಿಲಾಷ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಮಹಾರುದ್ರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net