

ಕೋಟ: ಕೋಟತಟ್ಟು ಪಡುಕರೆ ಹಾಲು ಉತ್ಪಾದಕರ ಸಂಘ ಆಶ್ರಯದಲ್ಲಿ ಜಂತುಹುಳು ನಿವಾರಣಾ ಮಾತ್ರೆ ವಿತರಣೆ ಇತ್ತೀಚೆಗೆ ಸಂಘದ ವಠಾರದಲ್ಲಿ ಜರುಗಿತು.
ಸಾಸ್ತಾನ ಕ್ಯಾಂಪ್ ಒಕ್ಕೂಟ ವೈದ್ಯ ಡಾ.ನಿಜಾಮ್ ಪಟೇಲ್ ಹೈನುಗಾರಿಕೆ, ನಿರ್ವಹಣೆ ಬಗ್ಗೆ ಮಾಹಿತಿ ನೀಡಿದರು. ಬಳಿಕ ಸದಸ್ಯರ ಸಾಮಾನ್ಯ ಸಭೆ ನಡೆಯಿತು. ಸಂಘ ಅಧ್ಯಕ್ಷ ಶಿವಮೂರ್ತಿ ಕೆ. ಅಧ್ಯಕ್ಷತೆ ವಹಿಸಿದ್ದರು. ದ.ಕ. ಹಾಲು ಒಕ್ಕೂಟ ನಿರ್ದೇಶಕ ಕಮಲಾಕ್ಷ ಹೆಬ್ಬಾರ್, ಒಕ್ಕೂಟ ವಿಸ್ತರಣಾಧಿಕಾರಿ ಸರಸ್ವತಿ, ಸಂಘದ ಸಿಇಒ ವೀಣಾ, ಹಾಲು ಪರೀಕ್ಷಕಿ ಮಮತಾ ಐತಾಳ್ ಉಪಸ್ಥಿತರಿದ್ದರು. ಸಿಇಒ ವೀಣಾ ಸ್ವಾಗತಿಸಿದರು.