ಹನಿಟ್ರಾಪ್ ಯುವತಿ ಮೇಲೆ ಇನ್ನೊಂದು ಕೇಸು

Published on

ಕಾಸರಗೋಡು: ಇನ್‌ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡು, ನಂತರ ಹನಿಟ್ರಾಪ್‌ನಲ್ಲಿ ಸಿಲುಕಿಸಿ ಯುವಕನಿಂದ ಚಿನ್ನ ಮತ್ತು ಹಣ ವಸೂಲಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಬಂಧಿತಳಾಗಿರುವ ಚೆಮ್ನಾಡ್ ಕೊಂಬನಡ್ಕ ನಿವಾಸಿ ಶ್ರುತಿ ಚಂದ್ರಶೇಖರ್ ವಿರುದ್ಧ ಕಾಸರಗೋಡು ಪೊಲೀಸರು ಮತ್ತೊಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೈಲಾಟಿ ಕಿಳಕ್ಕೇಕರ ನಿವಾಸಿ ದೇವಿದಾಸ್ ಎಂಬುವರು ತನ್ನಿಂದ 73 ಸಾವಿರ ರೂ. ನಗದು ಹಾಗೂ 83.83 ಗ್ರಾಂ ಚಿನ್ನ ಪಡೆದು ವಾಪಾಸು ಮಾಡದೆ ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಮೇಲ್ಪರಂಬ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಪ್ರಕರಣವೊಂದಕ್ಕೆ ಸಂಬಂಧಿಸಿ ಉಡುಪಿಯಲ್ಲಿ ತಲೆಮರೆಸಿಕೊಂಡು ವಾಸಿಸುತ್ತಿದ್ದ ಈಕೆಯನ್ನು ಮೇಲ್ಪರಂಬ ಠಾಣೆ ಪೊಲೀಸರು ಅಲ್ಲಿನ ಪೊಲೀಸರ ನೆರವಿನಿಂದ ಇತ್ತೀಚೆಗೆ ಬಂಧಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net