ಕರಾವಳಿ ವೈವಿಧ್ಯತೆಯ ನಾಡು ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಗುರುಪುರ ಕಂಬಳ ಸಮಿತಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ಹೇಳಿಕೆ

mng--30 july Nirumarga Sports
Published on

ಮಂಗಳೂರು: ತುಳುನಾಡು ಕಲೆ, ಸಂಸ್ಕೃತಿ, ಜಾನಪದ ವೈವಿಧ್ಯತೆ, ವಿಶಿಷ್ಟ ಆಹಾರ ಪದ್ಧತಿ, ವಿಭಿನ್ನತೆಗಳನ್ನೊಳಗೊಂಡ ನಾಡಾಗಿದ್ದು, ಸಂಘ-ಸಂಸ್ಥೆಗಳ ನಿರಂತರ ಚಟುವಟಿಕೆಗಳಿಂದ ಈ ನೆಲದ ಕಂಪು ಉಳಿದಿದೆ ಎಂದು ಗುರುಪುರ ಕಂಬಳ ಸಮಿತಿ ಅಧ್ಯಕ್ಷ ರಾಜ್‌ಕುಮಾರ್ ಶೆಟ್ಟಿ ಹೇಳಿದರು.
ನೀರುಮಾರ್ಗ ಸಮೀಪದ ಪಡು ಶ್ರೀ ವ್ನಿೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ 34ನೇ ಗಣೇಶೋತ್ಸವದ ಕ್ರೀಡೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.


ಶ್ರೀ ವ್ನಿೇಶ್ವರ ಗ್ರಾಮೀಣಾಭಿವೃದ್ಧಿ ಸ್ಥಾಪನೆಯಾದ ದಿನದಿಂದಲೇ ಉತ್ತಮ ಕಾರ್ಯಚಟುವಟಿಕೆ ಮೂಲಕ ಜಿಲ್ಲೆಯಲ್ಲೇ ಉತ್ತಮ ಸಂಘಟನೆಯಾಗಿ ಬೆಳೆದಿದೆ. ಈ ಮೂಲಕ ಮುಂದಿನ ಪೀಳಿಗೆಗೆ ಉತ್ತಮ ಸಂಸ್ಕಾರ, ಆಧ್ಯಾತ್ಮ ಚಿಂತನೆಯ ಅರಿವು ಮೂಡಿಸುವ ಕೆಲಸವಾಗುತ್ತಿದೆ. ಇಂತಹ ಕಾರ್ಯಗಳಿಗೆ ನಾವೆಲ್ಲರೂ ಕೈಜೋಡಿಸುವ ಮೂಲಕ ಪ್ರೋತ್ಸಾಹಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.


ಪಡು ಬದಿನಡಿ ಕ್ಷೇತ್ರದ ಆಡಳಿತ ಮೊಕ್ತೇಸರ ಗೋಪಾಲಕೃಷ್ಣ ಭಂಡಾರಿ ಮಜಲು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ವಾಮಂಜೂರು ಅಮೃತೇಶ್ವರ ಯಕ್ಷಗಾನ ಪ್ರತಿಷ್ಠಾನದ ಅಧ್ಯಕ್ಷ ದೀಪಕ್ ಶೆಟ್ಟಿ ಲಿಂಗಮಾರುಗುತ್ತು, ನೀರುಮಾರ್ಗ ಪಂಚಾಯಿತಿ ಸದಸ್ಯ ಕೀರ್ತಿರಾಜ್ ಗುರಿಹಿತ್ಲು ಪ್ರಗತಿಪರ ಕೃಷಿಕ ನಾರಾಯಣ ಪೂಜಾರಿ ಸತ್ತಿಕಲ್ಲು, ಉದ್ಯಮಿ ಸಂತೋಷ್ ಕುಮಾರ್, ವ್ನಿೇಶ್ವರ ಸಮಿತಿ ಮಾಜಿ ಅಧ್ಯಕ್ಷ ಪಿ. ನಾಗೇಶ್ ಪಿಲ್ಚಂಡಿ, ಶ್ರೀ ವ್ನಿೇಶ್ವರ ರಜತ ಪ್ರಭಾವಳಿ ಸಮಿತಿ ಪ್ರಧಾನ ಸಂಚಾಲಕ ಭಾಸ್ಕರ್ ಮಾಣೂರು, ಮೇಲ್ವಿಚಾರಕ ರಮೇಶ್ ಆಚಾರ್ಯ ನೀರುಮಾರ್ಗ, ಸಮಿತಿ ಅಧ್ಯಕ್ಷ ಅರುಣ್ ಬಿತ್ತ್‌ಪಾದೆ, ಮಹಿಳಾ ಸಂಚಾಲಕಿ ಪದ್ಮಾವತಿ ಉಪಸ್ಥಿತರಿದ್ದರು.


ಸಲಹಾ ಮತ್ತು ಅಭಿವೃದ್ಧಿ ಸಮಿತಿ ಸದಸ್ಯ ವಿಜಯ್ ಕೋಟ್ಯಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ತುಳುನಾಡಿನ ಅಡ್ಯೆಗಳ ಪ್ರದರ್ಶನ: ಕ್ರೀಡೋತ್ಸವದಲ್ಲಿ ತುಳುನಾಡಿನ ವಿಶಿಷ್ಟ, ಅಪರೂಪದ 50ಕ್ಕೂ ಅಧಿಕ ಅಡ್ಯೆಗಳ ಪ್ರದರ್ಶನ ನಡೆಯಿತು. ಕ್ರೀಡೋತ್ಸವದಲ್ಲೂ ಗ್ರಾಮೀಣ ಕ್ರೀಡೆಗಳಿಗೆ ವಿಶೇಷ ಆದ್ಯತೆ ನೀಡಲಾಗಿತ್ತು.

c
ಶ್ರೀ ವ್ನಿೇಶ್ವರ ಗ್ರಾಮೀಣಾಭಿವೃದ್ಧಿ ಸೇವಾ ಸಮಿತಿಯ ಬಹುತೇಕ ಕಾರ್ಯಕ್ರಮದಲ್ಲಿ ನಾನು ಭಾಗವಹಿಸುತ್ತಿದ್ದು, ಪ್ರತಿಯೊಂದು ಕಾರ್ಯಕ್ರಮಗಳು ಒಂದಕ್ಕೊಂದು ಭಿನ್ನವಾಗಿದೆ. ನನ್ನ ವ್ಯಾಪ್ತಿಯಲ್ಲಿ ಇಂತಹ ಸಂಘವಿದೆ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ. ಈ ಸಂಸ್ಥೆ ನಿಜಕ್ಕೂ ನಮ್ಮ ನೆಲದ ಸಂಸ್ಕೃತಿ ಉಳಿಸಿ ಬೆಳೆಸುವುದರ ಜತೆಗೆ ಮುಂದಿನ ಪೀಳಿಗೆಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ.
-ಡಾ.ವೈ. ಭರತ್ ಶೆಟ್ಟಿ, ಶಾಸಕರು, ಮಂಗಳೂರು ಉತ್ತರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net