ರಘುವಂಶಿ ಹತ್ಯೆ ಕೇಸ್​ನಲ್ಲಿ ಇಬ್ಬರಿಗೆ ಬೇಲ್​! ಸೋನಮ್​-ರಾಜ್​ ಒಳಗೆ, ಸಹಚರರು ಹೊರಗೆ​​ | Honeymoon Murder

Meghalaya Honeymoon Case
Published on

Honeymoon Murder: ಇಡೀ ದೇಶವನ್ನೇ ಬೆಚ್ಚಿಬೀಳಿಸಿರುವ ಮೇಘಾಲಯ ಹನಿಮೂನ್ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಸೋನಮ್​ ಮತ್ತು ಆಕೆಯ ಪ್ರಿಯಕರ ಸದ್ಯ ಪೊಲೀಸ್ ಠಾಣೆಯಲ್ಲಿ ಕಂಬಿ ಎಣಿಸುತ್ತಿದ್ದಾರೆ. ಪ್ರಸ್ತುತ ಕೊಲೆ ಪ್ರಕರಣದ ತನಿಖೆ ಚುರುಕಿನಿಂದ ಸಾಗಿದ್ದೇ ಆದರೂ ಸೋನಮ್ ಮಾತ್ರ ಮೌನಕ್ಕೆ ಜಾರಿದ್ದಾಳೆ. ಅತ್ತ ಮಗ ರಾಜಾ ರಘುವಂಶಿಯನ್ನು ಕಳೆದುಕೊಂಡು ತಾಯಿ ಕಣ್ಣೀರಿಡುತ್ತಿದ್ದರೆ, ಇತ್ತ ಕೊಲೆ ಕೇಸ್​ನಲ್ಲಿ ಹೊಸ ಬೆಳವಣಿಗೆ ಕಂಡುಬಂದಿದೆ.

ಈಗಲೂ ತನಿಖೆ ಹಂತದಲ್ಲಿರುವ ರಾಜಾ ರಘುವಂಶಿ ಕೊಲೆ ಪ್ರಕರಣದಲ್ಲಿ ಮೃತ ರಾಜಾ ಪತ್ನಿ ಸೋನಮ್​ ಪ್ರಿಯಕರ ರಾಜ್​ ಕುಶ್ವಾ ಜೊತೆಗೆ ಕೈಜೋಡಿಸಿದ್ದ ಇಬ್ಬರಿಗೆ ಇದೀಗ ಶಿಲ್ಲಾಂಗ್ ಕೋರ್ಟ್​ ಜಾಮೀನು ನೀಡಿದೆ. ಲೋಕೆಂದ್ರ ಸಿಂಗ್ ತೋಮರ್​ ಮತ್ತು ಬಲ್ಬಿರ್​ ಅಹಿರ್​ವರ್​ಗೆ ನ್ಯಾಯಾಲಯ ಷರತ್ತುಬದ್ಧ ಜಾಮೀನನ್ನು ಮಂಜೂರು ಮಾಡಿದೆ. ಈ ಇಬ್ಬರು ಕೊಲೆ ಪ್ರಕರಣದಲ್ಲಿ ಬಂಧಿತರಾಗಿದ್ದ ಆರೋಪಿಗಳು. ಆದರೆ, ವಿಚಾರಣೆ ನಡೆಸಿದ ಕೋರ್ಟ್​, ಹಲವು ನಿಯಮಗಳನ್ನು ಜಾರಿಗೊಳಿಸಿ, ಷರತ್ತುಬದ್ಧ ಜಾಮೀನಿನ ಮೇರೆಗೆ ಹೊರಗೆ ಕಳುಹಿಸಿದೆ. ಸದ್ಯ ನ್ಯಾಯಾಲಯದ ಈ ಆದೇಶ ಹಲವರ ಅಚ್ಚರಿಗೆ ಕಾರಣವಾಗಿದೆ.

ನೇರ ಪಾಲಿಲ್ಲ!

ರಾಜಾ ಕೊಲೆ ಪ್ರಕರಣದಲ್ಲಿ ಸಹ ಆರೋಪಿಗಳಾದ ಲೋಕೆಂದ್ರ ಸಿಂಗ್ ತೋಮರ್​ ಮತ್ತು ಬಲ್ಬಿರ್​ ಅಹಿರ್​ವರ್​ ನೇರವಾಗಿ ಹತ್ಯೆಯಲ್ಲಿ ಭಾಗಿಯಾಗಿಲ್ಲ. ಬದಲಿಗೆ ಅವರಿಬ್ಬರು ತಮ್ಮನ್ನು ಕರೆದುಕೊಂಡವರು ಏನು ಆದೇಶ ನೀಡಿದ್ದರೋ, ಅದನ್ನು ಮಾತ್ರ ಮಾಡಿದ್ದಾರೆ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಇದನ್ನು ಆಧರಿಸಿದ ನ್ಯಾಯಾಲಯ, ಕಠಿಣ ನಿಯಮ ಮತ್ತು ಷರತ್ತುಬದ್ಧ ಜಾಮೀನಿನ ಮೇರೆಗೆ ಇಬ್ಬರನ್ನೂ ಬಿಡುಗಡೆಗೊಳಿಸಿದೆ. ಈ ಮಧ್ಯೆ ರಾಜಾ ಕುಟುಂಬಸ್ಥರು ತನಿಖೆಯನ್ನು ಶೀಘ್ರವೇ ಮುಗಿಸಿ, ತಪ್ಪಿಸ್ಥರನ್ನು ಶಿಕ್ಷೆಗೆ ಒಳಪಡಿಸಿ ಎಂದು ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?

ಮೇ.23ರಂದು ಮೇಘಾಲಯದ ಚಿರಾಪುಂಜಿಗೆ ಹನಿಮೂನ್ ಸಲುವಾಗಿ ಪ್ರಯಾಣಿಸಿದ್ದ ಇಂದೋರ್​ನ ದಂಪತಿ ಕಾಣೆಯಾಗಿದ್ದರು. ಈ ಪ್ರಕರಣ ಪೊಲೀಸರಿಗೆ ದೊಡ್ಡ ಸವಾಲಾಗಿ ಎದುರಾಗಿತ್ತು. ದಂಪತಿಯ ಪೈಕಿ ಮೊದಲು ರಾಜು ಮೃತದೇಹ ಝರಿ ನಡುವೆ ಪತ್ತೆಯಾಗಿದ್ದು, ಕೊಳೆತ ಸ್ಥಿತಿಯಲ್ಲಿ ಜೂ. 02ರಂದು ಸಿಕ್ಕಿತು. ಈ ಕೇಸ್​ನಲ್ಲಿ ಕಾಣೆಯಾಗಿದ್ದ ಪತ್ನಿಯ ಹುಡುಕಾಟದಲ್ಲಿದ್ದ ಪೊಲೀಸರಿಗೆ ಕಡೆಗೂ ಆಕೆಯೇ ಕೊಲೆಗಾತಿ ಎಂಬುದು ಮೂವರ ಬಂಧನದ ಬಳಿಕ ಸ್ಪಷ್ಟವಾಯಿತು. ಕೊಲೆ ಪ್ರಕರಣದಲ್ಲಿ ಸೋನಮ್​ ಮತ್ತು ಆಕೆಯ ಪ್ರಿಯಕರ ರಾಜ್ ಕುಶ್ವಾ​ ಸೇರಿದಂತೆ ಒಟ್ಟು ಐವರನ್ನು ಖಾಕಿ ಬಂಧಿಸಿ, ತನಿಖೆಗೆ ಒಳಪಡಿಸಿತು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net