ಹೋಂಡಾ ಜಾಝ್​ 2020 ಮಾರುಕಟ್ಟೆಗೆ

916277
Published on

ನವದೆಹಲಿ: ಜಪಾನ್ ಮೂಲದ ಪ್ರಮುಖ ಕಾರು ಉತ್ಪಾದಕ ಕಂಪನಿ ಹೋಂಡಾ ಬುಧವಾರ ಹೊಚ್ಚ ಹೊಸ ಹೋಂಡಾ ಜಾಝ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಅಪ್ಡೇಟ್​ ಆಗಿರುವ ಹ್ಯಾಚ್​ಬ್ಯಾಕ್ ಇದಾಗಿದ್ದು, V, VX ಮತ್ತು ZX ಎಂಬ ಮೂರು ಮಾದರಿಯಲ್ಲಿ ಮತ್ತು ಎರಡು ಟ್ರಾನ್ಸ್​ಮಿಷನ್ ಆಯ್ಕೆಗಳಲ್ಲಿ ಲಭ್ಯವಿದೆ.

ಜಾಝ್​ V MT ಇದರಲ್ಲಿ ಆರಂಭಿಕ ವೇರಿಯಂಟ್​ ಆಗಿದ್ದು 7.49 ಲಕ್ಷ ರೂಪಾಯಿ ಬೆಲೆ ಇದ್ದರೆ, ZX CVT ವೇರಿಯೆಂಟ್​ ಬೆಲೆ 9.73 ಲಕ್ಷ ರೂಪಾಯಿ ಇದೆ. ಹೋಂಡಾ ಇತ್ತೀಚೆಗಷ್ಟೇ ಐದನೇ ತಲೆಮಾರಿನ ಹೋಂಡಾ ಸಿಟಿ ಮತ್ತು ಫೇಸ್​ಲಿಫ್ಟ್ ಮಾಡಿದ WR-V ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು.

ಹೊಸ ಜಾಝ್​ ಗೆ ಬುಕ್ಕಿಂಗ್ ಆರಂಭವಾಗಿದ್ದು, 21,000 ರೂಪಾಯಿ ಟೋಕನ್ ಅಡ್ವಾನ್ಸ್ ಕೊಟ್ಟು ಮುಂಗಡ ಕಾಯ್ದಿರಿಸಕೊಳ್ಳಬಹುದಾಗಿದೆ. ಹೊಸ ಜಾಝ್ ಬಿಎಸ್​ 6 ಮಾದರಿಯದ್ದಾಗಿದ್ದು, 1.2 ಲಿಟರ್​ i-VTEC ಪೆಟ್ರೋಲ್ ಎಂಜಿನ್ ಹೊಂದಿದೆ. ಸ್ಟೈಲಿಶ್ ಲುಕ್ ಹೊಂದಿರುವ ಜಾಝ್, ಮಾರುತಿ ಬಲೆನೋ ಮತ್ತು ಹ್ಯುಂಡೈ ಎಲೈಟ್ ಐ20ಗೆ ಪ್ರತಿಸ್ಪರ್ಧಿಯಾಗಿ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net