

ನವದೆಹಲಿ: ಢಾಭಾ ಒಂದರ ಫ್ರೀಜರ್ನಲ್ಲಿ 25 ವರ್ಷ ಪ್ರಾಯದ ಯುವತಿಯ ಮೃತದೇಹ ಪತ್ತೆಯಾಗಿದ್ದು ಸ್ಥಳದಲ್ಲಿದ್ದ ಎಲ್ಲರಿಗೂ ಒಮ್ಮೆ ಎಲ್ಲರನ್ನೂ ಅಫ್ತಾಬ್ನ ಪ್ರಕರಣವನ್ನು ನೆನಪಾಗಿತ್ತು.
ಈ ಘಟನೆ ನೈಋತ್ಯ ದೆಹಲಿಯ ನಜಾಫ್ಗಢ್ನಲ್ಲಿರುವ ಢಾಭಾದಲ್ಲಿ ನಡೆದಿದ್ದು ಈ ಬಗ್ಗೆ ಪೊಲೀಸರು ಮಾಹಿತಿ ನೀಡಿದ್ದಾರೆ. ಎರಡು-ಮೂರು ದಿನಗಳ ಹಿಂದೆ ಮಹಿಳೆಯನ್ನು ಕೊಂದು ಆಕೆಯ ಶವವನ್ನು ಢಾಭಾದ ಫ್ರೀಜರ್ನಲ್ಲಿ ಇರಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಢಾಭಾ ಮಾಲೀಕ ಸಾಹಿಲ್ ಗಹ್ಲೋಟ್ ನನ್ನು ಬಂಧಿಸಲಾಗಿದೆ.
ಮಹಿಳೆ ದೆಹಲಿಯ ಉತ್ತಮ್ ನಗರದ ನಿವಾಸಿ ಎಂದು ಗುರುತಿಸಲಾಗಿದ್ದು ಢಾಬಾ ಮಾಲೀಕ ಸಾಹಿಲ್ ಗಹ್ಲೋಟ್ ಅವರನ್ನು ಶಂಕೆಯ ಮೇಲೆ ಬಂಧಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಗಹ್ಲೋಟ್ ಮತ್ತು ಮಹಿಳೆ ಸಂಬಂಧದಲ್ಲಿದ್ದರು ಎಂದು ಪೊಲೀಸ್ ಅಧಿಕಾರಿ ವಿಕ್ರಮ್ ಸಿಂಗ್ ಹೇಳಿದ್ದಾ 'ಗೆಹ್ಲೋಟ್ ಬೇರೊಬ್ಬ ಮಹಿಳೆಯನ್ನು ಮದುವೆಯಾಗಬೇಕಾಗಿತ್ತು. ಅವನ ಗೆಳತಿ ಈ ವಿಷಯ ತಿಳಿದಾಗ, ಅವಳು ಅವನನ್ನು ಪ್ರಶ್ನಿಸಿ ತನ್ನನ್ನೇ ಮದುವೆಯಾಗುವಂತೆ ಒತ್ತಾಯಿಸಿದಳು" ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಇದರಿಂದ ಕೋಪಗೊಂಡ ಗೆಹ್ಲೋಟ್ ಆಕೆಯನ್ನು ಕೊಂದು ಶವವನ್ನು ತನ್ನ ಢಾಭಾದ ಫ್ರೀಜರ್ನಲ್ಲಿ ಬಚ್ಚಿಟ್ಟಿದ್ದ. ಇದೀಗ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. (ಏಜೆನ್ಸೀಸ್)