

ನವದೆಹಲಿ: ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸಂಪುಟ ಸಹೋದ್ಯೋಗಿಗು ತಮ್ಮ ವೈಯಕ್ತಿಕ ಸಂಪತ್ತಿನ ಮೌಲ್ಯವನ್ನು ಬಹಿರಂಗಪಡಿಸಿದ್ದಾರೆ. ನರೇಂದ್ರ ಮೋದಿಯವರು ಕಳೆದ ವರ್ಷಕ್ಕಿಂತ ತುಸು ಶ್ರೀಮಂತರಾಗಿದ್ದರೆ, ಗೃಹ ಸಚಿವ ಅಮಿತ್ ಷಾ ಸಂಪತ್ತು ಕಡಿಮೆ ಆಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಆಸ್ತಿ 2019ರಲ್ಲಿ 2.49 ಕೋಟಿ ರೂಪಾಯಿ ಇತ್ತು. ಅದು 2020ರ ಜೂನ್ 30ರ ಹೊತ್ತಿಗೆ 2.85 ಕೋಟಿ ರೂಪಾಯಿಗೆ ಏರಿಕೆಯಾಗಿದೆ. ಇದನ್ನೂ ಓದಿ: ಆದಾಯ ತೆರಿಗೆ ಉಳಿಸೋದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಏನು ಮಾಡ್ತಾರೆ?
ಹಾಗೇ ಇನ್ನೊಂದೆಡೆ ಗೃಹ ಅಮಿತ್ ಷಾ ಅವರ ಸಂಪತ್ತು ಕಳೆದ ವರ್ಷಕ್ಕಿಂತಲೂ ಕಡಿಮೆ ಆಗಿದೆ. 2020ರ ಜೂ.30ಕ್ಕೆ ಅನ್ವಯ ಆಗುವಂತೆ ತಮ್ಮ ಆಸ್ತಿಯ ನಿವ್ವಳ ಮೌಲ್ಯ 28.63 ಕೋಟಿ ರೂ. ಎಂದು ಘೋಷಿಸಿದ್ದಾರೆ. ಆದರೆ ಕಳೆದ 2019ರಲ್ಲಿ ಈ ಷಾ ಸಂಪತ್ತು 32.3 ಕೋಟಿ ರೂಪಾಯಿ ಇತ್ತು. ಹೋದ ವರ್ಷಕ್ಕೆ ಹೋಲಿಸಿದರೆ ಈಗ ಅದು ಕಡಿಮೆಯಾಗಿದೆ.
ಅಮಿತ್ ಷಾ ಅವರು 13.56 ಕೋಟಿ ರೂ.ಮೌಲ್ಯದ 10 ಸ್ಥಿರಾಸ್ತಿಗಳನ್ನು ಹೊಂದಿದ್ದಾರೆ. ಅವರ ಬಳಿ 15,814 ರೂ.ನಗದು ಇದೆ. ಬ್ಯಾಂಕ್ನಲ್ಲಿ 1.04 ಕೋಟಿ ರೂಪಾಯಿ ಸೇವಿಂಗ್ಸ್ ಇದೆ. ವಿಮೆ, ಪಿಂಚಣಿ ಸೇರಿ ಒಟ್ಟು 13.47 ಲಕ್ಷ ರೂ., 2.79 ಲಕ್ಷ ರೂ. ನಿಶ್ಚಿತ ಠೇವಣಿ ಹಾಗೂ 44.47 ಲಕ್ಷ ರೂ.ಚಿನ್ನಾಭರಣಗಳನ್ನು ಷಾ ಹೊಂದಿದ್ದಾರೆ.
ಅಮಿತ್ ಷಾ ಹೂಡಿಕೆ ಮಾಡಿದ್ದ ಕಂಪನಿಗಳ ಷೇರು ಮೌಲ್ಯ ಕುಸಿದಿದ್ದೇ ಅವರ ಆಸ್ತಿ ಮೌಲ್ಯ ಕಡಿಮೆಯಾಗಲು ಕಾರಣ ಎಂದು ಹೇಳಲಾಗಿದೆ.( ಏಜೆನ್ಸೀಸ್)