More

    ವೈಯಕ್ತಿಕ ಸಂಪತ್ತು ಎಷ್ಟೆಂದು ಘೋಷಿಸಿದ್ರು ಪ್ರಧಾನಿ ನರೇಂದ್ರ ಮೋದಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಬಳಿ ವೈಯಕ್ತಿಕ ಸಂಪತ್ತು ಎಷ್ಟು ಇರಬಹುದು? ಹೀಗೊಂದು ಸಾರ್ವಜನಿಕ ಸಂದೇಹವನ್ನು ನಿವಾರಿಸುವ ಪ್ರಯತ್ನವನ್ನು ಪ್ರಧಾನಿ ಮೋದಿ ಸ್ವ ಇಚ್ಛೆಯಿಂದಲೇ ಮಾಡಿದ್ದಾರೆ. ಅವರ ಸಚಿವ ಸಂಪುಟದ ಸಹೋದ್ಯೋಗಿಗಳೂ ತಮ್ಮ ಸಂಪತ್ತಿನ ವಿವರ ಬಹಿರಂಗಪಡಿಸಿದ್ದಾರೆ. 2019ರಲ್ಲಿ 2.49 ಕೋಟಿ ರೂಪಾಯಿ ಇದ್ದಿದ್ದ ಸಂಪತ್ತು 2020ರ ಜೂನ್ 30ಕ್ಕೆ ಅನ್ವಯವಾಗುವಂತೆ 2.85 ಕೋಟಿ ರೂಪಾಯಿ ಆಗಿದೆ ಎಂದು ಪ್ರಧಾನಿ ವಿವರ ನೀಡಿದ್ದಾರೆ. ಈ ಏರಿಕೆ ಅವರ ಬ್ಯಾಂಕ್ ಬ್ಯಾಲೆನ್ಸ್ ಮತ್ತು ಬ್ಯಾಂಕಿನಲ್ಲಿರುವ ನಿಶ್ಚಿತ ಠೇವಣಿಗಳ ಮೌಲ್ಯ ಹೆಚ್ಚಾಗಿರುವ ಕಾರಣ ಆಗಿದೆ.

    ಪ್ರಧಾನಿ ಮೋದಿ ಸಾಲಗಾರರಲ್ಲ
    ಪ್ರಧಾನಿ ಮೋದಿ ಸಾಲಗಾರರಲ್ಲ. ನಗದು ರೂಪದಲ್ಲಿ 31,450 ರೂಪಾಯಿ ಇದ್ದರೆ, ಉಳಿತಾಯ ಖಾತೆಯಲ್ಲಿ 3.38 ಲಕ್ಷ ರೂಪಾಯಿ ಇದೆ. ಗಾಂಧಿನಗರ ಎಸ್​ಬಿಐ ಶಾಖೆಯಲ್ಲಿರುವ ಎಫ್​ಡಿಯಲ್ಲಿ 1,60,28,039 ರೂಪಾಯಿ ಆಗಿದೆ. ಕಳೆದ ವರ್ಷ ಇದು 1,27,81,574 ರೂಪಾಯಿ ಇತ್ತು.

    ಇದನ್ನೂ ಓದಿ: ನೊಂದ ಹೆಣ್ಣು ಮಗಳ ಮೇಲೆ ಕೇಸ್ ಹಾಕಿದ್ದು ಎಷ್ಟು ಸರಿ? ನಾವು ಬೇಲ್​ ಪಡೆಯಲ್ಲ: ಬಿಜೆಪಿ ವಿರುದ್ಧ ಡಿಕೆಶಿ ಕಿಡಿ

    ಚಿನ್ನ ಮತ್ತು ರಿಯಲ್​ ಎಸ್ಟೇಟ್​ ನಲ್ಲಿ ಹೂಡಿಕೆ
    ಪ್ರಧಾನಿ ಮೋದಿಯವರ ಬಳಿ ನಾಲ್ಕು ಚಿನ್ನದ ಉಂಗುರ ಇದ್ದು, 45 ಗ್ರಾಂ ತೂಕ ಇದೆ. ಅದರ ಮೌಲ್ಯ 1,51,875 ರೂಪಾಯಿ. ಅವರು ಷೇರುಗಳಲ್ಲಿ ಹೂಡಿಕೆ ಮಾಡಿಲ್ಲ. ಗಾಂಧಿನಗರದಲ್ಲಿ ಒಂದು ಮನೆ ಮತ್ತು ಸೈಟ್​ ಇದ್ದು ಅದರ ಮೌಲ್ಯ 1.1 ಕೋಟಿ ರೂಪಾಯಿ. ಕುಟುಂಬದ ಸೊತ್ತಿನಲ್ಲೂ ಅವರಿಗೆ ಪಾಲಿದೆ. ಸ್ವಂತ ಕಾರು ಹೊಂದಿಲ್ಲ.

    ಹದಿನೇಳರ ಹುಡುಗಿ ನಾಲ್ಕರ ಬಾಲಕನ ಹತ್ಯೆ ಮಾಡಿ, ಗೋಣಿ ಚೀಲಕ್ಕೆ ತುಂಬಿ ಕಿಟಕಿಯಿಂದ ಕೆಳಕ್ಕೆಸೆದ್ಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts