

Kantara Chapter 1: ಕಾಂತಾರ ಅಧ್ಯಾಯ 1 ಚನಲಚಿತ್ರವು 2025 ರ ಅತ್ಯಂತ ಹೆಚ್ಚು ಚರ್ಚೆಗೆ ಗ್ರಾಸವಾಗಿದ್ದು, ಬಾಕ್ಸ್ ಆಫೀಸ್ಗೆ ಹೆಚ್ಚಿನ ಗಳಿಕೆಯನ್ನು ಮುಂದುವರೆಸಿದೆ. ಇದು 2022 ರ ಬ್ಲಾಕ್ ಬ್ಲಸ್ಟರ್ ಕಾಂತಾರ ಎ ಲೆಜೆಂಡ್ನ ಪೂರ್ವಭಾವಿ ಚಿತ್ರವಾಗಿದ್ದು, ದೇಶೀಯವಾಗಿ ಇದು 500 ಕೋಟಿ ರೂ.ಗಳಿಸಿದೆ ಮತ್ತು ಇನ್ನೂ ಹಣ ಗಳಿಸುತ್ತಿದೆ.
ಆದರೆ, ಈಗ ಈ ದೈವಿಕ ಸಾಹಸಗಾಥೆಯು ಭಾಷೆಗಳು ಮತ್ತು ಸಂಸ್ಕೃತಿಗಳ ಗಡಿಯನ್ನು ಮೀರುವ ಸಮಯ ಬಂದಿದ್ದು, ಹೊಂಬಾಳೆ ಫಿಲ್ಮ್ಸ್, ಕಾಂತಾರ ಅಧ್ಯಾಯ 1 ಇಂಗ್ಲಿಷ್ ಆವೃತ್ತಿಯು ಅಕ್ಟೋಬರ್ 31 ರಿಂದ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿದೆ ಎಂದು ಅಧೀಕೃತವಾಗಿ ತಿಳಿಸಿದೆ.
ಅಧ್ಯಾಯ 1 ಕಾಡುಬೆಟ್ಟು ಶಿವನ ತಂದೆ ಅಣ್ಣಪ್ಪ ನಾಪತ್ತೆಯಾಗಿದ್ದು, ಅವರು 1970 ರಲ್ಲಿ ಭೂತ ಕೋಲ ಆಚರಣೆಯ ಸಮಯದಲ್ಲಿ ಕಣ್ಮರೆಯಾದರು ಮತ್ತು ರಹಸ್ಯವು ಕಾಂತಾರ ಎಂಬ ಹಳ್ಳಿಯ ಬಾವಿಯಲ್ಲಿದೆ ಎಂಬುದರ ಸುತ್ತ ಸಿನಿಮಾ ಸುತ್ತುತ್ತಿದೆ.
ಚಿತ್ರದ ಕಥಾವಸ್ತುವಿನ ಬಗ್ಗೆ ಮಾತನಾಡಿದ ನಿರ್ದೇಶಕ ರಿಷಬ್ ಶೆಟ್ಟಿ , ಇದು ನಮಗೆ ಕೇವಲ ಪುರಾಣ ಕಥೆಯಲ್ಲ. ಇದು ನಮಗೆ, ಒಂದು ಇತಿಹಾಸ. ಅದು ಈ ಸಿನಿಮಾ ಮೂಲಕ ಸಂಭವಿಸಿದೆ ನಾವು ಅದನ್ನು ನಮ್ಮ ಜಾನಪದದಲ್ಲಿ ಕೇಳಿದ್ದೇವೆ. ಹಾಗೂ ಸಂಪ್ರದಾಯದಲ್ಲಿ ಅನುಸರಿಸುತ್ತೇವೆ. ಇದನ್ನು ಕೆಲವರು ಪುರಾಣ ಎಂದರೆ ನಮಗೆ ಇದು ಇತಿಹಾಸ. ಇದಕ್ಕೆ ಪುರಾವೆಗಳಿವೆ ಎಂದು ನಾವು ಭಾವಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಶೇಷವಾಗಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಪ್ರತಿಕ್ರಿಯೆಯನ್ನು ನೋಡಿದಾಗ, ನಮಗೆ ಸಂತೋಷ ಮತ್ತು ಕೃತಜ್ಞತೆ ಉಂಟಾಗುತ್ತದೆ. ನಾವು ಅದನ್ನು ಜವಾಬ್ದಾರಿಯಾಗಿ ತೆಗೆದುಕೊಳ್ಳುತ್ತೇವೆ. ಈ ಯಶಸ್ಸಿಗೆ ಇಡೀ ತಂಡದ ಪ್ರಯತ್ನವೇ ಕಾರಣ. ಎಲ್ಲರೂ ಚಿತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ" ಎಂದು ರಿಷಬ್ ಶೆಟ್ಟಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.
ಕೊನೆಯದಾಗಿ ಪ್ರೇಕ್ಷಕರು ಚಿತ್ರ ಕಥೆ ಮತ್ತು ಪರಿಕಲ್ಪನೆಯೊಂದಿಗೆ ಸಂಪರ್ಕ ಸಾಧಿಸುವುದು ನಮ್ಮ ಗುರಿಯಾಗಿತ್ತು. ನಮಗೆ ಸಿಕ್ಕ ಪ್ರತಿಕ್ರಿಯೆಯನ್ನು ನಾವು ಸ್ವಾಗತಿಸಿದ್ದೇವೆ. ಆದರಿಂದ ಪ್ರೇಕ್ಷಕರಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. (ಏಜೆನ್ಸೀಸ್)