More

    ‘ಕೆಜಿಎಫ್​ ಚಾಪ್ಟರ್ 2’ ಮಲಯಾಳಂ ಅವತರಣಿಕೆಯ ಬಿಡುಗಡೆ ಜವಾಬ್ದಾರಿ ಹೊತ್ತ ಸ್ಟಾರ್ ನಟ

    ಕೊಚ್ಚಿ: ಕೆಜಿಎಫ್​ ಚಾಪ್ಟರ್ 2 ಚಿತ್ರದ ಟೀಸರ್ ಇನ್ನೇನು ಮೂರು ದಿನಗಳಲ್ಲಿ ಬಿಡುಗಡೆ ಆಗಲಿದೆ. ಈಗಾಗಲೇ ಪ್ರಚಾರ ಕಾರ್ಯದಲ್ಲಿ ಸಿನಿಮಾ ತಂಡ ಬಿಜಿಯಾಗಿದ್ದು, ಅಭಿಮಾನಿಗಳಲ್ಲಿ ಕುತೂಹಲ ಮೂಡಿಸುತ್ತಿದೆ. ಬಹುಭಾಷೆಗಳಲ್ಲಿ ಸಿನಿಮಾ ಬಿಡುಗಡೆ ಆಗಲಿರುವುದರಿಂದ ಇಡೀ ದೇಶದ ಸಿನಿಮಾ ಪ್ರೇಮಿಗಳು ಈ ಚಿತ್ರದ ಟೀಸರ್​ನತ್ತ ಕಣ್ಣಿಟ್ಟಿದ್ದಾರೆ. ಅದರಂತೆ ಇದೀಗ ಇದೇ ಸಿನಿಮಾಕ್ಕೆ ಸಂಬಂಧಿಸಿದಂತೆ ಪಕ್ಕದ ಕೇರಳದಿಂದ ಹೊಸ ಸುದ್ದಿ ಬಂದಿದೆ.

    ಇದನ್ನೂ ಓದಿ: ಅಮಿತಾಭ್​ ಮನೆ ಹತ್ತಿರ ಮನೆ ಖರೀದಿಸಿದ ಜಾಹ್ನವಿ … ಬೆಲೆ ಎಷ್ಟು ಗೊತ್ತಾ?

    ಅಂದರೆ, ಕೇರಳದಲ್ಲಿ ಸಿನಿಮಾ ಬಿಡುಗಡೆಯ ಜವಾಬ್ದಾರಿಯನ್ನು ಅಲ್ಲಿನ ಸ್ಟಾರ್ ನಟ ಪೃಥ್ವಿರಾಜ್ ಸುಕುಮಾರನ್ ಹೊತ್ತಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಚಾರ ಹಂಚಿಕೊಂಡಿದ್ದು, ಕೆಜಿಎಫ್​ ಸಿನಿಮಾವನ್ನು ಮಲಯಾಳಂನಲ್ಲಿ ಹಂಚಿಕೆ ಮಾಡುವ ಜವಾಬ್ದಾರಿ ಹೊತ್ತಿದ್ದೇನೆ. ಪೃಥ್ವಿರಾಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಕೇರಳದಲ್ಲಿ ಬಿಡುಗಡೆ ಆಗಲಿದೆ. ಕೆಜಿಎಫ್​ ಚಿತ್ರದ ಬಹುದೊಡ್ಡ ಅಭಿಮಾನಿಗಳಲ್ಲಿ ನಾನೂ ಒಬ್ಬನಾಗಿದ್ದು, ಇದೀಗ ಆ ಚಿತ್ರವನ್ನೇ ಕೇರಳದಾದ್ಯಂತ ಹಂಚಿಕೆ ಮಾಡಲಿದ್ದೇನೆ’ ಎಂದಿದ್ದಾರೆ.

    ಅಂದಹಾಗೆ, ಸೋಮವಾರವಷ್ಟೇ ಕೆಜಿಎಫ್​ ಸಿನಿಮಾ ತಂಡ ವಿಶೇಷವಾದ ಪ್ರಕಾರವನ್ನು ಆರಂಭಿಸಿದೆ. ಕೆಜಿಎಫ್​ ಟೈಮ್ಸ್ ಹೆಸರಿನ ಪತ್ರಿಕೆಯೊಂದನ್ನು ಪ್ರಚಾರಕ್ಕೋಸ್ಕರ ಬಳಸಿಕೊಂಡು, ಆ ಪತ್ರಿಕೆಯಲ್ಲಿ ಬಾಲಕ ರಾಕಿ, ರಾಕಿ ಭಾಯ್ ಆಗಿ ಬೆಳೆದ ರೀತಿಯನ್ನು ವಿವರಿಸಿದ್ದಾರೆ. ಕೆಜಿಎಫ್​ ಮೊದಲ ಭಾಗದ ಒಂದಷ್ಟು ಫೋಟೋಗಳನ್ನು ಅದರಲ್ಲಿ ಪ್ರಕಟಿಸಿ ಸುದ್ದಿ ರೂಪದಲ್ಲಿ ಅಭಿಮಾನಿಗಳಿಗೆ ನೀಡಿದ್ದಾರೆ. ಎರಡನೇ ಭಾಗದಲ್ಲಿ ಏನಾಗಬಹುದು ಎಂಬುದರ ಬಗ್ಗೆಯೂ ಸುಳಿವು ನೀಡಿದ್ದಾರೆ.

    ‘ಕೆಜಿಎಫ್​’ ಚಿತ್ರತಂಡದಿಂದ ಬಂತು ಕೆಜಿಎಫ್​ ಟೈಮ್ಸ್ ಪತ್ರಿಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts