ಕನ್ನಡ ಚಿತ್ರಕ್ಕೆ ಹಾಲಿವುಡ್ ಸಂಸ್ಥೆ ಸಾಥ್; ‘ಕೆಂಡ’ನಿಗೆ ಜತೆಯಾದ ಆಸ್ಕರ್ ಖ್ಯಾತಿಯ ಕಿಲ್ಜಾಯ್ ಫಿಲಂಸ್

kenda
Published on

ಬೆಂಗಳೂರು: ‘ಗಂಟುಮೂಟೆ’ ಚಿತ್ರದ ಛಾಯಾಗ್ರಾಹಕ ಸಹದೇವ್ ನಿರ್ದೇಶನದ ಚಿತ್ರ ‘ಕೆಂಡ’. ಚಿತ್ರವನ್ನು ಸಹದೇವ್ ಜತೆ ‘ಗಂಟುಮೂಟೆ’ ನಿರ್ದೇಶಕಿ ರೂಪಾ ರಾವ್ ನಿರ್ಮಿಸುತ್ತಿದ್ದಾರೆ. ಯುವ ಸಮೂಹ, ರಾಜಕೀಯ, ಅಪರಾಧ ಸೇರಿ ಕೆಲವು ಸಾಮಾಜಿಕ ಅಂಶಗಳನ್ನಿಟ್ಟುಕೊಂಡು ತಯಾರಾಗಿರುವ ಈ ಚಿತ್ರದ ಮೊದಲ ಪೋಸ್ಟರ್ ಇತ್ತೀಚೆಗಷ್ಟೆ ಬಿಡುಗಡೆಯಾಗಿತ್ತು. ಇದೀಗ ಹಾಲಿವುಡ್ ನಿರ್ಮಾಣ ಸಂಸ್ಥೆಯೊಂದು ಕನ್ನಡದ ಚಿತ್ರಕ್ಕೆ ಸಾಥ್ ನೀಡಿದೆ. ಆಸ್ಕರ್, ಬ್ಟಾಾ ಸೇರಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ನ್ಯೂಯಾರ್ಕ್ ಮೂಲದ ಅಂತಾರಾಷ್ಟ್ರೀಯ ನಿರ್ಮಾಣ ಸಂಸ್ಥೆ ಕಿಲ್‌ಜಾಯ್ ಫಿಲಂಸ್ ‘ಕೆಂಡ’ ಚಿತ್ರಕ್ಕೆ ಸಹ ನಿರ್ಮಾಪಕರಾಗಿ ಜತೆಯಾಗಿದೆ.

ಈ ಬಗ್ಗೆ ಸಹದೇವ್, ‘ನಾನು 7 ವರ್ಷ ಅಮೆರಿಕದಲ್ಲಿದ್ದೆ. ಆಗ ಕೆಲವು ಹಾಲಿವುಡ್ ಸಿನಿಮಾಗಳಲ್ಲಿ ಕೆಲಸ ಮಾಡುವಾಗ ಈ ಸಂಸ್ಥೆ ಪರಿಚಯವಾಗಿತ್ತು. ಅವರು ಎಲ್ಲ ದೇಶಗಳಿಂದ ಸಿನಿಮಾ ಆಯ್ಕೆ ಮಾಡಿಕೊಳ್ಳುತ್ತಾರೆ. ಅವುಗಳನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿತರಣೆ ಮಾಡುತ್ತಾರೆ. ಜತೆಗೆ ಪ್ರಶಸ್ತಿಗಳಿಗೂ ಕಳುಹಿಸುತ್ತಾರೆ. ಹಾಗೇ ಮಾಡಿದ ‘ಆ್ಟರ್‌ಸನ್’ ಚಿತ್ರಕ್ಕೆ ಆಸ್ಕರ್, ಭ್ಟಾಾ ಪ್ರಶಸ್ತಿಗಳು ಸಿಕ್ಕಿವೆ. ಈ ಬಾರಿ ಭಾರತದಿಂದ ಆಯ್ಕೆಯಾದ ಏಕೈಕ ಸಿನಿಮಾ ‘ಕೆಂಡ’. ಅವರು ಆಯ್ಕೆ ಮಾಡಿದ ಮೊದಲ ಕನ್ನಡ ಚಿತ್ರವಿದು. ಸಂಸ್ಥೆಯ ಮುಖ್ಯಸ್ಥೆ ಜಾಯ್ ಜಾರ್ಗೆನ್‌ಸನ್ ನಮ್ಮ ಸಿನಿಮಾ ಪ್ರಿವ್ಯೆ ನೋಡಿ ಸಹ ನಿರ್ಮಾಣಕ್ಕೆ ಕೈ ಜೋಡಿಸಿದ್ದಾರೆ’ ಎಂದು ಮಾಹಿತಿ ಹಂಚಿಕೊಳ್ಳುತ್ತಾರೆ. ಇನ್ನು ಚಿತ್ರದ ತಾರಾಗಣ ಬಹುತೇಕ ಹೊಸಬರಿಂದಲೇ ಕೂಡಿದ್ದು, ರಂಗಭೂಮಿ ಪ್ರತಿಭೆಗಳೇ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಬಿ.ವಿ. ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಹದೇವ್, ನಿರ್ದೇಶಕ
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತೀಯ ಸಿನಿಮಾಗಳ ಬಗ್ಗೆ ಒಳ್ಳೆಯ ಅಭಿಪ್ರಾಯಗಳಿವೆ. ಈ ಮೊದಲು ಭಾರತೀಯ ಸಿನಿಮಾ ಎಂದರೆ ಬಾಲಿವುಡ್ ಮಾತ್ರ ಎಂದಾಗಿತ್ತು. ಆದರೆ, ಈಗ ಬದಲಾಗಿದೆ. ಕನ್ನಡ ಬೇರೆ, ಹಿಂದಿ ಬೇರೆ ಎಂದು ವಿವರಿಸಿದ ಬಳಿಕ ಅವರಿಗೂ ಕುತೂಹಲ ಹೆಚ್ಚಾಯಿತು. ಸದ್ಯ ಚಿತ್ರದ ಕೊನೆಯ ಹಂತದ ಕೆಲಸಗಳು ನಡೆಯುತ್ತಿದ್ದು ಸದ್ಯದಲ್ಲೇ ರಿಲೀಸ್ ದಿನಾಂಕವನ್ನು ೋಷಿಸುತ್ತೇವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net