ಹೊಳೆಬಾಗಿಲು ಗರಡಿ ಜಾತ್ರಾ ಮಹೋತ್ಸವ

kon
Published on

ಕೊಕ್ಕರ್ಣೆ: ಶ್ರೀಕ್ಷೇತ್ರ ಹೊಳೆಬಾಗಿಲು ಗರಡಿಯ ಜಾತ್ರಾ ಮಹೋತ್ಸವದ ಅಂಗವಾಗಿ ಧಾರ್ಮಿಕ ಸಭೆ ನಡೆಯಿತು. ಕೊಕ್ಕರ್ಣೆ ಸರ್ಕಾರಿ ಪದವಿಪೂರ್ವ ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಉಪನ್ಯಾಸಕ ಶ್ರೀಧರ್ ಶೆಟ್ಟಿ ಶಿರೂರು ಅಧ್ಯಕ್ಷತೆ ವಹಿಸಿದ್ದರು.

ಮಣಿಪಾಲ ಎಂಐಟಿ ಕಾಲೇಜು ಉಪನ್ಯಾಸಕ ಎಸ್‌ವಿ ಉದಯ್ ಕುಮಾರ್ ಶೆಟ್ಟಿ, ಜಿ.ಪಂ. ನಿಕಟಪೂರ್ವ ಸದಸ್ಯ ಪ್ರತಾಪ್ ಹೆಗ್ಡೆ ಮಾರಾಳಿ, ಶಿಕ್ಷಕ ಅರುಣ್ ಕುಮಾರ್ ಶೆಟ್ಟಿ ಹೊರ್ಲಾಳಿ ದೊಡ್ಮನೆ, ಹೆಗ್ಗುಂಜೆ ಗ್ರಾ.ಪಂ. ಮಾಜಿ ಅಧ್ಯಕ್ಷ ಗಣೇಶ್ ಶೆಟ್ಟಿ, ವಂಡಾರು ಕೃಷ್ಣಪ್ರಸಾದ್ ಕ್ಯಾಶ್ಯೂಸ್ ಸಮೂಹ ಸಂಸ್ಥೆಯ ಸಂಪತ್ ಕುಮಾರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.

ಶ್ರೀಶ ಆಚಾರ್ಯ ಪ್ರಾರ್ಥಿಸಿದರು. ಅಮರ್ ಹೆಗ್ಡೆ ಸ್ವಾಗತಿಸಿದರು. ಶಿಕ್ಷಕ ಪ್ರವೀಣ್ ಕುಮಾರ್ ಶೆಟ್ಟಿ ಪ್ರಸ್ತಾವನೆಗೈದರು. ಸುಕುಮಾರ್ ಶೆಟ್ಟಿ ಕಮಲಶಿಲೆ ವಂದಿಸಿದರು. ಶ್ವೇತ ಹೆಗ್ಡೆ ನಿರೂಪಿಸಿದರು.

ಸಾಂಸ್ಕೃತಿಕ ಕಾರ್ಯಕ್ರಮ, ಗೌರವಾರ್ಪಣೆ

ಶಿವಶಕ್ತಿ ಗೆಳೆಯರ ಬಳಗ ಶಿರೂರು ಹೊಳೆಬಾಗಿಲು ಗರಡಿ ವತಿಯಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಗುತ್ತಿಗೆದಾರ ಗೋಪಾಲಕೃಷ್ಣ ಕನ್‌ಸ್ಟ್ರಕ್ಷನ್ ಉಪ್ಪಿನಕುದ್ರು ಇದರ ರಾಜೇಶ್ ಕಾರಂತ ಅವರನ್ನು ಗೌರವಿಸಲಾಯಿತು. ಮಂದಾರ್ತಿ ಕಲಾಸ್ತುತಿ ಹವ್ಯಾಸಿ ಮಕ್ಕಳ ಕಲಾತಂಡದಿಂದ ಕುಂದಗನ್ನಡ ಹಾಸ್ಯಮಯ ನಗೆ ನಾಟಕ, ಮನುಹಂದಾಡಿ ಮತ್ತು ಕಾರ್ತಿಕ್ ರಾಜ್ ಸಾಸ್ತಾನ ಅವರಿಂದ ಸ್ವರ ನಗೆ ಸಂಜೆ, ಓಂಕಾರ ಕಲಾತಂಡ ಕನ್ನುಕೆರೆ ತೆಕ್ಕಟ್ಟೆ ಅವರಿಂದ ಕುಂದಗನ್ನಡ ಹಾಸ್ಯಮಯ ನಗೆ ನಾಟಕ ವಾಚ್‌ಮ್ಯಾನ್ ಜರುಗಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net