

ಬೆಂಗಳೂರು: ರಾಷ್ಟ್ರೀಯ ಹಾಕಿ ಶಿಬಿರ ನಡೆಯುತ್ತಿದ್ದ ವೇಳೆಯಲ್ಲೇ ಲಾಕ್ಡೌನ್ ಘೋಷಣೆಯಿಂದಾಗಿ ಬೆಂಗಳೂರು ಕ್ರೀಡಾ ಪ್ರಾಧಿಕಾರದಲ್ಲೇ (ಸಾಯ್) ಕಳೆದ ಮೂರು ತಿಂಗಳಿಂದ ಲಾಕ್ ಆಗಿದ್ದ ಆಟಗಾರರು ಇದೀಗ ತವರಿನತ್ತ ತೆರಳಿದ್ದಾರೆ. ಹಾಕಿ ಇಂಡಿಯಾ ಆಟಗಾರರಿಗೆ ಒಂದು ತಿಂಗಳ ವಿಶ್ರಾಂತಿ ನೀಡಿದೆ. ಬೆಂಗಳೂರಿನಲ್ಲೇ ಇದ್ದರೂ ಕುಟುಂಬದಿಂದ ದೂರ ಉಳಿದಿದ್ದ ಎಸ್ವಿ ಸುನೀಲ್, ಮೊನ್ನೆಯಷ್ಟೇ ಕುಟುಂಬ ಸೇರಿಕೊಂಡಿದ್ದು, ಮುದ್ದಾದ ಮಗಳೊಂದಿಗೆ ಆಟವಾಡುತ್ತಿರುವ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸಿದ್ದಾರೆ.
ಇದನ್ನೂ ಓದಿ: ಡಬ್ಲ್ಯುಡಬ್ಲ್ಯುಇ ದಿಗ್ಗಜ ಅಂಡರ್ಟೇಕರ್ ನಿವೃತ್ತಿ
31 ವರ್ಷದ ಸುನೀಲ್, ಕಳೆದ 13 ವರ್ಷಗಳಿಂದ ರಾಷ್ಟ್ರೀಯ ತಂಡದ ಭಾಗವಾಗಿದ್ದಾರೆ. ಇದುವರೆಗೂ 250 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದು, 59 ಗೋಲು ಸಿಡಿಸಿದ್ದಾರೆ. 2014ರ ಇಂಚೋನ್ ಏಷ್ಯಾಡ್ನಲ್ಲಿ ಸ್ವರ್ಣ ಹಾಗೂ 2018ರ ಜಕಾರ್ತ ಏಷ್ಯಾಡ್ನಲ್ಲಿ ಬೆಳ್ಳಿ ಪದಕ ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದರು.