ಹೈದರಾಬಾದ್: ನಮ್ಮ ದೊಡ್ಡಪ್ಪ ಸೂಪರ್ಸ್ಟಾರ್ ಚಿರಂಜೀವಿ( Chiranjeevi) ನಾವು ಚಿಕ್ಕವರಿದ್ದಾಗ ಬೆತ್ತದಿಂದ ಹೊಡೆದು ನಮಗೆ ಬುದ್ಧಿ ಕಲಿಸಿದ್ದರಿಂದ ಇಂದು ಶಿಸ್ತಿನ ಬದುಕು ಕಲಿತ್ತಿದ್ದೇವೆ ಎಂದು ಮೆಗಾಸ್ಟಾರ್ ಸಹೋದರನ ಪುತ್ರ ವರುಣ್ ತೇಜ್ ಹೇಳಿದ್ದಾರೆ.
ಖಾಸಗಿ ಸುದ್ದಿ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿರುವ ವರುಣ್, ನಮ್ಮ ದೊಡ್ಡಪ್ಪ ಕುಟುಂಬವನ್ನು ಒಟ್ಟಿಗೆ ಇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಅವರು, ತಮ್ಮ ಮನೆಯಲ್ಲಿ ಪ್ರತಿ ಭಾನುವಾರ ಒಂದಿಲ್ಲೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಾರೆ. ಈ ಒಂದು ಅಂಶ ನಮ್ಮ ಕುಟುಂಬ ಒಟ್ಟಾಗಿರಲು ಪ್ರಮುಖ ಕಾರಣವಾಯಿತು.
ನಮ್ಮ ದೊಡ್ಡಪ್ಪ ಎಂದಿಗೂ ನಮ್ಮನ್ನು ಕೆಟ್ಟ ದಾರಿ ಹಿಡಿಯಲು ಬಿಡಲಿಲ್ಲ. ನಮ್ಮನ್ನು ವಿನಯವಂತರನ್ನಾಗಿ ಮಾಡಲು ಅವರು ಬಹಳ ಕಷ್ಟಪಟ್ಟಿದ್ದಾರೆ. ನಮ್ಮನ್ನು ಸದಾ ಅವರ ಹಿಡಿತದಲ್ಲಿ ಇಟ್ಟುಕೊಂಡಿದ್ದರು. ನಮಗೆ ಅವರು ಮುಖ್ಯೋಪಾಧ್ಯಾರು ಇದ್ದಂತೆ. ಅವರಿಂದ ಬಹಳಷ್ಟು ಕಲಿತಿದ್ದೇವೆ. ಇಡೀ ನಮ್ಮ ಕುಟುಂಬಕ್ಕೆ ಮಾರ್ಗದರ್ಶಕರಿದ್ದಂತೆ.
ನಮ್ಮ ಮೇಷ್ಟ್ರು (ಚಿರಂಜೀವಿ), ಅನೇಕ ಬಾರಿ ನಮಗೆ ಬೆತ್ತದಿಂದ ಹೊಡೆದು ಪಾಠ ಕಲಿಸಿದ್ದಾರೆ. ನನಗಿಂತ ಅಲ್ಲು ಅರ್ಜುನ್ ಮತ್ತು ಚರಣ್ ತುಂಬಾ ಹೊಡೆಸಿಕೊಂಡಿದ್ದಾರೆ. ನಾನು ಚಿಕ್ಕವನಾಗಿದ್ದರಿಂದ ಬಚಾವ್ ಆಗುತ್ತಿದೆ. ಅವರು ಹೇಳಿದ ಮಾತು ಕೇಳುತ್ತಿದ್ದೆವು. ನಮಗೆಲ್ಲಾ ಸ್ಫೂರ್ತಿ ಅವರು ಎಂದು ನಟ ಚಿರಂಜೀವಿ ಅವರನ್ನು ವರುಣ್ ತೇಜ್ ಹಾಡಿಹೊಗಳಿದ್ದಾರೆ.(ಏಜೆನ್ಸೀಸ್)
ನಾನು ಅಮೆರಿಕ ಅಧ್ಯಕ್ಷ Donald Trump ಮಗಳು; ಪಾಕಿಸ್ತಾನದ ಯುವತಿ Melania ಹೇಳಿಕೆ ವೈರಲ್