ಹೈಟೆಕ್​ ರೇಷ್ಮೆ ಮಾರುಕಟ್ಟೆಯಿಂದ ಬೆಳೆಗಾರರಿಗೆ ಅನುಕೂಲ; ಬಸವರಾಜ ಶಿವಣ್ಣನವರ

ರಾಣೆಬೆನ್ನೂರ: ಜಿಲ್ಲೆಯ ಹಾಗೂ ಉತ್ತರ ಕರ್ನಾಟಕ ಭಾಗದ ರೇಷ್ಮೆ ಬೆಳೆಗಾರರು ರೇಷ್ಮೆ ಗೂಡು ಮಾರಾಟಕ್ಕೆ ರಾಮನಗರಕ್ಕೆ ಹೋಗುವುದನ್ನು ತಪ್ಪಿಸಿ ಸ್ಥಳಿಯವಾಗಿಯೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಹೈಟೆಕ್​ ರೇಷ್ಮೆ ಮಾರುಕಟ್ಟೆ ನಿಮಿರ್ಸಲಾಗುತ್ತಿದೆ ಎಂದು ಅರಣ್ಯ ಅಭಿವೃದ್ಧಿ ನಿಗಮದ ಅಧ್ಯ ಹಾಗೂ ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕಿನ ಹೂಲಿಹಳ್ಳಿ ಮೆಗಾ ಮಾರುಕಟ್ಟೆ ಪಕ್ಕದಲ್ಲಿ ನಬಾರ್ಡ್​ ಯೋಜನೆಯಡಿ 15 ಕೋಟಿ ರೂ. ವೆಚ್ಚದಲ್ಲಿ ಸರ್ಕಾರಿ ಹೈಟೆಕ್​ ರೇಷ್ಮೆ ಗೂಡು ಮಾರುಕಟ್ಟೆ ನಿರ್ಮಾಣಕ್ಕೆ ಸೋಮವಾರ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಸದ್ಯ ಜಿಲ್ಲೆಯಲ್ಲಿ 8 ಸಾವಿರ ಎಕರೆ ಪ್ರದೇಶದಲ್ಲಿ 3300 ರೈತರು ರೇಷ್ಮೆ ಕೃಷಿ ಮಾಡುತ್ತಿದ್ದಾರೆ. ಇಲ್ಲಿ ಮಾರುಕಟ್ಟೆ ನಿಮಿರ್ಸುತ್ತರುವುದರಿಂದ ಸ್ಥಳಿಯ ರೈತರಿಗೆ ಬಹಳಷ್ಟು ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಮಾರುಕಟ್ಟೆ ಕಟ್ಟಡದ ಜತೆ ಪರಸ್ಥಳದಿಂದ ಬರುವ ರೈತರಿಗೆ ಉಳಿದುಕೊಳ್ಳುವ ಸಲುವಾಗಿ ರೈತ ಭವನ ಸಹ ನಿಮಿರ್ಸಲಾಗುವುದು ಎಂದರು.
ಗುಡ್ಡದ ಆನ್ವೇರಿ ಗ್ರಾಪಂ ಅಧ್ಯೆ ಬಸಮ್ಮ ತಳವಾರ ಅಧ್ಯತೆ ವಹಿಸಿದ್ದರು.
ತಹಸೀಲ್ದಾರ್​ ಆರ್​.ಎಚ್​. ಭಗವಾನ್​, ರೇಷ್ಮೆ ಇಲಾಖೆ ಉಪ ನಿರ್ದೇಶಕ ಎಂ.ಎಸ್​. ಪಾಟೀಲ, ರೇಷ್ಮೆ ಅಧಿಕಾರಿ ಬಾಲರಾಜ ಅಂಗಡಿ, ಜಿಪಂ ಮಾಜಿ ಅಧ್ಯ ಏಕನಾಥ ಭಾನುವಳ್ಳಿ, ಎಪಿಎಂಸಿ ಮಾಜಿ ಅಧ್ಯ ಬಸವರಾಜ ಸವಣೂರ, ಗ್ರಾಪಂ ಮಾಜಿ ಅಧ್ಯ ಮಾಲತೇಶ ಮಾಸಣಗಿ, ವಿ.ಪಿ. ಪೋಲಿಸಗೌಡ್ರ, ಅಶೋಕ ಅರಳೇಶ್ವರ, ರತ್ನವ್ವ ಬಾದಿ, ಸಿ.ಸಿ. ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Share This Article

ಭಗವಂತ ಶ್ರೀರಾಮನ ಜೀವನದ ಈ 5 ತತ್ವವನ್ನು ಅಳವಡಿಸಿಕೊಳ್ಳಿ | Success Tips

ಭಾರತದಲ್ಲಿ ಶ್ರೀರಾಮನನ್ನು ಅತಿ ಹೆಚ್ಚು ಪೂಜಿಸಲಾಗುತ್ತದೆ. ಲಂಕಾದ ರಾವಣನ ಮೇಲೆ ಶ್ರೀರಾಮನ ವಿಜಯವನ್ನು ಇಂದಿಗೂ ದಸರಾ…

ಅತಿಯಾಗಿ ಯೋಚಿಸುವುದನ್ನು ನಿಲ್ಲಿಸಿ! ಸೈಲೆಂಟ್ ಆಗಿ ನಿಮ್ಮನ್ನು ಕಿಲ್ಲ ಮಾಡುತ್ತೆ Over Thinking ಅಭ್ಯಾಸ…

ಬೆಂಗಳೂರು:  ಇಂದಿನ ಬಿಡುವಿಲ್ಲದ ಜೀವನದಲ್ಲಿ ನಾವೆಲ್ಲರೂ ಸಣ್ಣ ಪುಟ್ಟ ವಿಚಾರಗಳನ್ನು ಹೆಚ್ಚು ಯೋಚಿಸುತ್ತೇವೆ ( Over…

ಹೆಂಗಸರು ಪ್ರತಿದಿನ ಹೂವು ಮುಡಿಯುವುದರಿಂದ ಆಗುವ ಲಾಭಗಳೇನು?…Wearing Flower

ಬೆಂಗಳೂರು:  ಹೆಣ್ಣುಮಕ್ಕಳು ತಲೆಗೆ ಎಣ್ಣೆ ಹಚ್ಚಿ, ತಲೆ ಬಾಚಿಕೊಂಡು, ನೀಟಾಗಿ ಹೆಣೆದು, ಹೂವಿನಿಂದ ( Wearing…