ಧೂಮಪಾನ ಬಿಟ್ಟರೆ ನಿಮ್ಮ ದೇಹದಲ್ಲಾಗುವ ಬದಲಾವಣೆಗಳು ಏನು? ಇಲ್ಲಿದೆ ನೋಡಿ ಅದಕ್ಕೆ ಉತ್ತರ | Quit Smoking

dk - 2025-06-01T131112.586
Published on

Quit Smoking: ಧೂಮಪಾನ ಮಾಡುವುದು ಆರೋಗ್ಯಕ್ಕೆ ಹಾನಿಕಾರಕ ಎಂಬುದು ಕಟುಸತ್ಯ. ಈ ಹಾನಿಕಾರದಿಂದ ಧೂಮಪಾನಿಗಳನ್ನು ದೂರ ಇಡುವ ಸಲುವಾಗಿ ಪ್ರತಿವರ್ಷ 'ವಿಶ್ವ ತಂಬಾಕು ರಹಿತ ದಿನ' ಎಂದು ಆಚರಿಸಲಾಗಿತ್ತದೆ. ಈ ಹಿನ್ನೆಲೆ ಧೂಮಪಾನ ತ್ಯಜಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಅದ್ಭುತಗಳು ದೊರೆಯುತ್ತದೆ. ನೀವು ಧೂಮಪಾನವನ್ನು ತ್ಯಜಿಸಿದ ಕ್ಷಣ, ನಿಮ್ಮ ದೇಹವು ಗುಣವಾಗಲು ಪ್ರಾರಂಭಿಸುತ್ತದೆ ಮತ್ತು ಶ್ವಾಸಕೋಶಗಳು, ಹೃದಯ, ಚರ್ಮದ ಆರೋಗ್ಯ ಮತ್ತು ಒಟ್ಟಾರೆ ಶಕ್ತಿಯು ಸುಧಾರಿಸುತ್ತದೆ.

ಭಾರತದಲ್ಲಿ, ತುಂಬಾಕು ಸೇವನೆಯಿಂದ ಹೆಚ್ಚಿನ ಸಂಖ್ಯೆಯ ಸಾವುಗಳು ಸಂಭವಿಸುತ್ತವೆ. ಮಕ್ಕಳಿಂದ ಹಿಡಿದು ವಯಸ್ಸಿನವರೆಗೆ, ವೃದ್ಧರವರೆಗೆ ಧೂಮಪಾನವು ಪ್ರಚಲಿತವಾಗಿದೆ. ಸಿಗರೇಟ್ ಸೇದುವವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ, ಇದು ಕಳವಳಕಾರಿ ವಿಷಯವಾಗಿದೆ. ಧೂಮಪಾನವು ಶ್ವಾಸಕೋಶಗಳು ಸೇರಿದಂತೆ ದೇಹದ ಇತರ ಭಾಗಗಳಿಗೂ ಹಾನಿ ಮಾಡುತ್ತದೆ. ಹೀಗಾಗಿ, ಧೂಮಪಾನವನ್ನು ತ್ಯಜಿಸುವುದು ನಿಮ್ಮ ಜೀವನದ ಅತ್ಯುತ್ತಮ ನಿರ್ಧಾರವಾಗಿದೆ. ಕೊನೆಯ ಸಿಗರೇಟಿನ ನಂತರ ದೇಹವು ಹೇಗೆ ತನ್ನನ್ನು ತಾನೇ ಸರಿಪಡಿಸಿಕೊಳ್ಳಲು ಪ್ರಾರಂಭಿಸುತ್ತದೆ ಎಂಬುದನ್ನು ನೋಡಿ ನೀವು ಆಶ್ಚರ್ಯಚಕಿತರಾಗುವಿರಿ. ಉತ್ತಮ ಉಸಿರಾಟದಿಂದ ಆರೋಗ್ಯಕರ ಹೃದಯದವರೆಗೆ, ತ್ಯಜಿಸುವುದರ ಪ್ರಯೋಜನಗಳು...

1.ಶ್ವಾಸಕೋಶ ಗುಣವಾಗಲು ಆರಂಭ

ಧೂಮಪಾನ ಮಾಡುವವರು ಕೆಮ್ಮು ಮತ್ತು ಉಸಿರಾಟದ ತೊಂದ್ರಗಳನ್ನು ಸಾಮಾನ್ಯವಾಗಿ ಅನುಭವಿಸುತ್ತಾರೆ. ನೀವು ಸಿಗರೇಟ್​ ಬಿಟ್ಟ ಕೆಲ ದಿನಗಳ ನಂತರ ಶ್ವಾಸಕೋಶ ಮೊದಲಿನಂತೆ ಆರೋಗ್ಯವಾಗುತ್ತದೆ. ಎನಾದರೂ ಚಿಕ್ಕಪುಟ್ಟ ಸಮಸ್ಯೆಗಳಿದ್ರೆ ಗುಣವಾಗಲು ಪ್ರಾರಂಭಿಸುತ್ತದೆ. ನೀವು ಖಂಡಿತವಾಗಿಯೂ ಆರೋಗ್ಯಕರ ಭಾವನೆ ನಿಮ್ಮಲ್ಲಿ ಮೂಡುತ್ತದೆ.

2.ಆರೋಗ್ಯಕರ ಚರ್ಮ

ವಿವಿಧ ಅಧ್ಯಯನಗಳ ಪ್ರಕಾರ ಧೂಮಪಾನ ರಕ್ತದ ಹರಿವನ್ನು ನಿರ್ಬಂಧಿಸುತ್ತದೆ. ಇದು ಚರ್ಮದಮ ಮೇಲೆ ಪರಿಣಾಮ ಬೀರುತ್ತದೆ. ಇದರಿಂದ ಚರ್ಮ ಸುಕ್ಕುಗಟ್ಟಿದಂತಾಗುತ್ತದೆ. ಅಲ್ಲದೆ, ಒಣಗಿಂದೆ ಕಾಣುತ್ತದೆ. ನೀವು ಧೂಮಪಾನವನ್ನು ತ್ಯಜಿಸಿದಾಗ, ಸುಧಾರಿತ ರಕ್ತ ಪರಿಚಲನೆಯು ನಿಮ್ಮ ಚರ್ಮಕ್ಕೆ ಹೆಚ್ಚಿನ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ತರುತ್ತದೆ, ಇದು ಆರೋಗ್ಯಕರ, ಹೆಚ್ಚು ಹೊಳೆಯುವ ಚರ್ಮಕ್ಕೆ ಕಾರಣವಾಗುತ್ತದೆ.

3.ಮಾನಸಿಕ ಯೋಗಕ್ಷೇಮದಲ್ಲಿ ಸುಧಾರಣೆ

ನಿಕೋಟಿನ್ ವ್ಯಸನದಿಂದ ಮುಕ್ತರಾದ ನಂತರ ಆತಂಕ ಕಡಿಮೆಯಾಗಿದೆ ಮತ್ತು ಮನಸ್ಥಿತಿಯಲ್ಲಿ ಸುಧಾರಣೆಯಾಗಿದೆ ಎಂದು ಅನೇಕ ಜನರು ವರದಿ ಮಾಡುತ್ತಾರೆ. ಆದ್ದರಿಂದ, ತಕ್ಷಣ ಧೂಮಪಾನ ತ್ಯಜಿಸಿ!(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net