ಹೊಟೇಲ್​​ ರೂಮ್​​​ಗೆ ಡುರಿಯನ್‌ ಹಣ್ಣು ತಂದ ಪ್ರವಾಸಿಗನಿಗೆ ಬಿತ್ತು 13,000 ರೂ. ದಂಡ! ಕಾರಣ ಹೀಗಿದೆ... | Durian Fruit

dk - 2025-06-01T112454.266
Published on

ನೀವು ಡುರಿಯನ್‌ ಹಣ್ಣುಗಳ (Durian Fruit) ಬಗ್ಗೆ ಕೇಳಿರಬಹುದು. ಇಂಡೋನೇಷ್ಯಾ, ಮಲೇಷ್ಯಾ, ಸಿಂಗಪೂರ, ಥೈಲ್ಯಾಂಡ್‌, ಫಿಲಿಫೈನ್ಸ್‌ ಮುಂತಾದ ಕಡೆಗಳಲ್ಲಿ ಕಾಣಸಿಗುವ ಈ ಹಣ್ಣು ಅತಿ ಹೆಚ್ಚು ಪ್ರೋಟೀನ್‌ (Proteins) ಯುಕ್ತವಾಗಿದೆ.

ಚಿಕ್ಕ ಹಲಸಿನ ಹಣ್ಣಿನಂತೆ ಕಾಣುವ ಈ ಡುರಿಯನ್‌ ಹಣ್ಣು ಅದರಂತೆಯೇ ಮುಳ್ಳುಗಳಿರುವ ಹಸಿರು ಬಣ್ಣದ ಹೊರಪದರ ಹೊಂದಿದೆ. ಕೆಲವು ರಾಷ್ಟ್ರಗಳಲ್ಲಿ ಇದನ್ನು ಹಣ್ಣುಗಳ ರಾಜ ಅಂತಲೂ ಕರೆಯುತ್ತಾರೆ. ಆದ್ರೆ ಈ ಹಣ್ಣು ಪ್ರಖ್ಯಾತಿ ಹಾಗೂ ಕುಖ್ಯಾತಿ ಪಡೆದಿರೋದು ಅದರ ವಾಸನೆಯಿಂದ. ಈ ಹಣ್ಣಿನ ಗಾಢವಾದ ವಾಸನೆ ಅತ್ಯಂತ ಕೆಟ್ಟದಾಗಿರುತ್ತದೆ ಎನ್ನಲಾಗಿದ್ದು ಹಲವು ದೇಶಗಳ ರೆಸ್ಟೋರೆಂಟ್‌ (Restaurant), ಸಾರ್ವಜನಿಕ ಸಾರಿಗೆ ಮುಂತಾದೆಡೆ ಈ ಹಣ್ಣನ್ನು ನಿಷೇಧಿಸಲಾಗಿದೆ. ಇದೀಗ ಸಿಂಗಾಪುರಕ್ಕೆ ಭೇಟಿ ನೀಡಿದ್ದ ಚೀನಿ ಪ್ರವಾಸಿಗೊಬ್ಬರು ತನ್ನ ಹೊಟೇಲ್​ ರೂಮ್​ಗೆ ಈ ಡುರಿಯನ್‌ ಹಣ್ಣು ಕೊಂಡೊಯ್ಯುದ್ದರಿಂದ ಭಾರೀ ಮೊತ್ತದ ದಂಡ ವಿಧಿಸಲಾಗಿದೆ.

ಈ ಕುರಿತು ಚೀನಿ ಸಾಮಾಜಿಕ ಜಾಲತಾಣದಲ್ಲಿ ಕ್ಸಿಯಾಹೊಂಗ್ಶು (XHS) ಹೆಸರಿನ ಮಹಿಳೆ ಹೊಟೇಲ್​ನಲ್ಲಿ ತನಗೆ ದಂಡ ವಿಧಿಸಿದ ಅನುಭವವನ್ನು ಹಂಚಿಕೊಂಡಿದ್ದಾಳೆ.

ಕ್ಸಿಯಾಹೊಂಗ್ಶು ಹೇಳಿದ್ದೇನು..?

ಸ್ನೇಹಿತೆಯೊಂದಿಗೆ ನಗರವನ್ನು(ಸಿಂಗಾಪುರ) ಆನ್ವೇಷಿಸುತ್ತಿದ್ದಾಗೆ ರಸ್ತೆ ಬದಿಯಲ್ಲಿ ಈ ಡುರಿಯನ್‌ ಹಣ್ಣು ಮಾರಾಟ ಮಾಡುವುದನ್ನು ಕಂಡಿದ್ದಾಳೆ. ಕೂಡಲೇ ಹಣ್ಣನ್ನು ತಗೆದುಕೊಂಡು ತನ್ನ ಹೊಟೇಲ್​ ರೂಮ್​ಗೆ ಬಂದಿದ್ದಾಳೆ. ರೂಮ್​​ನಲ್ಲಿದ್ದ ತನ್ನ ಗಂಡನ ಜತೆ ಇದನ್ನು ಕಟ್​ ಮಾಡಿ ತಿನ್ನುಲು ಆರಂಭಿಸಿದ್ದಾಳೆ. ಈ ವೇಳೆ ಹಣ್ಣಿನ ವಾಸನೆ ಹೊಟೇಲ್​​ನಾದ್ಯಂತ ಹರಡಿದೆ. ಸಂಜೆ ವೇಳೆ ರೂಮ್​​ ಬಿಟ್ಟು ಹೊರ ಬರಬೇಕಾದಾಗ ಆಕೆಯ ಕೈಗೆ ಬಿಲ್​ ನೀಡಿದ್ದಾರೆ. ಬಿಲ್​​ ನೋಡಿ ಶಾಕ್​ ಆದ ಕ್ಸಿಯಾಹೊಂಗ್ಶು ಹೊಟೇಲ್​ ಸಿಬ್ಬಂದಿ ವಿರುದ್ಧ ಕಿಡಿ ಕಾರಿದ್ದಾರೆ.

''ನನ್ನ ಕಣ್ಣುಗಳನ್ನು ನಾನು ನಂಬಲು ಸಾಧ್ಯವಾಗುತ್ತಿಲ್ಲ'' ರೂಮ್​ ಬಾಡಿಗೆಯ ಎರಡರಿಂದ ಮೂರು ಪಟ್ಟು ದಂಡ ವಿಧಿಸಿದ್ದಾರೆ. $200​ ಅಂದರೆ ಭಾರತೀಯ ರೂಗಳಲ್ಲಿ 13,000 ದಂಡ ವಿಧಿಸಿದ್ದಾರೆ. ಆ ಹಣ್ಣಿನ ವಾಸನೆಯಿಂದ ಹೊಟೇಲ್​ಗೆ ಏನೆಲ್ಲಾ ಸಮಸ್ಯೆಗಳಾಗುತ್ತದೆ ಎಂದು ನನಗೆ ತಿಳಿ ಹೇಳಿದರು. ಹೀಗಾಗಿ, ನಾನು ಅನಿವಾರ್ಯ ಹಾಗೂ ಬೇರೆ ದಾರಿಯಿಲ್ಲದೆ ದಂಡ ಕಟ್ಟಿ ಬಂದೆ. ಸಿಂಗಾಪುರಕ್ಕೆ ಭೇಟಿ ನೀಡಿದರೆ ಹೊಟೇಲ್​​ ನಿಯಮಗಳನ್ನು ಒಮ್ಮೆ ಓದಿಕೊಳ್ಳಿ ಅಥವಾ ಕೇಳಿ ತಿಳಿದುಕೊಳ್ಳಿ ಎಂದಿದ್ದಾರೆ.(ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net