ಋತುಚಕ್ರದ ಸಮಯದಲ್ಲಿ ಹೆಣ್ಣುಮಕ್ಕಳು ಮಾನಸಿಕ ಮತ್ತು ದೈಹಿಕವಾಗಿ ಸಮಸ್ಯೆ ಎದುರಿಸುತ್ತಿರುತ್ತಾರೆ. ಈ ಸಮಯದಲ್ಲಿ ದೇಹದಲ್ಲಿ ಬಹಳಷ್ಟು ಹಾರ್ಮೋನ್ ಬದಲಾವಣೆಗಳು ನಡೆಯುತ್ತಿರುತ್ತವೆ. ಇದು ಅವರ ಮನಸ್ಥಿತಿ ಮೇಲೆ ಮಾತ್ರವಲ್ಲದೆ ಅವರ ಚರ್ಮದ ಮೇಲೂ ಪರಿಣಾಮ ಬೀರುತ್ತದೆ. ಈ ಅವಧಿಯಲ್ಲಿ ಅನೇಕ ಹುಡುಗಿಯರ ಚರ್ಮವು ತುಂಬಾ ಎಣ್ಣೆಯುಕ್ತ, ಶುಷ್ಕ, ಮಂದವಾಗುತ್ತದೆ. ಅದಷ್ಟೇ ಅಲ್ಲ ಮುಖವು ಮೊಡವೆಗಳಿಂದ ಕೂಡಿರುತ್ತದೆ. ಆ ದಿನಗಳಲ್ಲಿ ನಿಮ್ಮ ತ್ವಚೆಯನ್ನು ಚೆನ್ನಾಗಿ ನೋಡಿಕೊಳ್ಳುವುದು ಬಹಳ ಮುಖ್ಯ. ಇಂಥಾ ಕಿರಿಕಿರಿಗಳಿಂದ ತಪ್ಪಿಸಿಕೊಳ್ಳಲು ಕೆಲವು ಟಿಪ್ಸ್ ಅನ್ನು ಇಲ್ಲಿ ನೀಡಲಾಗಿದೆ.
ಇದನ್ನು ಓದಿ: ವಿಟಮಿನ್ ಬಿ12 ಕೊರತೆಯೇ?: ನೈಸರ್ಗಿಕವಾಗಿ ಪಡೆಯಲು ಈ ಆಹಾರಕ್ರಮ ಅನುಸರಿಸಿ
- ಋತುಚಕ್ರದ ಸಮಯದಲ್ಲಿ ಈಸ್ಟ್ರೊಜೆನ್ ಹಾರ್ಮೋನ್ ಮಟ್ಟದಲ್ಲಿನ ಇಳಿಕೆಯಿಂದಾಗಿ ಚರ್ಮವು ತುಂಬಾ ಒಣಗುತ್ತದೆ. ಈ ಕಾರಣದಿಂದಾಗಿ ಮುಖದ ಮೇಲೆ ಸುಕ್ಕುಗಳು ಮೊದಲಿಗಿಂತ ಹೆಚ್ಚಾಗಿ ಕಾಣುತ್ತದೆ. ಅಂಥಾ ಸಂದರ್ಭದಲ್ಲಿ ಸಾಕಷ್ಟು ನೀರು ಕುಡಿಯಿರಿ ಮತ್ತು ಉತ್ತಮವಾದ ಮಾಯಿಶ್ಚರೈಸಿಂಗ್ ಕ್ರೀಮ್ ಅನ್ನು ಬಳಸಿ.
- ಈ ಸಮಯದಲ್ಲಿ ಚರ್ಮವು ಹೆಚ್ಚುವರಿ ಎಣ್ಣೆ ಮತ್ತು ಮೇದೋಗ್ರಂಥಿಗಳ ಸ್ರಾವವನ್ನು ಉತ್ಪಾದಿಸಲು ಪ್ರಾರಂಭಿಸುತ್ತದೆ. ಇದು ಮುಖದ ಮೇಲೆ ಬಹಳಷ್ಟು ಮೊಡವೆಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ, ಆ ದಿನಗಳಲ್ಲಿ ನಿಯಮಿತವಾಗಿ ನಿಮ್ಮ ಮುಖವನ್ನು ತೊಳೆಯುವುದು ಬಹಳ ಮುಖ್ಯ. ದಿನಕ್ಕೆ 2 ರಿಂದ 3 ಬಾರಿ ಮುಖ ತೊಳೆಯಿತಿ.
- ನೀವು ತಿನ್ನುವ ಫುಡ್ ಕೂಡ ಚರ್ಮದ ಮೇಲೆ ಪರಿಣಾಮ ಬೀರುತ್ತದೆ. ಪಿರಿಯೆಡ್ಸ್ ಅವಧಿ ಪ್ರಾರಂಭವಾಗುವ ಕೆಲವು ದಿನಗಳ ಮೊದಲು ಫಾಸ್ಟ್ ಫುಡ್ ಇತ್ಯಾದಿಗಳನ್ನು ತಿನ್ನುವುದನ್ನು ನಿಲ್ಲಿಸಿ. ಕಬ್ಬಿಣಾಂಶ, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿಟಮಿನ್‌ಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸಿ.
- ಈ ಸಮಯದಲ್ಲಿ ಮೇಕಪ್ ಮಾಡುವುದನ್ನು ತಪ್ಪಿಸಬೇಕು. ಇದು ಹೆಚ್ಚಿನ ಚರ್ಮದ ಸಮಸ್ಯೆಗಳನ್ನು ಉಂಟುಮಾಡಬಹುದು.
ಮುಟ್ಟಿನ ಸಮಯದಲ್ಲಿ ಚರ್ಮವು ಲೈಟ್ ಯೆಲ್ಲೋ ಬಣ್ಣಕ್ಕೆ ತಿರುಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ ನೀವು ಬಯಸಿದರೆ ಚರ್ಮದ ಮೇಲೆ ಅರಿಶಿನ, ಜೇನುತುಪ್ಪ ಮತ್ತು ರವೆ ಹಿಟ್ಟಿನಿಂದ ಮಾಡಿದ ಫೇಸ್ ಪ್ಯಾಕ್ ಅನ್ನು ಬಳಸಬಹುದು. - ಬಹಳ ಮುಖ್ಯವಾಗಿ ದೇಹಕ್ಕೆ ಸಂಪೂರ್ಣ ವಿಶ್ರಾಂತಿ ನೀಡಿ. ಯಾವುದೇ ರೀತಿಯ ಒತ್ತಡವನ್ನು ತೆಗೆದುಕೊಳ್ಳಬೇಡಿ. ಏಕೆಂದರೆ ಇದರ ನೇರ ಪರಿಣಾಮ ನಿಮ್ಮ ಚರ್ಮದ ಮೇಲೆ ಗೋಚರಿಸುತ್ತದೆ.
ಆ್ಯಪಲ್ ಕಂಪನಿಯ ಪ್ರಾಡಕ್ಟ್ಗಳನ್ನು ಬಳಸುತ್ತಿದ್ದೀರಾ; ಹಾಗಿದ್ರೆ ಈ ಸುದ್ದಿ ಓದಿ