

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿವಿಗೆ ಇಯರ್ಫೋನ್(Earphones) ಮತ್ತು ಹೆಡ್ಪೋನ್ ಬಳಸೋದು ಸಾಮಾನ್ಯ. ಇವು ಜೀವ ರಕ್ಷಕ ಕೂಡ. ಬೆಂಗಳೂರು, ಮುಂಬೈ,ಡೆಲ್ಲಿ ಸೇರಿದಂತೆ ಬೃಹತ್ ನಗರಗಳಲ್ಲಿ ದೀರ್ಘ ಪ್ರಯಾಣದಿಂದ ಹಿಡಿದು ವಿಮಾನ ಪ್ರಯಾಣದವೆರೆಗೂ ಗದ್ದಲದ ನಡುವೆ ತುಸು ಇಯರ್ಫೋನ್ ಕಿವಿಗೆ ಹಾಕಿ ಇಂಪಾದ ಸಂಗೀತ ಆಲಿಸಿದರೆ ಎಲ್ಲವೂ ನಿಶಬ್ದವಾಗಲಿದೆ. ಆದರೆ, ಆದಾಗ್ಯೂ ನಿರಂತರ ಇಯರ್ಫೋನ್ ಬಳಸುವುದರಿಂದ ಸಮಸ್ಯೆ ಕೂಡ ತಪ್ಪಿದ್ದಲ್ಲ. ಈ ಅಭ್ಯಾಸ ಆರೋಗ್ಯದ ಮೇಲೆ ಎಷ್ಟೆಲ್ಲಾ ಪರಿಣಾಮಗಳು ಬೀರಲಿದೆ ಎಂಬುದು ತಿಳಿಯೋಣ.
ನಿರಂತರ ಇಯರ್ಫೋನ್ ಬಳಕೆಯಿಂದ ಕಿವಿ ಸೋಂಕು ಉಂಟಾಗಿದೆ ಎಂದು ಇತ್ತೀಚಿಗೆ ಮಹಿಳೆಯೊಬ್ಬಳು ತಮ್ಮ ಎಕ್ಸ್ ಖಾತೆಯಲ್ಲಿ ಅನುಭವನ್ನು ಹಂಚಿಕೊಂಡಿದ್ದಾರೆ. ಇಯರ್ಫೋನ್ಗಳನ್ನು ದೀರ್ಘಕಾಲದವರೆಗೆ ಧರಿಸುವುದರಿಂದ ಉಂಟಾಗುವ ಅಪಾಯಗಳ ಬಗ್ಗೆ ಎಚ್ಚರಿಕೆಯ ಸಂದೇಶವನ್ನು ನೀಡಿದ್ದಾರೆ.
2-3 ವರ್ಷಗಳ ನಿರಂತರ ಇಯರ್ಫೋನ್ ಬಳಕೆಯಿಂದ ನನಗೆ ಕೊನೆಗೂ ಈ ನಷ್ಟವಾಯಿತು. ನಾನು ದಿನಕ್ಕೆ 10-12 ಗಂಟೆಗಳ ಕಾಲ ಅವುಗಳನ್ನು ಧರಿಸುತ್ತಿದ್ದೆ, ನಿದ್ದೆ ಮಾಡುವಾಗಲೂ ಸಹ (ಹೆಚ್ಚಾಗಿ ನನ್ನ ಬಲ ಕಿವಿಯಲ್ಲಿ). ಕಳೆದ 2 ದಿನಗಳಿಂದ ನಾನು ನಿರಂತರವಾಗಿ 'ಟಿನ್ನ್' ಎಂಬ ಶಬ್ದವನ್ನು ಕೇಳುತ್ತಿದ್ದೇನೆ ಮತ್ತು ಆ ಕಿವಿಯಿಂದ ಏನನ್ನೂ ಕೇಳಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇದೀಗ ನನ್ನ ಕಿವಿಗೆ ಸೋಂಕು ತಗುಲಿದೆ ಮತ್ತು ಒಳಗೆ ಕೀವು ತುಂಬಿದೆ ಎಂದು ನನಗೆ ವೈದ್ಯರು ಹೇಳಿದರು. ಹಾಗಾಗಿ, ದಯವಿಟ್ಟು ಹುಷಾರಾಗಿರಿ ತುಂಬಾ ತಡವಾಗುವ ಮೊದಲು ನಿಮ್ಮ ಕಿವಿಗಳನ್ನು ರಕ್ಷಿಸಿಕೊಳ್ಳಿ ಎಂದು ಮಹಿಳೆ ಹೇಳಿದ್ದಾರೆ.
ಇದೀಗ ಇವರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೇಕ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಇದು ಭಯಾನಕವಾಗಿದೆ. ನಾನು ದಿನಕ್ಕೆ 4-5 ಗಂಟೆಗಳ ಕಾಲ ಇಯರ್ಫೋನ್ಗಳನ್ನು ಬಳಸುತ್ತೇನೆ ಮತ್ತು ಈಗ ನನಗೆ ನಿಜವಾಗಿಯೂ ಚಿಂತೆಯಾಗಿದೆ. ಆದಷ್ಟು ಬೇಗ ಅದನ್ನು ಕಡಿಮೆ ಮಾಡಬೇಕಾಗಿದೆ ಎಂದು ಒಬ್ಬ ಬಳಕೆದಾರರು ಹೇಳಿಕೊಂಡಿದ್ದಾರೆ.
"ಇಯರ್ಫೋನ್ಗಳಿಂದ ಸೋಂಕು ಉಂಟಾಗುವುದಿಲ್ಲ. ವರ್ಷಗಳ ಕಾಲ ಒಂದೇ ಇಯರ್ಫೋನ್ಗಳು ಕಾರಣವಾಗಬಹುದು ಆದರೆ ಪ್ರತಿ ಅರ್ಧ ವರ್ಷಕ್ಕೊಮ್ಮೆ ಹೊಸದಕ್ಕೆ ಬದಲಾಯಿಸುವುದರಿಂದ ಯಾವುದೇ ಸಮಸ್ಯೆಗಳಿಲ್ಲ" ಎಂದು ಮತ್ತೊಬ್ಬರು ಗಮನಸೆಳೆದರು.(ಏಜೆನ್ಸೀಸ್)