More

  ಭಾರತೀಯರನ್ನು ಬಾಸ್ಟರ್ಡ್ಸ್​ ಎಂದಿದ್ದ ನೊಬೆಲ್​ ಶಾಂತಿ ಪುರಸ್ಕೃತ ಹೆನ್ರಿ ಕಿಸ್ಸಿಂಜರ್ 100ನೇ ವಯಸ್ಸಿನಲ್ಲಿ ನಿಧನ

  ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ ಅಮೆರಿಕದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹಾಗೂ ಶಕ್ತಿಶಾಲಿ ರಾಜತಾಂತ್ರಿಕ ಅಮೆರಿಕದ ಹೆನ್ರಿ ಕಿಸ್ಸಿಂಜರ್ ಅವರು 100ನೇ ವಯಸ್ಸಿನಲ್ಲಿ ಕನೆಕ್ಟಿಕಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಬುಧವಾರ ನಿಧನರಾದರು.

  ನೊಬೆಲ್ ಪ್ರಶಸ್ತಿರಾದರೂ ಸಾಕಷ್ಟು ವಿವಾದಾತ್ಮಕ ವ್ಯಕ್ತಿಯಾಗಿದ್ದ ಹೆನ್ರಿ ಕಿಸ್ಸಿಂಜರ್ ಇಬ್ಬರು ಅಮೆರಿಕದ ಇಬ್ಬರು ಅಧ್ಯಕ್ಷರ ಜತೆಗೆ ಸೇವೆ ಸಲ್ಲಿಸಿದರು. ಅಮೆರಿಕದ ವಿದೇಶಾಂಗ ನೀತಿಯ ಮೇಲೆ ಅಚ್ಚಳಿಯದ ಗುರುತು ಹಾಕಿದ್ದರು. ಶೀತಲ ಸಮರದ ಸಮಯದಲ್ಲಿ ಅಮೆರಿಕದ ವಿದೇಶಾಂಗ ನೀತಿಯಲ್ಲಿ ಪ್ರಮುಖ ಮತ್ತು ಧ್ರುವೀಕರಣದ ಪಾತ್ರವನ್ನು ವಹಿಸಿದರು.

  ಕಿಸ್ಸಿಂಜರ್ ಅವರ ಕುಟುಂಬವು ಖಾಸಗಿಯಾಗಿ ಅಂತ್ಯಕ್ರಿಯೆ ನಡೆಸಲಿದೆ. ಅವರು ಬೆಳೆದ ನ್ಯೂಯಾರ್ಕ್‌ನಲ್ಲಿ ಸ್ಮಾರಕ ಸೇವೆ ನಡೆಯಲಿದೆ.
  ಹೈಂಜ್ ಆಲ್ಫ್ರೆಡ್ ಕಿಸ್ಸಿಂಜರ್ ಅವರು ಮೇ 27, 1923 ರಂದು ಜರ್ಮನಿಯ ಫರ್ತ್‌ನಲ್ಲಿ ಜನಿಸಿದರು. ನ್ಯೂರೆಂಬರ್ಗ್ ಕಾನೂನುಗಳು ಜರ್ಮನಿಯ ಯಹೂದಿಗಳ ಪೌರತ್ವವನ್ನು ತೆಗೆದುಹಾಕಿದಾಗ ಅವರಿಗೆ 12 ವರ್ಷವಾಗಿತ್ತು. ನ್ಯೂಯಾರ್ಕ್‌ನಲ್ಲಿರುವ ಸಂಬಂಧಿಯೊಬ್ಬರ ಮೂಲಕ ಕಿಸ್ಸಿಂಜರ್ ಮತ್ತು ಅವರ ಕುಟುಂಬವು ಜರ್ಮನಿಯನ್ನು ತೊರೆದು ಆಗಸ್ಟ್ 1938 ರಲ್ಲಿ ಅಮೆರಿಕಕ್ಕೆ ವಲಸೆ ಬಂದಿತು. ಅವರು ಅಮೆರಿಕಕ್ಕೆ ತೆರಳಿದ ನಂತರ ಅವರು ಹೆನ್ರಿಯಾದರು.
  ಅಮೆರಿಕದ ಅಧ್ಯಕ್ಷರಾಗಿದ್ದ ರಿಚರ್ಡ್​ ನಿಕ್ಸನ್ ಮತ್ತು ಫೋರ್ಡ್ ಆಡಳಿತದ ಅವಧಿಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ, ಉನ್ನತ ರಾಜತಾಂತ್ರಿಕ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರಾಗಿ ಅವರು ಸೇವೆ ಸಲ್ಲಿಸಿದರು..

  ವಿಯೆಟ್ನಾಂ ಯುದ್ಧವನ್ನು ಕೊನೆಗೊಳಿಸುವ ಮಾತುಕತೆಗಳಿಗಾಗಿ ಕಿಸ್ಸಿಂಜರ್ ಅವರಿಗೆ ನೊಬೆಲ್ ಶಾಂತಿ ಪ್ರಶಸ್ತಿ ಒಲಿದುಬಂದಿತು. ಆದರೂ ಸಂಘರ್ಷವು ತಕ್ಷಣವೇ ಕೊನೆಗೊಳ್ಳಲಿಲ್ಲ.
  1973 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಉತ್ತರ ವಿಯೆಟ್ನಾಂನ ಲೆ ಡಕ್ ಥೋ ಹಾಗೂ ಕಿಸ್ಸಿಂಜರ್ ಅವರಿಗೆ ಜಂಟಿಯಾಗಿ ನೀಡಲಾಯಿತು. ಆದರೆ, ಥೋ ಅವರು ಪ್ರಶಸ್ತಿ ನಿರಾಕರಿಸಿದರು. ಈ ಪ್ರಶಸ್ತಿ ಆಯ್ಕೆ ವಿಚಾರವು ಇತಿಹಾಸದಲ್ಲಿ ಅತ್ಯಂತ ವಿವಾದಾಸ್ಪದವಾಗಿ ಉಳಿಯಿತು. ಪ್ರಶಸ್ತಿ ಆಯ್ಕೆ ಸಮಿತಿಯ ಇಬ್ಬರು ಸದಸ್ಯರು ರಾಜೀನಾಮೆ ಕೂಡ ನೀಡಿದರು.

  See also  ಮಣ್ಣಿನಲ್ಲಿದೆ ಇತಿಹಾಸ ಸೃಷ್ಟಿಸುವ ಶಕ್ತಿ

  ಭಾರತೀಯರನ್ನು ಬಾಸ್ಟರ್ಡ್ಸ್​ ಎಂದಿದ್ದ:
  1971 ರ ಭಾರತ-ಪಾಕಿಸ್ತಾನ ಯುದ್ಧದ ಸಂದರ್ಭದಲ್ಲಿ ಅಂದಿನ ಅಮೆರಿಕದ ಅಧ್ಯಕ್ಷ ನಿಕ್ಸನ್ ಮತ್ತು ಕಿಸ್ಸಿಂಜರ್ ಪಾಕಿಸ್ತಾನದ ಕಡೆಗೆ ವಾಲಿದ್ದಕ್ಕಾಗಿ ತೀವ್ರ ಟೀಕೆ ಎದುರಿಸಿದ್ದರು. ಕಿಸ್ಸಿಂಜರ್ ಅವರು ಭಾರತೀಯರನ್ನು “ಬಾಸ್ಟರ್ಡ್ಸ್” ಎಂದು ಕರೆದಿದ್ದು ಸಾಕಷ್ಟು ವಿವಾದ ಸೃಷ್ಟಿಸಿತ್ತು. ನಂತರ ಇದಕ್ಕಾಗಿ ಅವರು ವಿಷಾದ ವ್ಯಕ್ತಪಡಿಸಿದ್ದರು.

  ಗುಜರಾತ್ ಈಥರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಏಳು ಕಾರ್ಮಿಕರ ಶವ ಪತ್ತೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts