ಗುಜರಾತ್ ಈಥರ್​ ಫ್ಯಾಕ್ಟರಿಯಲ್ಲಿ ಬೆಂಕಿ ಅವಘಡ: ಏಳು ಕಾರ್ಮಿಕರ ಶವ ಪತ್ತೆ

fire final
Published on

ಗುಜರಾತ್‌ನ ಸೂರತ್‌ನಲ್ಲಿರುವ ಈಥರ್ ಇಂಡಸ್ಟ್ರೀಸ್‌ನ ಉತ್ಪಾದನೆ ಘಟಕದಲ್ಲಿ ಸಂಭವಿಸಿದ ಬೃಹತ್​ ಬೆಂಕಿ ಅವಘಡದಲ್ಲಿ ಸಾವನ್ನಪ್ಪಿದ ಏಳು ಕಾರ್ಮಿಕರ ಶವಗಳನ್ನು ಹೊರತೆಗೆಯಲಾಗಿದ್ದು, ಇತರ 27 ಮಂದಿ ಗಾಯಗೊಂಡಿದ್ದಾರೆ.

ಬುಧವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಏಳು ಕಾರ್ಮಿಕರು ನಾಪತ್ತೆಯಾಗಿದ್ದಾರು. ಸ್ಥಳದಲ್ಲಿ ಶೋಧ ಕಾರ್ಯಾಚರಣೆಗಳು ನಡೆಯುತ್ತಿರುವಾಗ ಗುರುವಾರ ಅವರ ದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ರಾಸಾಯನಿಕ ಶೇಖರಣಾ ತೊಟ್ಟಿಯಲ್ಲಿ ಸ್ಫೋಟ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ. ತನಿಖೆಯ ನಂತರ ಬೆಂಕಿಗೆ ನಿಜವಾದ ಕಾರಣ ಏನೆಂಬುದು ತಿಳಿದುಬರಲಿದೆ ಎಂದು ಉಪ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ,

ಕಂಪನಿಯ ಮಾಲೀಕ ಅಶ್ವಿನ್ ದೇಸಾಯಿ ಅವರು ಗುಜರಾತ್‌ನ ಪ್ರಮುಖ ಕೈಗಾರಿಕೋದ್ಯಮಿಗಳಲ್ಲಿ ಒಬ್ಬರಾಗಿದ್ದು, ಅಂದಾಜು 1.3 ಮಿಲಿಯನ್ ಡಾಲರ್ ಸಂಪತ್ತನ್ನು ಹೊಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net