ಮಂಜೇಶ್ವರ: ಯಕ್ಷಬಳಗ ಹೊಸಂಗಡಿ ಮಂಜೇಶ್ವರ ಸಂಘಟನೆಯ 34ನೇ ವರ್ಷದ ಕರ್ಕಾಟಕ ಮಾಸ ತಾಳಮದ್ದಳೆ ಕೂಟ ಸಮಾರೋಪ ಇತ್ತೀಚೆಗೆ ಮೂಡಂಬೈಲಿನಲ್ಲಿ ಜರುಗಿತು.
ಬೆಂಗಳೂರಿನ ಕರ್ನಾಟಕ ಯಕ್ಷಗಾನ ಅಕಾಡೆಮಿ ಸಹಯೋಗದೊಂದಿಗೆ ಹಿರಿಯರ ನೆನಪು ಕಾರ್ಯಕ್ರಮದಲ್ಲಿ ಹೆಬ್ಬಾರ್ ಮಾಸ್ತರ್ ಎಂದೇ ಜನಜನಿತರಾಗಿದ್ದ ಮೀಯಪದವು ಕೃಷ್ಣರಾವ್ ಅವರನ್ನು ಯೋಗೀಶ ರಾವ್ ಚಿಗುರುಪಾದೆ ಸ್ಮರಿಸಿದರು.
ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರ್ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಕೃಷ್ಣಪ್ಪ ಕಿನ್ಯ, ಬಾಲಕೃಷ್ಣ ಭಟ್ ದಡ್ಡಂಗಡಿ, ರಾಜಾರಾಮ ರಾವ್ ಮೀಯಪದವು, ಸುರೇಶ ಪದಕಣ್ಣಾಯ ಇದ್ದರು.
ಯಕ್ಷಬಳಗ ಸಂಚಾಲಕ ಹಾಗೂ ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸತೀಶ ಅಡಪ ಸಂಕಬೈಲು ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ವಕೀಲ ವಿಠಲ ಭಟ್ ಮೊಗಸಾಲೆ ವಂದಿಸಿದರು. ನಾಗರಾಜ ಪದಕಣ್ಣಾಯ ಮೂಡಂಬೈಲು ನಿರೂಪಿಸಿದರು.
ಬಳಿಕ ಯಕ್ಷಬಳಗ ಹೊಸಂಗಡಿ ಹಾಗೂ ಅತಿಥಿ ಕಲಾವಿದರಿಂದ ತಾಳಮದ್ದಳೆ ಪ್ರಸ್ತುತಿಗೊಂಡಿತು. ಹಿರಿಯ ಯಕ್ಷಗಾನ ಕಲಾವಿದ ಸಂಘಟಕ ಹರೀಶ್ಚಂದ್ರ ನಾಯ್ಗ ಮಾಡೂರು ಅವರನ್ನು ಗೌರವಿಸಲಾಯಿತು.