

ವಿಜಯವಾಣಿ ಸುದ್ದಿಜಾಲ ಸುಳ್ಯ
ನಾಡು, ನುಡಿ, ಮಣ್ಣಿಗಾಗಿ ದುಡಿದವರನ್ನು ಸ್ಮರಿಸುವುದು ಉತ್ತಮ ಕಾರ್ಯವಾಗಿದ್ದು, ಹಿರಿಯರ ನೆನಪು ಹಾಗೂ ಅವರ ಪ್ರೇರಣಾತ್ಮಕ ಮಾತುಗಳು ಬದುಕಿಗೆ ದಾರಿದೀಪ ಎಂದು ಸುಳ್ಯ ತಾಲೂಕು ಕ.ಸಾ.ಪ.ಅಧ್ಯಕ್ಷ ಚಂದ್ರಶೇಖರ ಪೇರಾಲ್ ಹೇಳಿದರು.
ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಪಂಜ ಹೋಬಳಿ ಘಟಕದ ವತಿಯಿಂದ ಪಂಜದಲ್ಲಿ ನಡೆದ, ಸ್ವಾತಂತ್ರ್ಯ ನಂತರ ನಾಡಿನ ಸವಾರ್ಂಗೀಣ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಹಿರಿಯರ ಸಂಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅವಿಭಜಿತ ಪುತ್ತೂರು ತಾಲೂಕು ಮಾಜಿ ಶಾಸಕ ದಿ. ಕೂಜುಗೋಡು ವೆಂಕಟ್ರಮಣ ಗೌಡ, ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ದಿ.ಜಾಕೆ ಪರಮೇಶ್ವರ ಗೌಡ, ಹಿರಿಯ ಧುರೀಣರಾದ ದಿ.ಕೇನ್ಯ ಸುಬ್ಬಯ್ಯ ಶೆಟ್ಟಿ, ಸುಳ್ಯ ತಾಲೂಕು ಬೋರ್ಡ್ ಮಾಜಿ ಅಧ್ಯಕ್ಷ ದಿ.ಮುಂಡೋಡಿ ಬೆಳ್ಯಪ್ಪ ಗೌಡ ಅವರನ್ನು ಸ್ಮರಿಸಲಾಯಿತು.
ಕಾಲೇಜು ಪ್ರಾಂಶುಪಾಲ ಪ್ರಭಾಕರ ಕಿರಿಭಾಗ, ಹಿರಿಯ ಸಹಕಾರಿ ಧುರೀಣ ಪಿ.ಸಿ.ಜಯರಾಮ, ಮುಖ್ಯಶಿಕ್ಷಕ ಯಶವಂತ ರೈ, ಆರಾಧನಾ ಸಮಿತಿ ಅಧ್ಯಕ್ಷ ಸವಿತಾರ ಮುಡೂರು ಹಿರಿಯರ ಬಗ್ಗೆ ಸಂಸ್ಮರಣೆ ಮಾಡಿದರು.
ಸುಳ್ಯತಾಲೂಕು ಕ.ಸಾ.ಪ.ಮಾಜಿ ಅಧ್ಯಕ್ಷ ಮಾದವಗೌಡ ಜಾಕೆ, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸಂಚಾಲಕ ಸೀತಾರಾಮ ರೈ, ಪ್ರಗತಿಪರ ಕೃಷಿಕ ಕೆ.ವಿ.ಸುಧೀರ್ ಕೂಜುಗೋಡು ಕಟ್ಟೆಮನೆ, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಪೂರ್ವಾಧ್ಯಕ್ಷ ನಿತ್ಯಾನಂದ ಮುಂಡೋಡಿ, ಕೇನ್ಯ ರವೀಂದ್ರನಾಥ ಶೆಟ್ಟಿ, ಜಿ.ಪಂ.ಮಾಜಿ ಸದಸ್ಯ ಭರತ್ ಮುಂಡೋಡಿ, ಪ್ರಾಂಶುಪಾಲ ವೆಂಕಪ್ಪ ಗೌಡ ಕೇನಾಜೆ, ಮುಖ್ಯಶಿಕ್ಷಕ ದೇವಿಪ್ರಸಾದ್ ಉಪಸ್ಥಿತರಿದ್ದರು.
ಘಟಕದ ಅಧ್ಯಕ್ಷ ಬಾಬುಗೌಡ ಅಚ್ರಪ್ಪಾಡಿ ಸ್ವಾಗತಿಸಿದರು. ಸಂಘಟನಾ ಕಾರ್ಯದರ್ಶಿ ಕುಶಾಲಪ್ಪ ತುಂಬತ್ತಜೆ ವಂದಿಸಿದರು. ಉಪನ್ಯಾಸಕರಾದ ಉಮೇಶ್ ಹಾಗೂ ಲತಾಶ್ರೀ ನಿರೂಪಿಸಿದರು.