ಕಾರವಾರ: ಭಾರಿ ಮಳೆಯ ಮುನ್ಸೂಚನೆಯ ಕಾರಣ ಜಿಲ್ಲೆಯ ಕೆಲ ತಾಲೂಕುಗಳ ಶಾಲೆ, ಕಾಲೇಜ್ ಗಳಿಗೆ ಆಗಸ್ಟ್ 1 ರಂದು ರಜೆ ಘೋಷಿಸಿ, ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಆದೇಶಿಸಿದ್ದಾರೆ.
ಆಗಸ್ಟ್ 1 ರಂದು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಆಯ್ದ ಸ್ಥಳಗಳಲ್ಲಿ 100.ಮಿಮೀಗಿಂತ ಅಧಿಕ ಮಳೆಯಾಗಬಹುದು ಎಂದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಸಿದೆ. ಹಾಗಾಗಿ
ಕಾರವಾರ, ಅಂಕೋಲಾ, ಕುಮಟಾ,ಹೊನ್ನಾವರ, ಭಟ್ಕಳ, ಜೊಯಿಡಾ ತಾಲೂಕುಗಳ ಎಲ್ಲ ಸರ್ಕಾರಿ, ಖಾಸಗಿ ಹಾಗೂ ಅನುದಾನಿತ ಶಾಲೆ, ಹೈಸ್ಕೂಲ್ ಗಳು, ಪಿಯು, ಡಿಪ್ಲೋಮಾ, ಐಟಿಐ ಕಾಲೇಜ್ ಗಳಿಗೆ ಈ ರಜೆ ಆದೇಶ ಅನ್ವಯವಾಗಲಿದೆ
ರಜೆ ಆದೇಶವನ್ನು ಮಟ್ಟುನಿಟ್ಟಾಗಿ ಪಾಲಿಸಲು ಕಾರವಾರ, ಶಿರಸಿ ಡಿಡಿಪಿಐಗಳು, ಡಿಡಿಪಿಯು, ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕರು ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ತಮ್ಮಆದೇಶದಲ್ಲಿ ತಿಳಿಸಿದ್ದಾರೆ.