

ಯಲ್ಲಾಪುರ: ನಿರಂತರ ಮಳೆಯಿಂದಾಗಿ ತಾಲೂಕಿನ ಹಾಸಣಗಿ ಗ್ರಾ.ಪಂ. ವ್ಯಾಪ್ತಿಯ ಕುಂದೂರಿನಲ್ಲಿ ಕಾಲು ಸೇತುವೆಯ ಪಿಚ್ಚಿಂಗ್ ಕುಸಿದಿದೆ.
ಕುಂದೂರು ಗ್ರಾಮದ ರಾಮಚಂದ್ರ ನಾರಾಯಣ ಜೋಶಿ ಅವರ ಮನೆಯ ಎದುರಿಗಿರುವ ಕಾಲು ಸೇತುವೆಯ ಪಿಚ್ಚಿಂಗ್ ಕುಸಿದಿದ್ದು, ಕಾಲು ಸೇತುವೆಯೂ ಕುಸಿಯುವ ಆತಂಕ ಎದುರಾಗಿದೆ. ಸಮೀಪದ ಮದ್ಲುಗಾರ್, ನಂದಗಾರ್ ಹಾಗೂ ಕುಂದೂರು ಗ್ರಾಮದ ಸಾರ್ವಜನಿಕರು ಓಡಾಡುವ ರಸ್ತೆ ಇದಾಗಿದ್ದು, ಇನ್ನಷ್ಟು ಕುಸಿದರೆ ಓಡಾಟಕ್ಕೆ ತೊಂದರೆಯಾಗಲಿದೆ.
ಇದನ್ನು ಕೂಡಲೇ ಸರಿಪಡಿಸಲು ಕ್ರಮ ಕೈಗೊಳ್ಳಬೇಕೆಂದು ಹಾಸಣಗಿ ಗ್ರಾಮ ಪಂಚಾಯಿತಿ ಸದಸ್ಯ ಎಂ.ಕೆ. ಭಟ್ ಯಡಳ್ಳಿ ಒತ್ತಾಯಿಸಿದ್ದಾರೆ.