ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವರುಣನ ಅಬ್ಬರ: ಹವಾಮಾನ ಇಲಾಖೆ ಹೇಳಿದ್ದೇನು? Heavy Rain In Delhi

Untitled design (4) (2)
Published on

Heavy Rain In Delhi:ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬುಧವಾರ (ಜುಲೈ 23) ಬೆಳಿಗ್ಗೆಯಿಂದಲೇ ವರುಣ ಅಬ್ಬರಿಸುತ್ತಿದ್ದಾನೆ. ನಿರಂತರ ಮಳೆಯಿಂದಾಗಿ ತೀವ್ರ ಶಾಖ ಮತ್ತು ವಾಯು ಮಾಲಿನ್ಯದಿಂದ ಜನರಿಗೆ ಮುಕ್ತಿ ಸಿಕ್ಕಂತಾಗಿದೆ. ನೆರೆಯ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿಯೂ ಸಹ ಮಳೆರಾಯನ ಆರ್ಭಟ ಜೋರಾಗಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಈಗಾಗಲೇ ದೆಹಲಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದ್ದು, ಗುಡುಗು ಸಹಿತ ಮಧ್ಯಮ ಮಳೆಯ (ಗಂಟೆಗೆ 5-15 ಮಿಮೀ) ಮುನ್ಸೂಚನೆ ನೀಡಿತ್ತು. ಬೆಳಗಿನ ಜಾವ ಮಳೆ ಆರಂಭವಾಗಿದ್ದರಿಂದ ಇಂಡಿಯಾ ಗೇಟ್, ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಮಂಡಿ ಹೌಸ್, ತುಘಲಕ್ ರಸ್ತೆ ಸೇರಿದಂತೆ ನಗರದ ಮಂತಾದ ರಸ್ತೆಗಳು ಜಲಾವೃತವಾಗಿವೆ ಎಂದು ವರದಿಯಾಗಿದೆ.

ಪ್ರತಿಕೂಲ ಹವಾಮಾನದ ನಿರೀಕ್ಷೆಯಿರುವುದರಿಂದ ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಕಾರ್ಯಾಚರಣೆಗಳು ಪ್ರಸ್ತುತ ಸಾಮಾನ್ಯವಾಗಿದೆ ಎಂದು ತಿಳಿದುಬಂದಿದೆ. ನಿಮ್ಮ ಪ್ರಯಾಣವು ಯಾವುದೇ ತೊಂದರೆಯಿಲ್ಲದೆ ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ನಮ್ಮ ಆನ್-ಗ್ರೌಂಡ್ ತಂಡಗಳು ಎಲ್ಲ ಪಾಲುದಾರರೊಂದಿಗೆ ಶ್ರದ್ಧೆಯಿಂದ ಕೆಲಸ ಮಾಡುತ್ತಿವೆ. ಇತ್ತೀಚಿನ ಮಾಹಿತಿಗಾಗಿ, ಪ್ರಯಾಣಿಕರು ತಮ್ಮ ವಿಮಾನಯಾನ ಸಂಸ್ಥೆಗಳನ್ನು ಸಂಪರ್ಕಿಸಲು ಸೂಚಿಸಲಾಗಿದೆ ದೆಹಲಿ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳವಾರ (ಜುಲೈ 22) ದಕ್ಷಿಣ ದೆಹಲಿ, ಆಗ್ನೇಯ ದೆಹಲಿ, ಮಧ್ಯ ದೆಹಲಿ, ರಾಷ್ಟ್ರೀಯ ಹೆದ್ದಾರಿ 8, ದೆಹಲಿ-ಜೈಪುರ ಮಾರ್ಗ, ಐಟಿಒ ಮತ್ತು ಏಮ್ಸ್ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ನೀರು ನಿಂತ ಕಾರಣ ಟ್ರಾಫಿಕ್​ ಜಾಮ್ ಉಂಟಾಗಿದೆ.

ನಗರದ ಸಫ್ದರ್​ಜಂಗ್‌ನಲ್ಲಿರುವ ಪ್ರಾಥಮಿಕ ಹವಾಮಾನ ಕೇಂದ್ರವು ಮಂಗಳವಾರ ಸಂಜೆ 5.30 ರವರೆಗೆ ಸುಮಾರು 8.8 ಮಿ.ಮೀ ಮಳೆಯನ್ನು ದಾಖಲಿಸಿದ್ದರೆ, ರಿಡ್ಜ್ ನಿಲ್ದಾಣದಲ್ಲಿ 22.4 ಮಿ.ಮೀ ಮತ್ತು ಲೋಧಿ ರಸ್ತೆಯಲ್ಲಿ 14.2 ಮಿ.ಮೀ ಮಳೆಯಾಗಿದೆ ಎಂದು ಭಾರತ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net