ಬಂಟ್ವಾಳ ತಾಲೂಕಾದ್ಯಂತ ಮಳೆ ಅವಾಂತರ

New Project (6)
Published on

ಬಂಟ್ವಾಳ: ತಾಲೂಕು ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ಸ್ವಲ್ಪ ಕಡಿಮೆಯಾಗಿದ್ದರೂ ಅವಾಂತರಗಳು ಮುಂದುವರಿದಿವೆ.

ಬಿ.ಮೂಡ ಗ್ರಾಮದ ಅಖಿಲೇಶ್ ಮನೆಗೆ ಹಾನಿಯಾಗಿದೆ. ಅಜ್ಜಿಬೆಟ್ಟು ಗ್ರಾಮದ ಆಲದಪದವು ಎಂಬಲ್ಲಿ ಸುನೀತಾ ಸುರೇಶ್ ಎಂಬುವರ ಮನೆಗೆ ಹಾನಿಯಾಗಿದೆ. ಗುರುವ ಎಂಬುವರ ಮನೆಯ ಹೆಂಚಿನ ಛಾವಣಿ ಮುರಿದು ಬಿದ್ದಿದ್ದು ಅವರನ್ನು ಸಂಬಂಧಿಕರ ಮನೆಗೆ ಸ್ಥಳಾಂತರಿಸಲಾಗಿದೆ.

ಅಜ್ಜಿಬೆಟ್ಟು ಗ್ರಾಮದ ಶ್ರೀನಿವಾಸ ನಗರ ಎಂಬಲ್ಲಿ ಸುಂದರಿ ಬಾಬು ಅವರ ಮನೆ ಛಾವಣಿಗೆ ಹಾನಿಯಾಗಿದ್ದು, ಗ್ರಾಪಂ ವತಿಯಿಂದ ತಾತ್ಕಾಲಿಕವಾಗಿ ಟರ್ಪಾಲ್ ವ್ಯವಸ್ಥೆ ಮಾಡಲಾಗಿದೆ. ಕೊಯಿಲ ಗ್ರಾಮದ ಕೈತ್ರೋಡಿಯಲ್ಲಿ ಲೀಲಾ ಅಣ್ಣಪ್ಪ ಗೌಡ ಎಂಬುವರ ಮನೆಗೆ ಹಾನಿಯಾಗಿದೆ. ಮೇರಮಜಲು ಗ್ರಾಮದ ಭವಾನಿ ಆನಂದ ಅವರ ಮನೆ ಮೇಲೆ ಮರ ಬಿದ್ದು ಹೆಂಚುಗಳಿಗೆ ಹಾನಿಯಾಗಿದೆ. ಮಾಣಿಲ ಗ್ರಾಮದ ಓಟೆಪಡ್ಪು ಸೂರ್ಯನಾರಾಯಣ ಎಂಬುವರ ಮನೆ ಕೊಟ್ಟಿಗೆಯ ಹಿಂಭಾಗ ಗುಡ್ಡ ಕುಸಿದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net